ಉಚಿತ ನೇತ್ರ ಚಿಕಿತ್ಸಾ ಶಿಬಿರ

Photo By:  Mithuna Kodethoor 

ಕಿನ್ನಿಗೋಳಿ: ವಿವೇಕ ಜಾಗೃತ ಬಳಗ ಮೂಲ್ಕಿ ಮತ್ತು ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಆರೋಗ್ಯ ಕೇಂದ್ರದಲ್ಲಿ ನಡೆಯಿತು. 123 ಮಂದಿ ಭಾಗವಹಿಸಿದ್ದ ಈ ಶಿಬಿರದಲ್ಲಿ 23 ಮಂದಿಗೆ ಶಸ್ತ್ರಚಿಕಿತ್ಸೆ, 43 ಮಂದಿಗೆ ಕನ್ನಡಕ ವಿತರಣೆ ನಡೆಯಿತು. ವೆನ್ ಲಾಕ್ ಸಂಚಾರಿ ನೇತ್ರ ಚಿಕಿತ್ಸಾ ಘಟಕದ ವೈದ್ಯ ಡಾ.ಭವಾನಿಶಂಕರ್, ಡಾ.ಚಂದ್ರಪ್ರಭಾ, ಜಿ.ಪಂ.ಸದಸ್ಯ ಈಶ್ವರ್, ಮೆನ್ನಬೆಟು ಗ್ರಾ.ಪಂ.ಅಧ್ಯಕ್ಷೆ ಶೈಲಾ, ಅಲೆವೂರು ಮುತ್ತಯ್ಯ ಸಾಲ್ಯಾನ್, ಹರಿಶ್ಚಂದ್ರ ರಾವ್ ಮತ್ತಿತರರಿದ್ದರು.

Comments

comments

Leave a Reply

Read previous post:
ಮಳೆಗಾಲ

ದಿನವಿಡೀ ಮುಸುಕಿದ ಕಪ್ಪು ಕಾರ್ಮೋಡ, ನಡು ನಡುವೆ ಬಂದು ಹೋಗುವ ಸೊರ್ಯನ ಬಿಸಿಲು, ಅರಿವಿಗೆ ಬಾರದ ತಂಪನೆಯ ವಾತವರಣ . ಛಟಿಲ್ ಎನ್ನುವ ಮಿಂಚು, ಗುಡುಗುಟ್ಟುವ ಗುಡುಗು, ಈ...

Close