ಮಳೆಗಾಲ

ದಿನವಿಡೀ ಮುಸುಕಿದ ಕಪ್ಪು ಕಾರ್ಮೋಡ, ನಡು ನಡುವೆ ಬಂದು ಹೋಗುವ ಸೊರ್ಯನ ಬಿಸಿಲು, ಅರಿವಿಗೆ ಬಾರದ ತಂಪನೆಯ ವಾತವರಣ . ಛಟಿಲ್ ಎನ್ನುವ ಮಿಂಚು, ಗುಡುಗುಟ್ಟುವ ಗುಡುಗು, ಈ ಎಲ್ಲವುಗಳ ನಡುವೆ ನಾಗರಿಕರ ಭ್ಯೆಗುಳ ಪ್ರೆಶ್ನೆಯಾಗೆ ಉಳಿದಿದೆ. ಪರಿಸರಕ್ಕೆ ಗೌರವ ನೀಡುವ ಭಾವನೆ ಇಲ್ಲದ ಅನಾಗರಿಕ ಮಾನವ???. ಮಳೆಗಾಲದ ಸಮಯ ದಾರಿ ತಪ್ಪಿದೆಯೇ? ಜನರಿಗೆ ಬುದ್ದಿ ಕಲಿಸಲು ‘ ವರುಣ ದೇವ’ ತಕ್ಕ ಶಾಸ್ತಿ ಮಾಡಲು ಹೊರಟಿರಬಹುದೇ? ನಿಸರ್ಗದ ಪ್ರತಿಯೊಂದು ನೆಡೆಯೂ ನಮಗೆ ಪಾಠ ಹೇಳುತ್ತಲೆ ಬಂದಿವೆ. ನಿಸರ್ಗದ ಮಾತಿಗೆ ಕಿವಿಗೊಡುವ ಬುದ್ದಿಯನ್ನು ಇನ್ನಾದರೂ ನಮಗೆ ಬರಲಿ. ಕಳೆದ 3 ದಿನಗಳಿಂದ ಮುಂಗಾರು ಚುರುಕಾಗುವ ಲಕ್ಷಣಗಳು ಕಂಡು ಬರುತ್ತಿದೆ.
ಹಲವಾರು ವರ್ಷಗಳ ಹಿಂದೆ ಹಗಲು-ರಾತ್ರಿ ಕುಂಭದ್ರೋಣ ಮಳೆ ಸುರಿದು ಜನ, ದನ, ಮನೆ ನೀರು ಪಾಲಾಗುವ ಸುದ್ದಿ, ಎಲ್ಲಿವರೆಗೂ ನೆಡೆದರೂ ನೀರು, ನೀರು.., ಎಂದು ಪರಿತಪಿಸುತ್ತಿದ್ದ ಕರಾವಳಿ ಭಾಗದ ಜನ. ಬೆಳೆ ಕ್ಯೆಗೆ ಬಂತು ಎನ್ನುವಷ್ಟರಲ್ಲಿ ಮಳೆಯ ಆರ್ಭಟಕ್ಕೆ ಕೃಷಿಕರ ಮುಖ ಕಪ್ಪಿಡುತ್ತದೆ. ಊರಿನ ತಗ್ಗು ಪ್ರದೇಶಗಳಲ್ಲಿ ಎದೆಮಟ್ಟಕ್ಕೊ ನೀರು ಮೇಲೆರುತ್ತದೆ. ಒಟ್ಟಿನಲ್ಲಿ ಜನರ ಈ ಪರಿಸ್ಥಿತಿಗೆ ಅನೇಕ ಕಾರಣಗಳ ನಡುವೆ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಆಸ್ತಿತ್ವಕ್ಕೆ ಬಾರದೇ ಇರುವದು, ಹಾಗೂ ಅದು ಇದ್ದರೊ ಸಹ ನಿರ್ವಹಣೆ ಮಾಡಲು ಅನುಭವ, ಸೌಕರ್ಯ, ಅದಕ್ಕೂ ಮಿಗಿಲಾಗಿ ನಿರ್ವಹಣಾ ತಂಡಕ್ಕೆ ಬೇಕಾದ ಇಚ್ಚಾಶಕ್ತಿ ಇಲ್ಲದೇ ಇರುವದೇ ಕಾರಣವಾಗಿದೆ. ಎಲ್ಲ ವಿಚಾರದಲ್ಲೂ ರಾಜಕೀಯ ಮಾಡುವ ರಾಜಕಾರಣಿಗಳು ಇಂತಹ ಪ್ರಕೃತಿ ವಿಕೋಪದ ಸಂಧರ್ಭದಲ್ಲೂ ರಾಜಕೀಯ ಮಾಡುತ್ತಾ ಜನರನ್ನು ಒಂದು ತುತ್ತು ಕೂಳಿಗೆ ಪರದಾಡುವಂತೆ ಮಾಡುತ್ತಿರುವುದು ನಮ್ಮ ಜೀವನದ ದುರಂತವೆ ಸರಿ. ಮಳೆ ಎಂದರೆ ಬೆಚ್ಚಿ ಬೀಳುವ ಪರಿಸ್ಥಿತಿ ಇಂದು ಬಂದಿದೆ.
ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ! ಮೇಘರಾಯನ ಕೊಡುಗೆಯ ಹೂ ತಟ್ಟೆಯಲ್ಲಿ ಸವಿಯುವ ಆನಂದವೇ ಬೇರೆಯೇ! ಅಲ್ಲವೇ?
ಮ‌ಳೆಗಾಲ‌ ಅಂದ್ರೆ ಜ್ಞಾಪಕ ಬ‌ರೋ ಮ‌ತ್ತೊಂದು ವಿಷ‌ಯ‌ ಅಂದ್ರೆ ಹ‌ಲ‌ಸಿನ‌ ಬೀಜ, ಹಲಸಿನ ಹಪ್ಪಳ, ಗೆಣಸಿನ ಹಪ್ಪಳ ಮತ್ತು ಕೆಲವು ಹಳ್ಳಿ ತಿಂಡಿ- ತಿನಸುಗಳು. ಮ‌ಳೆ ಬ‌ರೋಕೆ ಸ್ವಲ್ಪ ದಿನ‌ಗ‌ಳ‌ ಹಿಂದೆ ತಿಂದ‌ ಹ‌ಲ‌ಸಿನ‌ಹ‌ಣ್ಣಿನ‌ಲ್ಲಿ ಬೀಜಗ‌ಳ‌ನ್ನು ಬೇರೆ ಮಾಡಿ ಬಿಸಿಲ‌ಲ್ಲಿ ಒಣ‌ಗಿಸಿಟ್ಟು ನಂತರ ಅವು ಮ‌ಳೆಗಾಲ‌ಕ್ಕೆ ಉಪ‌ಯೋಗ‌ ಮಾಡುತ್ತಾರೆ. ಕೆಂಡ‌ಕ್ಕೆ ಹಾಕಿ ಬೇಯಿಸ್ಕೊಂಡು ಆ ಮಳೆ, ಚಳಿಯಲ್ಲಿ ಅಡುಗೆ ಮನೆಯಲ್ಲಿ ತಿನ್ನುತ್ತಾ ಕುಳಿತರೆ ಅದೆಷ್ಟು ಹೊಟ್ಟೆಗೆ ಹೋಗುತ್ತಿದ್ದವು.
ಹಿಂದೆ ಮ‌ನೆ ಕ‌ಡಾಯಿಗೆ ಮ‌ಳೆಗಾಲ‌ದ‌ ನೀರಿಗೆ ಪ್ರಾಮುಖ್ಯತೆಯಾಗಿತ್ತು. ಮ‌ಳೆಯ‌ಲ್ಲಿ ನೆನೆದು ಯಾರು ಬಾವಿಯಿಂದ ನೀರು ತ‌ರ್ತಾರೆ???. ಹೆಂಚಿನ‌ ಕೆಳ‌ಗೆ ಕೊಡ‌ ಇಟ್ಟು ಆ ಕೊಡ‌ಕ್ಕೆ ಬೀಳೋ ನೀರು ನೋಡೋದೇ ಪ‌ರ‌ಮಾನ‌ಂದ‌, ತುಂಬಿದ‌ ತ‌ಕ್ಷಣ‌ ಬ‌ಚ್ಚಲುಮ‌ನೆಯ‌ ಕ‌ಡಾಯ‌ಕ್ಕೆ ಹೋಗಿ ಹಾಕುತ್ತಿದ್ದರು. ಒಂದೊಂದ್ಸಲ‌ ನೀರು ತ‌ಗೊಂಡು ಹೋಗೋವಾಗ‌ ಚಾವ‌ಡಿ ಅಥ‌ವಾ ನ‌ಡುಮ‌ನೆಯ‌ಲ್ಲಿ ಜಾರಿಬಿದ್ದು ಕೈ ಕಾಲು ಮುರಿದುಕೊಂಡ‌ ಪ್ರಸ‌ಂಗ‌ಗ‌ಳು, ಕೊಡ ಒಡೆದ ಪ್ರಸ‌ಂಗ‌ಗ‌ಳು ಆಗಿದ್ದುಂಟು.

Comments

comments

Leave a Reply