ಹಳೆಯಂಗಡಿ ಪಂಚಾಯತ್ ಅಧ್ಯಕ್ಷನ ಅವಿಶ್ವಾಸ ನಿರ್ಣಯಕ್ಕೆ ಗೆಲುವು

Photo by Narendra Kerekadu
ಮುಲ್ಕಿ : ಪ್ರತಿಭಟನೆ, ಲೋಕಾಯುಕ್ತ ತನಿಖೆ, ಗ್ರಾಮ ಸಭೆಯಲ್ಲಿ ಗಲಭೆ, ಸದಸ್ಯರ ಹಕ್ಕು ಚ್ಯುತಿ ಮಂಡನೆ, ಪಕ್ಷಾಂತರ, ನೀರಿಗಾಗಿ ಮುತ್ತಿಗೆ ಹೀಗೆ ಮಂಗಳೂರು ತಾಲ್ಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ಹಗರಣಗಳ ಸುಳಿಯಲ್ಲಿ ಸದಾ ಸುದ್ದಿಯಲ್ಲಿದ್ದು ಈಗ ಹೊಸ ಸೇರ್ಪಡೆಯಾಗಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಕಾಂಗ್ರೇಸ್ ಮತ್ತು ಬಿಜೆಪಿ ಸದಸ್ಯರು ಒಟ್ಟಾಗಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಗೊಳಿಸಿದ ಘಟನೆ ಬುಧವಾರ ನಡೆದಿದೆ.
ಮಂಗಳೂರಿನ ಸಹಾಯಕ ಕಮಿಷನರ್ ಡಾ.ವೆಂಕಟೇಶ್ ಎಮ್.ವಿ.ಯವರು ಸದಸ್ಯರ ಅವಿಶ್ವಾಸ ಗೊತ್ತುವಳಿಯ ನಡಾವಳಿಯನ್ನು ಪಂಚಾಯತ್ ಕಚೇರಿಯಲ್ಲಿ ನಡೆಸಿದಾಗ ಒಟ್ಟು ೨೦ ಸದಸ್ಯರಲ್ಲಿ ೧೯ ಸದಸ್ಯರು ಅವಿಶ್ವಾಸವನ್ನು ಬೆಂಬಲಿಸಿದ್ದರಿಂದ ಅಧ್ಯಕ್ಷ ತನ್ನ ಸ್ಥಾನದಿಂದ ಹೊರ ನಡೆದರು.
ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ವಿರುದ್ಧ ಕಳೆದ ಒಂದೂವರೆ ವರ್ಷದಿಂದ ಹೋರಾಟ ನಡೆಸುತ್ತಿದ್ದು ಈ ಹಿಂದೆಯೂ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಪ್ರಯತ್ನ ನಡೆಸಿದ್ದರು ಆದರೆ ಇಂದು ಸ್ವತಹ ಆಡಳಿತ ಪಕ್ಷದ ಸದಸ್ಯರೇ ಕೈ ಹಿಡಿದಾಗ ಅನಿವಾರ್ಯವಾಗಿ ಅಧ್ಯಕ್ಷರು ಸ್ಥಾನವನ್ನು ಕಳೆದು ಕೊಂಡಿದ್ದಾರೆ.
ಸಹಾಯಕ ಕಮಿಷನರ್ ವೆಂಕಟೇಶ್ ಮಾದ್ಯಮದೊಮದಿಗೆ ಮಾತನಾಡಿ ಅಧ್ಯಕ್ಷರ ಅವಿಶ್ವಾಸ ನಿರ್ಣಯಕ್ಕೆ ೧೯ ಜನರ ಬೆಂಬಲ ಇರುವುದರಿಂದ ಅಧ್ಯಕ್ಷ ಸ್ಥಾನ ಖಾಲಿಯಾಗಿದ್ದು ಅಧ್ಯಕ್ಷರಾಗಿದ್ದವರು ಗ್ರಾಮ ಪಂಚಾಯತ್‌ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು, ಬೀಗದ ಕೀಗಳನ್ನು, ಎಲ್ಲಾ ಸೊತ್ತುಗಳ ಸಹಿತ ಅಭಿವೃದ್ದಿ ಅಧಿಕಾರಿಗೆ ಹಸ್ತಾಂತರ ಮಾಡಬೇಕು, ಮುಂದಿನ ಒಂದು ತಿಂಗಳಿನಲ್ಲಿ ಅಧ್ಯಕ್ಷ ಹುದ್ದೆಗೆ ಆಂತರಿಕ ಮರು ಚುನಾವಣೆ ನಡೆಯಲಿದ್ದು ಇದನ್ನು ತಹಶೀಲ್ದಾರರು ನಿರ್ಧರಿಸುತ್ತಾರೆ. ಆವರೆಗೆ ಪಂಚಾಯತ್ ಆಡಳಿತ ನಡೆಸಲು ಉಪಾಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ ಎಂದರು.
ಸಹಾಯಕ ಕಮಿಷನರ್ ರೊಂದಿಗೆ ಆಪ್ತ ಸಹಾಯಕ ಶಂಕರ ಸುವರ್ಣ, ಚುನಾವಣಾ ಅಧಿಕಾರಿ ಗುಂಡೂರಾವ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಲೋಕನಾಥ್ ಇದ್ದರು ಉಪಾಧ್ಯಕ್ಷೆ ಮಮತಾ ಮೆಂಡನ್ ಅಧಿಕಾರವನ್ನು ಪಡೆದುಕೊಂಡರು ಎಲ್ಲಾ ಸದಸ್ಯರು ಅಭಿನಂದಿಸಿದರು.
ಭ್ರಷ್ಟಾಚಾರಕ್ಕೆ ಆಸ್ಪದ ನೀಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಅಧ್ಯಕ್ಷರ ವಿರುದ್ಧ ವಿರೋಧ ಪಕ್ಷದ ಸದಸ್ಯರು ಹೋರಾಟ ನಡೆಸಿದ್ದರೆ ಸ್ವತಹ ಆಡಳಿತ ಸದಸ್ಯರ ವಿರುದ್ಧ ಅಧ್ಯಕ್ಷರು ಸುಳ್ಳು ಅಪವಾದವನ್ನು ಮಾಡಿದ್ದಾರೆ ಎಂದು ಪಕ್ಷದ ಕಾರ್ಯರ್ತರ ದೂರಾಗಿತ್ತು. ಇದರ ಬಗ್ಗೆ ಅನೇಕ ಬಾರಿ ಎಚ್ಚರಿಕೆಯನ್ನು ನೀಡಿದ್ದರು ನಡವಳಿಕೆಯನ್ನು ತಿದ್ದಿ ಕೊಳ್ಳದಿದ್ದರಿಂದ ಆರಂಭದಲ್ಲಿ ರಾಜಿನಾಮೆಯನ್ನು ಪಕ್ಷದ ಸಭೆಯಲ್ಲಿ ಕೇಳಿದ್ದೆವು ಆದರೂ ಉದ್ಧಟತನ ತೋರಿದ್ದರಿಂದ ಜನರ ವಿಶ್ವಾಸಕ್ಕೆ ಧಕ್ಕೆ ಯಾಗಬಾರದು ಎಂದು ವಿರೋಧ ಪಕ್ಷದೊಂದಿಗೆ ಅವಿಶ್ವಾಸಕ್ಕೆ ಬೆಂಬಲ ಸೂಚಿಸಿದೆವು ಎಂದು ಬಿಜೆಪಿ ಹಿರಿಯ ನಾಯಕ ಸತೀಶ್ ಭಟ್ ಕೊಳುವೈಲು ಸಮರ್ಥಿಸಿಕೊಂಡಿದ್ದಾರೆ.
ಕಳೆದ ಬಾರಿ ಜನರು ಕಾಂಗ್ರೇಸನ್ನು ದೂರಿದ್ದರಿಂದ ಬಿಜೆಪಿ ಇಲ್ಲಿ ಭದ್ರವಾಗಿ ಬೆಳೆದಿದೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಚಲಾಯಿಸುವ ಅಸಮರ್ಥರಿಗೆ ಪಕ್ಷವು ಎಂದಿಗೂ ತಲೆ ಬಾಗುವುದಿಲ್ಲ, ಕಾರ್ಯಕರ್ತರು, ನಿಷ್ಠಾವಂತ ಸದಸ್ಯರ ಮಾತಿಗೆ ಬೆಲೆ ನೀಡಿದ್ದೇವೆ ಜನರಿಗೆ ಬೇಡವಾದ ನಾಯಕ ಪಕ್ಷಕ್ಕೂ ಬೇಡ ಎನ್ನುವ ಸಂದೇಶ ಈ ಅಧಿಕಾರ ಪದಚ್ಯುತಿಗೆ ನೇರ ಕಾರಣ ಆಗಿದೆ ಎಂದು ಹೇಳಿದರು.
ಕಾಂಗ್ರೇಸ್ಸಿನ ಹಾಲಿ ಸದಸ್ಯ ವಸಂತ ಬೆರ್ನಾರ್ಡ್ ಮಾಧ್ಯಮ ದೊಂದಿಗೆ ಮಾತನಾಡಿ ಕಳೆದ ಒಂದೂವರೆ ವರ್ಷದಲ್ಲಿನ ಹೋರಾಟ ಇಂದು ತಾರ್ಕಿಕ ಹಂತಕ್ಕೆ ಬಂದಿದೆ, ಮುಂದಿನ ನವೆಂಬರ್ ತಿಂಗಳಿನಲ್ಲಿ ಪ್ರಥಮ ಅವಧಿ ಕೊನೆಗೊಳ್ಳುವುದರಿಮದ ಕೇವಲ ಐದು ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬೇಕೆ ಬೇಡವೆ ಎಂದು ಪಕ್ಷದ ವರಿಷ್ಠರು ಹಾಗೂ ಶಾಸಕ ಅಭಯಚಂದ್ರ ಜೈನ್ ನಿರ್ಧರಿಸುತ್ತಾರೆ ಎಂದರು ಪದಚ್ಯುತ ಮಹಾಬಲ ಸಾಲ್ಯಾನ್ ಬಿಜೆಪಿ ಬಿಟ್ಟು ಬಂದು ಕಾಂಗ್ರೇಸ್ ಸೇರಲು ಅವಕಾಶ ನಿಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷರಾಗಿ ರಾಜೇಶ್ ಕೆಂಚನಕೆರೆ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಾಕ್ಟ್ ಸಂಸ್ಥೆಯ 2012-13ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಕೆಂಚನಕೆರೆ ಆಯ್ಕೆಯಾಗಿದ್ದಾರೆ. ರಂಗಕಲಾವಿದರಾಗಿರುವ ಇವರು ಪರಿಮಳ ಕ್ಯಾಟರರ್ಸ್‌ನ ಮಾಲಕರಾಗಿದ್ದಾರೆ. ಪದಾಧಿಕಾರಿಗಳು: ನಿಕಟಪೂರ್ವಧ್ಯಕ್ಷ  : ಗಣೇಶ್ ಕಾಮತ್...

Close