ಕಿನ್ನಿಗೋಳಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮೀನಮೇಷ

Photo By:  Sharath Shetty Kinnigoli
ಕಿನ್ನಿಗೋಳಿ:  ಕರಾವಳಿ ಅಭಿವ್ರಧ್ದಿ ಪ್ರಾಧಿಕಾರದ ಅನುದಾನದಲ್ಲಿ ಸುಮಾರು 72 ಲಕ್ಷ ರೂ ವೆಚ್ಚದಲ್ಲಿ ಕಳೆದ ಜನವರಿ 4 ರಂದು ರಾಜ್ಯದ ಮುಖ್ಯಮಂತ್ರಿ ದಿ ವಿ ಸದಾನಂದ ಗೌಡರಿಂದ ಶಿಲಾನ್ಯಾಸ ನಡೆಸಲ್ಪಟ್ಟು 6 ತಿಂಗಳುಗಳಲ್ಲಿ ಉದ್ಘಾಟನೆಗೊಳ್ಳಬೇಕಾಗಿದ್ದ ಕಿನ್ನಿಗೋಳಿ ಮಾರುಕಟ್ಟೆ ನಿರ್ಮಾಣಕ್ಕೆ ಮೀನಮೇಷ ನಡೆಯುತ್ತಿದೆ.ಜಿಲ್ಲೆಯಲ್ಲಿಯೇ ಅತ್ಯಧಿಕ ಆದಾಯ ಹೊಂದಿರುವ ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಿನ್ನಿಗೋಳಿ ಗ್ರಾಮಪಂಚಾಯತ್‌ನ ವ್ಯಾಪ್ತಿಯ ಮಾರ್ಕೆಟ್ ಅವ್ಯವಸ್ಥೆಯ ಆಗರವಾಗಿದ್ದು ಈ ಬಗ್ಗೆ ಸ್ಪಂದಿಸಿದ ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಬಿ. ನಾಗರಾಜ್ ಶೆಟ್ಟಿ ತಮ್ಮ ಪ್ರಾಧಿಕಾರದ ಅನುದಾನದಿಂದ ನೂತನ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸುಮಾರು 72 ಲಕ್ಷ ಮಂಜೂರು ಮಾಡಿದ್ದರು, ಇದರಂತೆ ಜನವರಿ 4ರಂದು ರಾಜ್ಯದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪಂಚಾಯತ್ ಸದಸ್ಯರಿಂದ ಹಿಡಿದು ಲೋಕ ಸಭಾ ಸದಸ್ಯರ ವರೆಗೆ ಸೇರಿಕೊಂಡು ಯೋಜನೆಗೆ ಶಿಲಾನ್ಯಾಸ ನಡೆಸಿದ್ದರು. ಆದರೆ ಕೆಲವೊಂದು ಕಾರಣಗಳಿಂದಾಗಿ ಆರು ತಿಂಗಳೊಳಗೆ ಉದ್ಘಾಟನೆಗೊಳ್ಳ ಬೇಕಾಗಿದ್ದ ಮಾರ್ಕೆಟ್ ನಿರ್ಮಾಣ ನೆನೆಗುದಿಗೆ ಬಿದ್ದಿದ್ದು ಮೀನು ಮಾರಾಟಗಾರರು ಮಳೆ ಚಳಿಯ ನಡುವೆ ಪರದಾಡುವಂತಾಗಿದೆ. ಇದೇ ಸಂದರ್ಭದಲ್ಲಿ ಏಕಕಾಲದಲ್ಲಿ ಶಿಲಾನ್ಯಾಸಗೊಂಡ ಬಂಟ್ವಾಳ ಮೀನು ಮಾರುಕಟ್ಟೆಯ ನಿರ್ಮಾಣ ಜಾಗದ ತೊಂದರೆಯಿಂದಾಗಿ ನಿರ್ಮಾಣಗೊಂಡಿಲ್ಲವಾದರೂ ಕಿನ್ನಿಗೋಳಿಯಲ್ಲಿ ಇದ್ಯಾವುದೇ ಸಮಸ್ಯೆಗಳಿಲ್ಲದ್ದಿದ್ದರೂ ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ಈ ಪರಿಸ್ಥಿತಿ ಬಂದಿದೆ. ಅನುದಾನ ನೀಡುತ್ತಿರುವ ಪ್ರಾಧಿಕಾರ ಮತ್ತು ಸ್ಥಳೀಯ ಪಂಚಾಯತ್ ಆಡಳಿತ ಸಮರ್ಪಕವಾಗಿ ಸ್ಪಂಧಿಸುತ್ತಿದ್ದರೂ ಯೋಜನೆಯ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ಮೀನು ಮಾರಾಟಗಾರರ ಅಳಲು ಮುಗಿಲು ಮುಟ್ಟಿದೆ. ಕೂಡಲೇ ಕಾಮಗಾರಿ ಕೈಗೆತ್ತಿ ಕೊಂಡು ಯೋಜನೆ ಮುಗಿಸದಿದ್ದಲ್ಲಿ ರಸ್ತೆ ಬದಿಯಲ್ಲಿ ಮೀನು ಮಾರಾಟ ನಡೆಸುವುದಾಗಿ ಮೀನು ಮಾರಾಟಗಾರರು ಬೆದರಿಕೆಯೊಡ್ಡಿದ್ದಾರೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಯೋಜನೆಯ ರೂವಾರಿ ಬಿ.ನಾಗರಾಜ ಶೆಟ್ಟಿ ಮಾತನಾಡಿ,೬ ತಿಂಗಳೊಳಗೆ ಕಿನ್ನಿಗೋಳಿಗೆ ಸುಸಜ್ಜಿತ ಮಾರುಕಟ್ಟೆ ನೀಡುವುದಾಗಿ ತಿಳಿಸಿದ್ದರಲ್ಲದೆ,ವಿಶೇಷ ಮೀನು ಶೇಖರಣಾ ಘಟಕ ಸಹಿತ ವಿವಿಧ ಯೋಜನೆಗಳನ್ನು ಘೋಷಿಸಿದ್ದರು. ಇದೀಗ ಕಿನ್ನಿಗೋಳಿ ಪಂಚಾಯತ್ ಆಡಳಿತ ಹಾಗೂ ಮೀನು ಮಾರಾಟಗಾರರಿಗೆ ಉತ್ತರಿಸಿ,ಕೂಡಲೇ ಕಾಮಗಾರಿ ಮುಗಿಸದಿದ್ದರೆ,ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಲಾಗುವುದೆಂದಿದ್ದಾರೆ.
ಕೆಲವೊಂದು ವಿದ್ಯುತ್ ಕಂಬಗಳ ಸ್ಥಳಾಂತರಗಳ ವಿಳಂಬದಿಂದಾಗಿ ಕಾಮಗಾರಿ ವಿಳಂಬವಾಗಿದೆ ನಿಜ,ಇದೀಗ ಪಂಚಾಯತ್ ಹಾಗು ಮೆಸ್ಕಾಂನ ಸಹಕಾರದಿಂದ ಕಂಬಗಳು ಸ್ಥಳಾಂತರಗೊಂಡಿದ್ದು,ಕೆಲವೇ ದಿನಗಳಲ್ಲಿ ಸುಸಜ್ಜಿತ ಮಾರುಕಟ್ಟೆ ತಲೆಯೆತ್ತಲಿದೆಯೆಂದು ಗುತ್ತಿಗೆದಾರ ಸುರೇಶ್ ತಿಳಿಸಿದ್ದಾರೆ.ಇದಕ್ಕೆ ಪೂರಕವೆಂಬಂತೆ ಬುಧವಾರ ಸಿಮೆಂಟು ಸಂಗ್ರಹಣೆಗಾಗಿ ಮಾರ್ಕೆಟಿನ ಶೌಚಾಲಯವನ್ನು ತೆಗೆದು ಗೊಡೌನ್ ನಿರ್ಮಿಸಲಾಗಿದೆ. ಇದರಿಂದಲೂ ಮಾರ್ಕೆಟಿನ ವ್ಯಾಪಾರಿಗಳಿಗೆ ಶೌಚಾಲಯದ ಸಮಸ್ಯೆ ಎದುರಾಗಿದೆ. ಕೂಡಲೇ ಕಾಮಗಾರಿ ಮುಗಿಯದಿದ್ದಲ್ಲಿ ಅದರಲ್ಲೂ ಮಳೆಗಾಲದಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರು ವಿಪರೀತ ತೊಂದರೆ ಎದುರಿಸಬೇಕಾಗಿದ್ದು ಇದಕ್ಕೆ ಸಂಬಂಧ ಪಟ್ಟವರನ್ನು ಶಪಿಸಬೇಕಾದಿತು ಮತ್ತು ಪ್ರತಿಭಟಿಸಬೇಕಾದಿತು.
ಕಳೆದ ಆರು ತಿಂಗಳುಗಳಿಂದ ಬಿಸಿಲನ್ನೆದುರಿಸುತ್ತಿದ್ದ ಮೀನು ಮಾರಾಟಗಾರರು ಇದೀಗ ಮಳೆ ಚಳಿಯನ್ನು ಎದುರಿಸುತ್ತಿದ್ದು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.

  • ನಮ್ಮ ಪ್ರಯತ್ನ ನಡೆದಿದೆ, ಪ್ರಾಧಿಕಾರ ಸ್ಪಂದಿಸಿದೆ, ಮೀನುಗಾರರಿಗೆ ತೊಂದರೆಯಾಗದ ರೀತಿಯಲ್ಲಿ ಕೂಡಲೇ ಕಾಮಗಾರಿ ಪೂರ್ಣಗೊಳ್ಳಲಿದೆ.             ……………..ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷರು.
  • ಕೆಲವೊಂದು ವಿದ್ಯುತ್ ಕಂಬಗಳ ಸ್ಥಳಾಂತರಗಳ ವಿಳಂಬದಿಂದಾಗಿ ಕಾಮಗಾರಿ ವಿಳಂಬವಾಗಿದೆ ನಿಜ,ಇದೀಗ ಪಂಚಾಯತ್ ಹಾಗು ಮೆಸ್ಕಾಂನ ಸಹಕಾರದಿಂದ ಕಂಬಗಳು ಸ್ಥಳಾಂತರಗೊಂಡಿದ್ದು,ಕೆಲವೇ ದಿನಗಳಲ್ಲಿ ಸುಸಜ್ಜಿತ ಮಾರುಕಟ್ಟೆ ತಲೆಯೆತ್ತಲಿದೆ.                  ……………..ಗುತ್ತಿಗೆದಾರ ಸುರೇಶ್.

Comments

comments

Leave a Reply

Read previous post:
ಮೆನ್ನಬೆಟ್ಟು ಗ್ರಾಮ ಸಭೆ

ಕಿನ್ನಿಗೋಳಿ : ನಡುಗೋಡು ಗ್ರಾಮದಲ್ಲಿ ಸರಕಾರಿ ಸ್ಥಳದಲ್ಲಿ ಮನೆ ನಿವೇಶನ ನೀಡಲು ಯೋಜನೆ ಸಿದ್ಧವಾಗಿದ್ದು, ಪಂಚಾಯತ್‌ಗೆ ಬಂದಿರುವ 480 ಅರ್ಜಿಗಳಲ್ಲಿ ಯೋಗ್ಯ ಮತ್ತು ಅರ್ಹ ನಿವೇಶನ ರಹಿತರಿಗೆ...

Close