ಬಳಕುಂಜೆಯಲ್ಲಿ ಧಾರ್ಮಿಕ ಸಭೆ

Photo By: Ramesh Ulepady

ಬಳಕುಂಜೆ: ಬಳಕುಂಜೆಯ  ಶ್ರೀ ವಿಠೋಬ ರಖುಮಾಯಿ ಭಜನಾ ಮಂದಿರದ ಬ್ರಹ್ಮಕಲಶೋತ್ಸವಾಂಗ ಧಾರ್ಮಿಕ ಸಭೆ ಶುಕ್ರವಾರ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ” ಭಕ್ತಿಯಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯ, ಅಹಂಕಾರದ ಭಕ್ತಿ ಸಲ್ಲದು” ಎಂದರು.
ಮಂದಿರದ ಪ್ರಧಾನ ಅರ್ಚಕರಾದ ದೇಂದಡ್ಕ ರಾಮಕೃಷ್ಣ ಭಟ್, ಕೊಲಕಾಡಿ ವಾದಿರಾಜ ಉಪಾದ್ಯಾಯ ಶುಭ ಹಾರೈಸಿದರು. ಕಟೀಲು ಕಾಲೇಜು ಪ್ರಾಚಾರ್ಯ ಭಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಸಾಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ.ಅಭಯಚಂದರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಬಳಕುಂಜೆ ಚರ್ಚ್ ಧರ್ಮಗುರು ರೇ| ಫಾ| ಹೆಲರಿ ಲೋಬೊ, ಕರ್ನಿರೆ ಮಸೀದಿಯ ಖತೀಬರಾದ ಪಿ.ಪಿ. ಅಹಮದ್ ಸಖಾಫಿ ಮುಖ್ಯ ಅತಿಥಿಯಾಗಿದ್ದು ಬಳಕುಂಜೆ ಗುತ್ತು ಲಿಲೇಂದ್ರ ಶೆಟ್ಟಿ ಬಳಕುಂಜೆ ಭಂಡಸಾಲೆ ದಯಾಶಂಕರ ಶೆಟ್ಟಿ, ಬಳಕುಂಜೆ ಚೆನ್ನಯ ಬೆನ್ನಿ ವಿರಾರ್ ಶಂಕರ್ ಶೆಟ್ಟಿ, ಕೋಟ್ನಾಯ ಗುತ್ತು ವನಜ ಶೆಟ್ಟಿ ವಿರಾರ್ ರವಿ ಶೆಟ್ಟಿ, ಸಮಝೀವ ಕೋಟ್ಯಾನ್. ಕೀರ್ತಿರಾಜ್ ಶೆಟ್ಟಿ ನೆಲ್ಸನ್ ಲೋಬೊ ಮತ್ತಿತರರಿದ್ದರು.
ಮಂದಿರದ ಅಧ್ಯಕ್ಷ ದಿನಕರ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ರಶ್ಮಿ ಆಚಾರ್ಯ ವಂದಿಸಿ, ನಾಗಭೂಷಣ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಬಳಕುಂಜೆ ಶ್ರೀ ವಿಠೋಬ ರಖುಮಾಯಿ ಭಜನಾ ಮಂದಿರದ ಬ್ರಹ್ಮಕಲಶೋತ್ಸವ

Photo By: Ramesh Ulepady ಬಳಕುಂಜೆ:  ಬಳಕುಂಜೆ ಶ್ರೀ ವಿಠೋಬ ರಖುಮಾಯಿ ಭಜನಾ ಮಂದಿರzಲ್ಲಿ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಗುರುವಾರ ನಡೆಯಿತು. ದೇಂದಡ್ಕ ರಾಮಕೃಷ್ಣ ಭಟ್...

Close