ಕಿನ್ನಿಗೋಳಿ ರೋಟರಿ ಶಾಲೆಯಲ್ಲಿ ಪಠ್ಯ ಪೂರಕ ಸಂಘಗಳ ಉದ್ಘಾಟನೆ

ಕಿನ್ನಿಗೋಳಿ : ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೧೭ ಪಠ್ಯ ಪೂರಕ ಸಂಘಗಳ ಉದ್ಘಾಟನೆ ಶನಿವಾರ ನಡೆಯಿತು. ಕೆದಿಂಜೆಯ ನಿವೃತ್ತ ಮುಖ್ಯೋಪಾದ್ಯಾಯ. ರೋಟರಿಯ ಮಾಜಿ ಸಹಾಯಕ ಗವರ್ನರ್ ತುಕರಾಮ್ ಶೆಟ್ಟಿ ಸಂಘಗಳನ್ನು ಉದ್ಘಾಟಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಪೂರಕ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ರೋಟರಿ ಅಧ್ಯಕ್ಷ ಜಯರಾಮ್ ಪೂಂಜಾ, ಶಾಲಾ ಕಾರ್ಯದರ್ಶಿ ಪಿ.ಸತೀಶ್ ರಾವ್, ಮುಖ್ಯೋಪಾದ್ಯಾಯ ಗಿಲ್ಬಟ್ ಡಿ’ಸೋಜಾ, ರೋಟರಿಯ ನಿಯೋಜಿತ ಅಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಯಶವಂತ ಎ, ಶಾಲಾ ನಾಯಕ ಶಯನ್ ಶೆಟ್ಟಿ, ಉಪ ನಾಯಕ ಅದಿತ್ಯ ಭಟ್ ಶಾಲಾ ನಾಯಕಿ ಸಮಿಕ್ಷಾ ಕಟೀಲು ಉಪ ನಾಯಕಿ ಅಕ್ಷಯಾ, ವಿವಿಧ ದಳಗಳ ಪ್ರಮುಖರಾದ ಶಶಾಂಕ್, ಜಾಕ್ಸನ್, ಕಾವ್ಯ, ಆಯಿಷಾ ಫಾಹಿಮಾ ಮತ್ತಿತರರಿದ್ದರು.
ವಿದ್ಯಾರ್ಥಿಗಳಾದ ಗಣೇಶ್ ರಾವ್ ಸ್ವಾಗತಿಸಿ, ಸದ್ವಿತಿ ಶೆಟ್ಟಿ ವಂದಿಸಿ, ಜೊವಿಟಾ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ವಿದೇಶದ ಸಮುದ್ರಕ್ಕೆ ಬಲಿಯಾದ ಕಿನ್ನಿಗೋಳಿ ಯುವಕ

Photo By Narendra Kerekadu ಕಿನ್ನಿಗೋಳಿ : ಕಳೆದ ಮೂರು ದಿನಗಳ ಹಿಂದೆಯಷ್ಟೇ ಕುಟುಂಬವನ್ನು ಬಿಟ್ಟು ಹಲವು ಕನಸುಗಳನ್ನು ಕಟ್ಟಿಕೊಂಡು ಉದ್ಯೋಗದ ನೆಲೆಗೆ ತೆರಳಿದ ಕಿನ್ನಿಗೋಳಿಯ ಸಂತೋಷ್ ಸಾಲ್ಯಾನ್...

Close