ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜಿಲ್ಲಿ ಚಟುವಟಿಕೆಗಳ ಉದ್ಘಾಟನೆ,ಕೃತಿ ಬಿಡುಗಡೆ.

Photo By Donald D Souza Kirem
ಕಿನ್ನಿಗೋಳಿ : ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜಿನಲ್ಲಿ 2012-13ನೇ ಸಾಲಿನ ಶೈಕ್ಷಣಿಕ ವರ್ಷದ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ ಶನಿವಾರ ನಡೆಯಿತು. ಕಾಲೇಜಿನ ಪ್ರಾಚಾರ‍್ಯ ರೆ| ಫಾ. ಜೆರೋಮ್ ಡಿ;ಸೋಜಾ ವಿದ್ಯಾರ್ಥಿ ಸಂಚಿಕೆ “ಸಿರಿಗಂಧ”ವನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಕಾಲೇಜಿನ ಇತಿಹಾಸ ಉಪನ್ಯಾಸಕ ಬಿ.ಸೀತಾರಾಮ ಭಟ್ಟರ ಚಾರಣಗಳ ಅವಲೋಕನಗಳ ಸಂಗ್ರಹಗಳ “ಹಬ್ಬಿದಾ ಮಲೆ ಮಧ್ಯದೊಳಗೆ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕೃತಿಗಾರ ಬಿ. ಸೀತಾರಾಮ ಭಟ್, ಸಾಂಸ್ಕೃತಿಕ ಸಮಿತಿ ಸಂಯೋಜಕ ಅನಂತ ಮೂಡಿತ್ತಾಯ, ಮಾನವಿಕದ ಎಹ್. ಎಸ್. ಗೋಪಾಲ್, ಇಕೋ ಕ್ಲಬ್‌ನ ಜ್ಯೋತಿ ಕಾಮತ್, ವಿಜ್ಞಾನ ಸಂಘದ ಲಾರೆನ್ಸ್ ಸಿಕ್ವೇರ, ಆಲ್ವೀನ್ ಮಿರಾಂದ, ಉಪಸ್ಥಿತರಿದ್ದು ಶರತ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಹಿಂದಿ ಅಧ್ಯಾಪಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಿ ಶಾಲೆಯಲ್ಲಿ ಪಠ್ಯ ಪೂರಕ ಸಂಘಗಳ ಉದ್ಘಾಟನೆ

ಕಿನ್ನಿಗೋಳಿ : ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೧೭ ಪಠ್ಯ ಪೂರಕ ಸಂಘಗಳ ಉದ್ಘಾಟನೆ ಶನಿವಾರ ನಡೆಯಿತು. ಕೆದಿಂಜೆಯ ನಿವೃತ್ತ ಮುಖ್ಯೋಪಾದ್ಯಾಯ. ರೋಟರಿಯ ಮಾಜಿ ಸಹಾಯಕ ಗವರ್ನರ್...

Close