ವಿದೇಶದ ಸಮುದ್ರಕ್ಕೆ ಬಲಿಯಾದ ಕಿನ್ನಿಗೋಳಿ ಯುವಕ

Photo By Narendra Kerekadu
ಕಿನ್ನಿಗೋಳಿ : ಕಳೆದ ಮೂರು ದಿನಗಳ ಹಿಂದೆಯಷ್ಟೇ ಕುಟುಂಬವನ್ನು ಬಿಟ್ಟು ಹಲವು ಕನಸುಗಳನ್ನು ಕಟ್ಟಿಕೊಂಡು ಉದ್ಯೋಗದ ನೆಲೆಗೆ ತೆರಳಿದ ಕಿನ್ನಿಗೋಳಿಯ ಸಂತೋಷ್ ಸಾಲ್ಯಾನ್ (26) ಮರಳಿ ಬರುವುದು ಮಾತ್ರ ಶವದ ಪೆಟ್ಟಿಗೆಯಲ್ಲಿ ಎಂದು ರೋಧಿಸುತ್ತಿರುವ ಆ ಕುಟುಂಬದ ಮನೆ ಈಗ ಅಕ್ಷ್ರರಶಃ ಸ್ಮಶಾನ ಸಧೃಶವಾಗಿದೆ.

 ಕಿನ್ನಿಗೋಳಿ ಕಾಪಿಕಾಡಿನ ನಿವಾಸಿ ಸಂತೋಷ್ ಸಾಲ್ಯಾನ್ ಕುವೈಟ್‌ನಲ್ಲಿ ತನ್ನ ಐದು ಜನ ಸ್ನೇಹಿತರೊಂದಿಗೆ ಫಹಾಹಿಲ್ ಪ್ರದೇಶದ ಮಹಬುಲ್ಲಾ ಬೀಚ್‌ಗೆ ಈಜಲು ಗುರುವಾರ ಸಂಜೆ 6.30ಕ್ಕೆ ತೆರಳಿದ್ದು ಅಲ್ಲಿ ಸಮುದ್ರದ ಸೆರೆಗೆ ಸಿಲುಕಿ ತನ್ನ ಮಿತ್ರ ಕಾವೂರು ನಿವಾಸಿ ಯೋಗೀಶ್ ಪೂಜಾರಿ(25)ರೊಂದಿಗೆ ನೀರಿಗೆ ಆಹುತಿಯಾಗಿದ್ದು ಶುಕ್ರವಾರ ಸುಮಾರು 15 ಕಿಲೋಮೀಟರ್ ದೂರದಲ್ಲಿ ಅಲ್ಲಿನ ಅಗ್ನಿಶಾಮಕ ದಳ ಮತ್ತು ಪೊಲೀಸರ ಕಾರ್ಯಾಚರಣೆಯಲ್ಲಿ ಶವ ಪತ್ತೆಯಾಗಿದೆ.

ಕಾಪಿಕಾಡಿನ ಸುಂದರ ಪೂಜಾರಿ ಮತ್ತು ಸೀತಾ ಸಾಲ್ಯಾನ್ ದಂಪತಿಯ ಐದು ಜನ ಮಕ್ಕಳಲ್ಲಿ ಸಂತೋಷ್ ಹಿರಿಯ ಮಗನಾಗಿದ್ದನು, ಕಿರಿಯ ಸಹೋದರ ಶರತ್.  3 ಹೆಣ್ಣುಮಕ್ಕಳು. ಶ್ರಮ ಜೀವಿಗಳ ಕುಟುಂಬವಾದ ಮದ್ಯಮವರ್ಗದ ಈ ಮನೆಯ ಸಂಪೂರ್ಣ ಜವಬ್ದಾರಿಯನ್ನು ಸಂತೋಷ್ ಹೊತ್ತುಕೊಂಡಿದ್ದು ಕಳೆದ ಎರಡು ವರ್ಷದ ಹಿಂದೆ ಪ್ರಪ್ರಥಮವಾಗಿ ಕುವೈಟ್‌ಗೆ ಕೆಲಸಕ್ಕೆ ತೆರಳಿದ್ದು ಮನೆಯ ಆಧಾರ ಸ್ಥಂಬನಾಗಿದ್ದನು.

ಕೆಲವು ತಿಂಗಳ ಹಿಂದೆ ತಂಗಿಗೆ ಮದುವೆ ನಿಶ್ಚಯವಾಗಿದ್ದು ಅದಕ್ಕಾಗಿ ಕಂಪೆನಿಗೆ ರಜೆ ಹಾಕಿದ್ದರು ಅದನ್ನು ಮಂಜೂರು ಮಾಡದಿದ್ದರಿಂದ ಮದುವೆಗೆ ಹಾಜರಾಗದೇ ಎರಡು ವರ್ಷ ಪೂರೈಸಿಕೊಂಡೇ ಊರಿಗೆ ಬಂದು ಕುಟುಂಬದ ಜೊತೆಗೆ ಸಂತಸ ಹಂಚಿಕೊಂಡ ಸಂತೋಷ್‌ನ ನಗು ಆ ಮನೆಗೆ ಇನ್ನಿಲ್ಲವಾಗಿದೆ. ಕಳೆದ ಮಂಗಳವಾರವಷ್ಟೇ ಮರಳಿ ವಿದೇಶಕ್ಕೆ ತೆರಳಿದ್ದ ಸಂತೋಷ್ ತಾಯಿಗೆ ಗುರುವಾರ ಬೆಳಿಗ್ಗೆ ತಾನು ವಿದೇಶಕ್ಕೆ ಸುರಕ್ಷಿತವಾಗಿ ತಲುಪಿದ ಬಗ್ಗೆ ಮಾಹಿತಿ ನೀಡಿದ್ದವ ಸಂಜೆ ನೀರಿನಲ್ಲಿ ಶವವಾಗಿದ್ದಾನೆ ಎಂದು ಮಾಹಿತಿ ಸಿಕ್ಕಾಗ ಕುಟುಂಬಕ್ಕೆ ಸಿಡಿಲೇ ಬಡಿದಂತಾಗಿದೆ.
ಕಳೆದ 3 ತಿಂಗಳ ರಾಘವೇಂದ್ರ ಎಂಬುವವನ ದಾರುಣ ಮೃತ್ಯುವಿಗೆ ಸಾಕ್ಷಿಯಾದ ಮನೆಯ ಪಕ್ಕದಲ್ಲಿಯೇ ಇರುವ ಸಂತೋಷ್‌ನ ಮನೆ ಅದೇ ಕರಿಛಾಯೆಯನ್ನು ಹೊತ್ತುಕೊಂಡು ಹಿರಿಯ ಪುತ್ರನ ನಿರ್ಜಿವ ಶರೀರಕ್ಕಾಗಿ ಕಾದು ಕುಳಿತಿದೆ. ಸಭ್ಯತೆಯ ಕುಟುಂಬಕ್ಕೆ ವಿಧಿಯ ಲೀಲೆಯ ಆಟಕ್ಕೆ ಏಳು ಸಮುದ್ರದ ಆಚೆ ಬಡ ಜೀವ ಬಲಿಯಾಯಿತಲ್ಲ ಎಂಬ ಮರಣ ಮೃದಂಗ ಸದ್ದು ಮಾಡದೆ ಬಡಿಯುತ್ತಿದೆ.

Comments

comments

Leave a Reply

Read previous post:
ಸದಸ್ಯರ ರಂಪಾಟ; ಕೆಮ್ರಾಲ್ ಗ್ರಾಮ ಸಭೆ ರದ್ದು

News by Narendra Kerekadu Photo By: Raghunath Kamath ಕೆಮ್ರಾಲ್: ರಸ್ತೆ ಕಾಮಗಾರಿಯೊಂದರ ಬಗ್ಗೆ ವಾದ ವಿವಾದ ಉಂಟಾಗಿ ಇಬ್ಬರು ಪಂಚಾಯತ್ ಸದಸ್ಯರು ಅದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ರಂಪಾಟ,...

Close