ಕಾರ್ಖಾನೆ, ರಸ್ತೆಗಳಿಗೆ ಮರಗಳ ಬಲಿಗೆ ಪರ್ಯಾಯ ಅಗತ್ಯ-ಪುನರೂರು

Photo By Mithuna Kodethoor
ಕಿನ್ನಿಗೋಳಿ: ಎಂಆರ್‌ಪಿಎಲ್, ನಂದಿಕೂರು ಉಷ್ಣ ವಿದ್ಯುತ್ ಸ್ಥಾವರ, ಎಸ್‌ಇಝಡ್ ಎಂದು ಕಾರ್ಖಾನೆಗಳಿಗೆ, ಹೆದ್ದಾರಿ ಅಗಲಕ್ಕೆ ಸಾವಿರಾರು ಮರಗಳನ್ನು ನಾಶ ಮಾಡಲಾಗಿದೆ. ಇನ್ನು ಕಾರ್ಖಾನೆಗಳ ವಿಷಕಾರಕ ಹೊಗೆ, ನೀರಿನಿಂದ ಪರಿಸರ ಮಾಲಿನ್ಯ ಮಿತಿ ಮೀರಲಿದೆ. ಹಾಗಾಗಿ ಸಾಧ್ಯವಾದಷ್ಟು ಗಿಡ ನೆಡುವುದು ಕರಾವಳಿ ಜನರ ಕರ್ಮವೂ ಹೌದು, ಕರ್ತವ್ಯವೂ ಹೌದು ಎಂದು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಅವರು ಪುನರೂರು ಭಾರತಮಾತಾ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವದ ಸಲುವಾಗಿ ಗಿಡಗಳನ್ನು ನೆಟ್ಟು ಮಾತನಾಡಿದರು.
ಅರಣ್ಯಾಧಿಕಾರಿ ಎಂ.ಎಂ ಯೋಗೇಶ್ವರ್, ಗಿಡಗಳನ್ನು ಚೆನ್ನಾಗಿ ಪೋಷಿಸಿದ ಮೂವರು ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ನೀಡುವುದಾಗಿ ಹೇಳಿದರು. ಇಲಾಖೆಯ ಶಂಕರ್, ಸೇಷಪ್ಪ, ಮುಖ್ಯ ಶಿಕ್ಷಕ ರಾಘವೇಂದ್ರ ರಾವ್ ಮತ್ತಿತರರಿದ್ದರು.

Comments

comments

Leave a Reply

Read previous post:
ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜಿಲ್ಲಿ ಚಟುವಟಿಕೆಗಳ ಉದ್ಘಾಟನೆ,ಕೃತಿ ಬಿಡುಗಡೆ.

Photo By Donald D Souza Kirem ಕಿನ್ನಿಗೋಳಿ : ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜಿನಲ್ಲಿ 2012-13ನೇ ಸಾಲಿನ ಶೈಕ್ಷಣಿಕ ವರ್ಷದ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ...

Close