ಈಜಲು ಹೋಗಿ ನೀರು ಪಾಲು

Photo by Raghunath Kamath

ಕಿನ್ನಿಗೋಳಿ : ರವಿವಾರ ಮೆನ್ನಬೆಟ್ಟು ಸಮೀಪದ ಕಿಲೆಂಜೂರು ನಂದಿನಿ ನದಿಯ ಕರ್ನಿಕೆರೆ ಗುಂಡಿಯಲ್ಲಿ ಈಜಲು ಹೋದ 5 ಯುವಕರಲ್ಲಿ ಒರ್ವನಾದ ಕೆಮ್ರಾಲ್ ನ ಹೊಸಕಾಡು ನಿವಾಸಿ ಕೇಶವ ಹಾಗೂ ವಸಂತಿ ದಂಪತಿಯ ಪುತ್ರ ರೋಹಿತ್(19) ನೀರು ಪಾಲಾದ ಘಟನೆ ನಡೆದಿದೆ.
ಸುಮಾರು ಸಂಜೆ ೩ ಗಂಟೆಯ ಹೊತ್ತಿಗೆ ರ‍ೋಹಿತ್ ಗೆಳೆಯರೊಂದಿಗೆ ಸೈಕಲ್ ಗಳಲ್ಲಿ ಕಿಲೆಂಜೂರು ಪುಚ್ಚಾಡಿ ಅಣೆಕಟ್ಟಿನ ಬಳಿಯ ಕರ್ನಿಕೆರೆ ಗುಂಡಿಯಲ್ಲಿ ಮೀನು ಹಿಡಿಯಲು ಹಾಗೂ ಈಜಲು ಹೋಗಿದ್ದರು. ರಜಾದಿನಗಳಲ್ಲಿ ಬರುತ್ತಿದ್ದ ಇವರಿಗೆ ಸ್ಠಳೀಯ ನಿವಾಸಿಗಳು ಅಪಾಯದ ಅರಿವಿನ ಬಗ್ಗೆ ತಿಳಿ ಹೇಳಿದ್ದರು. ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದವರು ರಾತ್ರಿಯವರೆಗೆ ಹುಡುಕಾಡಿದರೂ ಶವ ಪತ್ತೆಯಾಗಿಲ್ಲ. ಸುರತ್ಕಲ್ ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಈ ಗುಂಡಿಯಲ್ಲಿ ಈಜಲು ಬಂದು ಇಬ್ಬರು ಸಾವನ್ನಪ್ಪಿದ್ದರು ಎಂದು ಸ್ಠಳೀಯ ನಿವಾಸಿಗಳು ತಿಳಿಸಿದ್ದಾರೆ. ಶಾಸಕರು, ಜನಪ್ರತಿನಿಧಿಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ.

Comments

comments

Leave a Reply

Read previous post:
ಕಾರ್ಖಾನೆ, ರಸ್ತೆಗಳಿಗೆ ಮರಗಳ ಬಲಿಗೆ ಪರ್ಯಾಯ ಅಗತ್ಯ-ಪುನರೂರು

Photo By Mithuna Kodethoor ಕಿನ್ನಿಗೋಳಿ: ಎಂಆರ್‌ಪಿಎಲ್, ನಂದಿಕೂರು ಉಷ್ಣ ವಿದ್ಯುತ್ ಸ್ಥಾವರ, ಎಸ್‌ಇಝಡ್ ಎಂದು ಕಾರ್ಖಾನೆಗಳಿಗೆ, ಹೆದ್ದಾರಿ ಅಗಲಕ್ಕೆ ಸಾವಿರಾರು ಮರಗಳನ್ನು ನಾಶ ಮಾಡಲಾಗಿದೆ. ಇನ್ನು...

Close