ಕಟೀಲು ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ

News by Sharath Shetty

ಕಿನ್ನಿಗೋಳಿ:  ಕಟೀಲು ಹಲವಾರು ಟೀಕೆಗಳಿಗೆ ಗುರಿಯಾಗಿ ಕಳಪೆ, ತೇಪೆ ಎಂಬ ಹಣೆಪಟ್ಟಿ ಹೊತ್ತಿದ್ದ ಕಟೀಲು ದೇವಳದ ಬಸ್ ನಿಲ್ದಾಣಕ್ಕೆ ಕೊನೆಗೂ ಮೋಕ್ಷ ಸಿಕ್ಕಿದೆ. ಸುಮಾರು 40, ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡು ಹೈಟೆಕ್ ಸ್ಪರ್ಶ ಪಡೆದು ಸಂಪೂರ್ಣ ಇಂಟರ್ ಲಾಕ್ ಅಳವಡಿಕೆ ಮೂಲಕ ಪಾದರಸದಂತಃ ಕಾಮಗಾರಿಯ ಬಸ್ ನಿಲ್ದಾಣ ಪ್ರಯಾಣಿಕರ ತಂಗುವಿಕೆ, ಬಸ್‌ಗಳ ನಿಲುಗಡೆಗೆ ಮುಕ್ತವಾಗಿದೆ. ಕಟೀಲು ದೇವಳದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ತರಾತುರಿಯಲ್ಲಿ ನಿರ್ಮಾಣಗೊಂಡ ಬಸ್ ನಿಲ್ದಾಣ, ರಸ್ತೆ- ದುರವಸ್ಥೆಯನ್ನು  ತಲುಪಿ ಹಲವಾರು ಟೀಕೆಗಳಿಗೆ ಗುರಿಯಾಗಿತ್ತು. ಗುತ್ತಿಗೆದಾರರಿಗೆ ಪಾವತಿಯೂ ಬಾಕಿ ಇತ್ತು. ಇದೀಗ ಹಲವರ ಒತ್ತಡ ಒತ್ತಾಸೆಗಳಿಂದಾಗಿ ಇತಿಹಾಸ ಪ್ರಸಿದ್ಧ ಕಟೀಲು ಕ್ಷೇತ್ರದಲ್ಲಿ ಸುಂದರ ಬಸ್ ನಿಲ್ದಾಣ ನಿರ್ಮಾಣವಾಗಿದೆ. ನೂರಾರು ಬಸ್ಸುಗಳು, ಇತರ ಖಾಸಗಿ ವಾಹನಗಳಿಗೆ ನಿಲುಗಡೆಗೆ ಭಾರಿ ಅವಕಾಶವಿದ್ದು ಪ್ರಯಾಣಿಕರ ಓಡಾಟಕ್ಕೂ ಭಾರಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ದೇವಳದ ಎದುರುಗಡೆ ಒತ್ತಡ ಕಡಿಮೆಯಾಗಿದ್ದು, ಒಂದಿಷ್ಟು ಉಸಿರು ಬಿಡುವಂತಾಗಿದೆ. ಕಟೀಲು ಮೂರುಕಾವೇರಿ ರಸ್ತೆ ಇಕ್ಕಟ್ಟಾಗಿರುವುದರಿಂದ ವಿಶೇಷ ದಿನ, ಮದುವೆ ದಿನಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ನಡೆಯುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಏಕಮುಖ ಸಂಚಾರ, ರಸ್ತೆ ಅಗಲೀಕರಣದ ಅಗತ್ಯವಿದೆ. ಈ ಬಗ್ಗೆ ದೇವಳದ ಆಡಳಿತ, ಜಿಲ್ಲಾಡಳಿತ ಮನ ಮಾಡಬೇಕಾದ ಅಗತ್ಯವಿದೆ.
ಬಹಳಷ್ಟು ಆದಾಯವುಳ್ಳ ಕಟೀಲು ದೇವಳದ ಆಡಳಿತಕ್ಕೆ ಇನ್ನಷ್ಟು ಸವಾಲುಗಳಿದ್ದು ನೆನೆಗುದಿಗೆ ಬಿದ್ದಿರುವ ಯಾತ್ರಿ ನಿವಾಸ, ಗೋಶಾಲೆ, ರಸ್ತೆ ಅಗಲೀಕರಣ, ಏಕಮುಖ ಸಂಚಾರ ನಡೆಯಬೇಕಾಗಿದೆ.
ಶೌಚಾಲಯಕ್ಕೂ ಕಾಯಕಲ್ಪ: ಹಿಂದೆ ತರಾತುರಿಯಲ್ಲಿ ನಿರ್ಮಿಸಲಾದ ಶೌಚಾಲಯವನ್ನು ತೆಗೆದು ನೂತನ ಶೌಚಾಲಯ ನಿರ್ಮಾಣ ವ್ಯವಸ್ಥೆಯು ನಡೆಯುತ್ತಿದೆ.
ಕೆ.ಜಿ.ಯಿಂದ ಪಿ.ಜಿ. ವರೆಗೆ ಉಚಿತ ಶಿಕ್ಷಣ, ಅನ್ನದಾನ, ನಡೆಯುತ್ತಿರುವ ಕಟೀಲು ಕ್ಷೇತ್ರಕ್ಕೆ ನೂತನ ಬಸ್ಸು ತಂಗುದಾಣ ಹೊಸ ಮೆರಗು ನೀಡಿದೆ.

Comments

comments

Leave a Reply

Read previous post:
ಈಜಲು ಹೋಗಿ ನೀರು ಪಾಲು

Photo by Raghunath Kamath ಕಿನ್ನಿಗೋಳಿ : ರವಿವಾರ ಮೆನ್ನಬೆಟ್ಟು ಸಮೀಪದ ಕಿಲೆಂಜೂರು ನಂದಿನಿ ನದಿಯ ಕರ್ನಿಕೆರೆ ಗುಂಡಿಯಲ್ಲಿ ಈಜಲು ಹೋದ 5 ಯುವಕರಲ್ಲಿ ಒರ್ವನಾದ ಕೆಮ್ರಾಲ್ ನ...

Close