ಕಡಂದಲೆಯಲ್ಲಿ ಗ್ರಾಮೀಣ ಕ್ರೀಡೋತ್ಸವ

Photo By: Sharath Shetty
ಕಡಂದಲೆ: ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸಿದಾಗ ಗ್ರಾಮೀಣ ಬದುಕನ್ನು ಉಳಿಸಿದ್ದಂತೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ ಹೇಳಿದರು. ಅವರು ರವಿವಾರ ಕಡಂದಲೆ ಜೋಡಿಕಟ್ಟೆಯಲ್ಲಿ ಮುಂಡ್ಕೂರು ಭಾರ್ಗವ ಜೆ. ಸಿ. ಐ. ಮತ್ತು ಜೋಡಿಕಟ್ಟೆ ಫ್ರೆಂಡ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಡೆದ ಗ್ರಾಮೀಣ ಕ್ರೀಡೋತ್ಸವದಲ್ಲಿ ಮಾತನಾಡಿದರು.
ನಿಧಿಶೋಧ, ಕೆಸರುಗದ್ದೆ ಓಟ, ಕೆಸರುಗದ್ದೆ ವಾಲಿಬಾಲ್ ಸ್ಪರ್ಧೆಗಳು ಪುರುಷ ಹಾಗೂ ಮಹಿಳೆಯರಿಗಾಗಿ ನಡೆದು ಸಾವಿರಕ್ಕೂ ಮಿಕ್ಕಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮುಂಡ್ಕೂರು ಭಾರ್ಗವ ಜೆ. ಸಿ. ಐ. ಅಧ್ಯಕ್ಷ ಸುರೇಂದ್ರ ಭಟ್ ರ ಅಧ್ಯಕ್ಷೆತೆಯಲ್ಲಿ ಕಾಪು ಜೆ.ಸಿ.ಐನ ದೀಪಕ್ ಕುಮಾರ್ ಕೂಟ ಉದ್ಘಾಟಿಸಿದರು. ಭಾರತೀಯ ಯೋಧ ಉದಯ ಕುಮಾರ್, ಕೃಷಿಕ ಜಾರ್ಜ್ ಫೆರ್ನಾಂಡಿಸ್, ಭಾರ್ಗವ ಜೆ.ಸಿ.ಐ ನಿಕಟ ಪೂರ್ವ ಅಧ್ಯಕ್ಷ ಸುಧಾಕರ ಪೊಸ್ರಾಲ್, ರನ್ನು ಸನ್ಮಾನಿಸಲಾಯಿತು. ವಕೀಲರಾದ ಕೆ.ಆರ್. ಪಂಡಿತ್, ತಾ. ಪಂ ಸದಸ್ಯ ರಮೇಶ್ ಪೂಜಾರಿ, ಮುಂಡ್ಕೂರು ಗ್ರಾ. ಪಂ ಸದಸ್ಯ ಸತ್ಯಶಂಕರ ಶೆಟ್ಟಿ, ಮಾರುತಿ ಭಟ್, ಶರತ್ ಶೆಟ್ಟಿ, ಸುಧಾಕರ ಸಾಲಿಯಾನ್, ಮತ್ತಿತರರಿದ್ದರು.

Comments

comments

Leave a Reply

Read previous post:
ಮುಂಡ್ಕೂರಿನಲ್ಲಿ ಸಂಸದ ಜಯಪ್ರಕಾಶ ಹೆಗ್ಡೆಗೆ ಅಭಿನಂದನೆ

Photo By: Sharath Shetty ಮುಂಡ್ಕೂರು: ಕರ್ನಾಟಕದಲ್ಲಿ ಸರಕಾರ ಹೆಸರಿಗೆ ಮಾತ್ರವಿದ್ದು, ಆಡಳಿತ ಯಂತ್ರ ಕೆಲಸ ಮಾಡುತ್ತಿಲ್ಲವೆಂದು ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಸಾಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು....

Close