ಮುಂಡ್ಕೂರಿನಲ್ಲಿ ಸಂಸದ ಜಯಪ್ರಕಾಶ ಹೆಗ್ಡೆಗೆ ಅಭಿನಂದನೆ

Photo By: Sharath Shetty
ಮುಂಡ್ಕೂರು: ಕರ್ನಾಟಕದಲ್ಲಿ ಸರಕಾರ ಹೆಸರಿಗೆ ಮಾತ್ರವಿದ್ದು, ಆಡಳಿತ ಯಂತ್ರ ಕೆಲಸ ಮಾಡುತ್ತಿಲ್ಲವೆಂದು ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಸಾಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಮಂಗಳವಾರ ಮುಂಡ್ಕೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಭಾರ್ಗವಿ ಸಮುದಾಯ ಭವನದಲ್ಲಿ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಕಳ ಶಾಸಕ ಕೆ. ಗೋಪಾಲ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಅಭಿನಂದನೆ ನಡೆಯಿತು. ಜಿ. ಪಂ ಸದಸ್ಯ ಸುಪ್ರಿತ್ ಶೆಟ್ಟಿ, ತಾ. ಪಂ ಸದಸ್ಯೆ ಶಕುಂತಳಾ ಶೆಟ್ಟಿ, ಕಾರ್ಕಳ ಎ.ಪಿ.ಎಮ್.ಸಿ ಸದಸ್ಯ ಸುಭೋದ್ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ಉಪಾಧ್ಯಕ್ಷ ರೋಕಿ ಡಿ’ಸಿಲ್ವ, ಪ್ಯಾರಿಸ್ ಪ್ರಜೆ ಪಿಲಿಪ್, ಕಾಂಗ್ರೆಸ್ ಮುಖಂಡರಾದ ವಿನಯ್ ಕುಮಾರ್ ಶೆಟ್ಟಿ, ವಾದಿರಾಜ್ ಶೆಟ್ಟಿ, ಶ್ರೀಧರ ಸನಿಲ್, ಸುರೇಂದ್ರ ಶೆಟ್ಟಿ, ಸಂದೀಪ್ ಶೆಟ್ಟಿ, ಮತ್ತಿತರರಿದ್ದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಮುಂಡ್ಕೂರಿನಲ್ಲಿ ಪುಸ್ತಕ ವಿತರಣೆ

Photo by: Sharath Shetty ಕಿನ್ನಿಗೋಳಿ: ಮುಂಡ್ಕೂರಿನ ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯಮಿ ರೋಕಿ ಡಿ’ಸಿಲ್ವರವರು ವರ್ಷಂಪ್ರತಿ ನೀಡುವ ಪುಸ್ತಕ ವಿತರಣೆ ಮಂಗಳವಾರ...

Close