ಕಟೀಲಿನಲ್ಲಿ ಸ್ವಾಸ್ಥ ಸಂಕಲ್ಪ

Photo By: Sharath Shetty Kinnigoli
ಕಟೀಲು:  ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಹಾಗೂ ಕಟೀಲು ದೇವಳ ಪ.ಪೂ. ಕಾಲೇಜಿನ ಆಶ್ರಯದಲ್ಲಿ ಮಾದಕ ದ್ರವ್ಯ ವರ್ಜನ ದಿನಾಚರಣೆ ಹಾಗೂ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ಕಟೀಲು ದೇವಳ ಪ.ಪೂ. ಕಾಲೇಜಿನಲ್ಲಿ ನಡೆಯಿತು.  ಪ್ರಾಚಾರ್ಯ ಜಯರಾಮ ಪೂಂಜಾ ಅಧ್ಯಕ್ಷತೆ ವಹಿಸಿದ್ದು, ಯುಗಪುರುಷದ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿ, ಶಶಿ ಮಾಹಿತಿ ನೀಡಿದರು. ಜನಜಾಗೃತಿ ವೇದಿಕೆಯ ತಿಮ್ಮಪ್ಪ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಒಕ್ಕೂಟದ ಅಧ್ಯಕ್ಷೆ ಸುಜಾತ, ಮೇಲ್ವಿಚಾರಕಿ ಲತಾ ಅಮೀನ್, ಉಪನ್ಯಾಸಕ ಸುರೇಶ್ ಶೆಟ್ಟಿ, ಸೇವಾನಿರತ ರಾಮ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕೆಸರುಗದ್ದೆ ಓಟ

ಪರಶುರಾಮ ಸೃಷ್ಟಿಯೆಂದೇ ಜನಜನಿತವಾದ ನಮ್ಮ ಕರಾವಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗಳಿಂದಾಗಿ ಕೃಷಿ ಅತ್ಯಂತ ತ್ವರಿತವಾಗಿ ನಶಿಸುತ್ತಿದೆ. ಮೂರು ಬೆಳೆ ಬೆಳೆಯುತ್ತಿದ್ದ ಗದ್ದೆಗಳು ಮನೆಗಳಾಗಿ ಪ್ಲಾಟುಗಳಾಗಿ ಬದಲಾವಣೆಗೊಳ್ಳುತ್ತಿವೆ. ಗದ್ದೆಗಳನ್ನು ಮಣ್ಣು...

Close