ಐಕಳ ಕಲ್ಲುಕೋರೆಗೆ ತಹಶೀಲ್ದಾರ್ ಭೇಟಿ

Photos by Sharath Kinnigoli
ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾವಡಿ ಕಲ್ಲು ಪುತ್ತುಕೋರಡಿಯಲ್ಲಿ ಕಲ್ಲುಕೋರೆ ನಡೆಯುತ್ತಿದ್ದು ಅಲ್ಲಿನ ಪರಿಸರದ ಗ್ರಾಮಸ್ಥರ ದೂರಿಗೆ ಮಂಗಳೂರು ತಾಲೂಕು ತಹಶೀಲ್ದಾರ್ ರವಿಚಂದ್ರ ನಾಯಕ್ ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಕಾನೂನು ಕ್ರಮ ಜರಗಿಸುವ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದರು. ಗ್ರಾಮಕರಣಿಕ ಮಂಜುನಾಥ, ಗ್ರಾಮಸ್ಥರಾದ ರೋಬಟ್ ಲೋಬೊ, ಕೃಷ್ಣ ಬಂಗೇರ, ಸೀತರಾಮದಾಸ್, ಪದ್ಮನಾಭದಾಸ್, ಮತ್ತಿತರರು ಕೋರೆಯಿಂದಾಗುವ ತೊಂದರೆಯ ಬಗ್ಗೆ ತಿಳಿಸಿದರು. ಕೋರೆ ಮಾಲಿಕರು ಖಾಸಗೀ ಸ್ಥಳದಲ್ಲಿ ಕೋರೆಯ ಲೀಸ್ ಪಡೆದಿದ್ದು ಸರಕಾರಿ ಜಾಗದಲ್ಲಿ ಕಲ್ಲು-ಬಂಡೆಗಳನ್ನು ತೆಗೆಯುತ್ತಿದ್ದಾರೆಂದು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸ್ಥಳ ತನಿಖೆ ನಡೆಸಿದರು. ಈ ಬಗ್ಗೆ ಕೋರೆ ಮಾಲಿಕರಲ್ಲಿ ವಿಚಾರಿಸಿದಾಗ ದೂರಿನ ಬಗ್ಗೆ ಅಲ್ಲಗಳೆದರು. ಇದೇ ವ್ಯಾಪ್ತಿಯಲ್ಲಿ ಹಲವರು ಸರಕಾರಿ ಜಾಗಗಳನ್ನು ಅತಿಕ್ರಮಣ ಮಾಡಿದ್ದು ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

Comments

comments

Leave a Reply

Read previous post:
ಪಕ್ಷಿಕೆರೆಯಲ್ಲಿ ಮೀನುಮಾರುಕಟ್ಟೆಗೆ ಶಿಲಾನ್ಯಾಸ

Photo By: Mithun Kodethooru ಕಿನ್ನಿಗೋಳಿ: ಮೀನುಗಾರಿಕಾ ಅಭಿವೃದ್ಧಿ ನಿಗಮದ ಹತ್ತು ಲಕ್ಷ ರೂ ಅನುದಾನದ ಮೀನುಮಾರುಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ಶುಕ್ರವಾರ ಪಕ್ಷಿಕೆರೆಯಲ್ಲಿ ನಡೆಯಿತು. ಮೀನುಗಾರಿಕಾ ಅಭಿವೃದ್ಧಿ...

Close