ಐಕಳ ಪೊಂಪೈ ಪದವಿ ಪೂರ್ವ ಕಾಲೇಜಿನಲ್ಲಿ ಸೀತಾರಾಮ್ ಭಟ್‌ ಬೀಳ್ಕೋಡುಗೆ

Photo by Sharath Shetty
ಕಿನ್ನಿಗೋಳಿ: ಉತ್ತಮ ಶಿಕ್ಷಕ ಸಾರ್ವಕಾಲಿಕವಾಗಿ ಗೌರವಕ್ಕೆ ಅರ್ಹನಾಗುತ್ತಾನೆ ಎಂದು ಐಕಳ ಪೊಂಪೆ ಪದವಿ ಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಶ್ರೀಧರ ಡಿ. ಎಸ್ ಹೇಳಿದರು. ಅವರು ಶನಿವಾರ ಐಕಳ ಪೊಂಪೈ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕ ಬಿ. ಸೀತಾರಾಮ್ ಭಟ್‌ರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ೩೭ ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಚಾರಣ ಪ್ರೇಮಿ, ಸಾಹಿತಿ, ಸಮಾಜ ಸೇವಕ ಸೀತಾರಾಮ್ ಭಟ್ರನ್ನು ಕಾಲೇಜಿನ ಸಂಚಾಲಕ ರೆ| ಫಾ| ಪೌಲ್ ಪಿಂಟೊ ಸನ್ಮಾನಿಸಿದರು. ಕಾಲೇಜಿನ ಪ್ರಾಚಾರ‍್ಯ ರೆ| ಫಾ| ಜೆರೊಂ ಡಿ’ಸೋಜಾ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಇಮಿಲಿಯಾನ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ರಾವ್, ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪರವಾಗಿ ಸ್ನೇಹ, ಸಹೋದ್ಯೋಗಿಗಳ ಪರವಾಗಿ ಅನಂತ ಮೂಡಿತ್ತಾಯ, ಅಲ್ವಿನ್ ಮಿರಾಂದ,ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ರೋಜಿ ಮರಿಯಾ ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ಪಂಚಾಯತ್‌ನಿಂದ ಚರಂಡಿ ದುರಸ್ಥಿ

ಕಿನ್ನಿಗೋಳಿ : ಕಿನ್ನಿಗೋಳಿ ಚರ್ಚ್‌ನಿಂದ ಮಾರ್ಕೆಟ್‌ನ ವರೆಗೆ ಚರಂಡಿ ವ್ಯವಸ್ಥೆ ಸಮರ್ಪಕವಾಗಿರದೆ ಮಳೆ ನೀರು ಮಾರ್ಗದಲ್ಲಿ ಹರಿದು ಹೋಗುತ್ತಿದ್ದು ಸಾರ್ವಜನಿಕರ ಟೀಕೆಗಳ ಹಿನ್ನೆಲೆಯಲ್ಲಿ ಪಂಚಾಯತ್ ಆಡಳಿತ ಶುಕ್ರವಾರ...

Close