ಮುಲ್ಕಿ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ

Photo by Bhagyavan Sanil

ಮುಲ್ಕಿ: ಜೀವನದಲ್ಲಿ ಉತ್ತಮ ಗುರಿಯನ್ನು ಹೊಂದಿ ಅದರ ಪರಿಪೂರ್ಣತೆಗಾಗಿ ನಾಯಕತ್ವದ ಗುಣಗಳನ್ನು ಬೆಳೆಸಿ ಶಿಸ್ತಿಗೆ ಪ್ರಾಮುಖ್ಯತೆ ನೀಡುವ ಮೂಲಕ ಉತ್ತಮ ಪ್ರಜೆಗಳಾಗಿ ಬೆಳಗಬೇಕು ಎಂದು ಮೂಲ್ಕಿ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ಹೇಳಿದರು.
ಗುರುವಾರ ಮುಲ್ಕಿ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಜನೆಗೆ ಪೂರಕವಾದ ನಾಯಕತ್ವ ಗುಣ ಮತ್ತು ಶಿಸ್ತು ಶಾಲಾ ಸಂಸತ್ತಿನಲ್ಲಿ ಮುಕ್ತವಾಗಿ ಭಾಗವಹಿಸುವುದರಿಂದ ಪಡೆಯಬಹುದು ಎಂದ ಅವರು ದೇಶದ ಸಂವಿಧಾನ ಮತ್ತು ಕಾನೂನು ಕಟ್ಟಳೆಗಳು ಹಾಗೂ ಪ್ರಾಪಂಚಿಕ ಜ್ಞಾನ ಗಳಿಕೆ ಇದರಿಂದ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾದ್ಯಾಯಿನಿ ಚಂದ್ರಿಕಾ ಭಂಡಾರಿ ವಹಿಸಿದ್ದರು.
ಕಾರ್ಯಕ್ರಮ ಸಂಯೋಜಕಿ ಕಾಮಾಕ್ಷಿ.ಆರ್ ನಾಯಕ್ ಸ್ವಾಗತಿಸಿದರು. ರಮ್ಯಾ ದೇವಾಡಿಗ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಆಶ್ರಯ್ ಕುಮಾರ್ ವಂದಿಸಿದರು.

Comments

comments

Leave a Reply

Read previous post:
ಪಿ.ಉಮೇಶ್ ರೈಯವರಿಗೆ ಬೀಳ್ಕೊಡುಗೆ

Photo by Mithuna Kodethoor ಕಟೀಲು: ವಿಜಯಾ ಬ್ಯಾಂಕ್‌ನಲ್ಲಿ 37ವರ್ಷಗಳಿಂದ ಸೇವೆ ಸಲ್ಲಿಸಿ ಶನಿವಾರ ನಿವೃತ್ತಗೊಂಡ ಪಿ.ಉಮೇಶ್ ರೈಯವರನ್ನು ಸಂಮಾನಿಸಿ ಬೀಳ್ಕೊಡಲಾಯಿತು. ಕಟೀಲು ವಿಜಯಾ ಬ್ಯಾಂಕ್‌ನ ಪ್ರಬಂಧಕ ಭುವನಪ್ರಸಾದ ಹೆಗ್ಡೆ, ರಮೇಶ್ ಮತ್ತಿತರರಿದ್ದರು.

Close