ಪಡುಪಣಂಬೂರು :91ಲಕ್ಷದ ರೂ. ಕಾಮಗಾರಿ ಉದ್ಘಾಟನೆ

ಪಡುಪಣಂಬೂರು: ಪಡುಪಣಂಬೂರು ಸುಣ್ಣದಗೂಡಿನಿಂದ ಕೆರೆಕಾಡು ರಸ್ತೆ ಅಭಿವೃದ್ಧಿ ನಬಾರ್ಡ್ ಆರ್‌ಐಡಿಎಫ್ 14ನಡಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು. ರೂ.70ಲಕ್ಷದಲ್ಲಿ ನಿರ್ಮಾಣವಾದ ಮೂರು ಕಿಮೀ. ಉದ್ದ ರಸ್ತೆ ಡಾಮರೀಕರಣದ ಉದ್ಘಾಟನೆಯನ್ನು ಶಾಸಕ ಅಭಯಚಂದ್ರ ಮಾಡಿದರು.

ರೂ.೧೦ಲಕ್ಷದಲ್ಲಿ ನಿರ್ಮಾಣಗೊಂಡ 11ನೇ ತೋಕೂರು ಪ.ಜಾತಿ ಕಾಲೋನಿ ಕಾಂಕ್ರೀಟ್ ರಸ್ತೆ, ರೂ.10ಲಕ್ಷದಲ್ಲಿ ಇದೇ ಕಾಲನಿಯಲ್ಲಿ ನಡೆದ ತಡೆಗೋಡೆ ಕಾಮಗಾರಿ ಹಾಗೂ ಶಾಸಕರ ರೂ.1ಲಕ್ಷ ಅನುದಾನದಲ್ಲಿ ರಸ್ತೆ ಡಾಮರೀಕರಣ ಹಾಗೂ ತಾ.ಪಂ.ಸದಸ್ಯ ರಾಜುಕುಂದರರ ಒಂದು ಲಕ್ಷ ಅನುದಾನದಲ್ಲಿ ನಡೆದ ಇಂಟರ್‌ಲಾಕ್ ಕಾಮಗಾರಿಯನ್ನು ಉದ್ಘಾಟಿಸಲಾಯಿತು. ಜಿ.ಪಂ.ಸದಸ್ಯೆ ಆಶಾ ಸುವರ್ಣ, ಮಂಗಳೂರು ತಾ.ಪಂ. ಅಧ್ಯಕ್ಷೆ ಭವ್ಯಾ ಗಂಗಾಧರ್, ತಾ.ಪಂ.ಸದಸ್ಯರಾದ ರಾಜು ಕುಂದರ್, ವನಿತಾ ಅಮೀನ್, ಪಡುಪಣಂಬೂರು ಗ್ರಾ.ಪಂ.ಅಧ್ಯಕ್ಷ ವಿನೋದ್ ಕುಮಾರ್ ಮತ್ತಿತರರಿದ್ದರು.

 

 

 

Comments

comments

Leave a Reply

Read previous post:
ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Photo by Raghunath Kamath ಕಿನ್ನಿಗೋಳಿ : ಮೂರು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಹೊಸಕಾವೇರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ....

Close