ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Photo by Raghunath Kamath
ಕಿನ್ನಿಗೋಳಿ : ಮೂರು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಹೊಸಕಾವೇರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಮಗು ಬಾವಿಯ ಹಗ್ಗವನ್ನು ಹಿಡಿದು ಬದುಕುಳಿದಿದೆ.
ಉಳ್ಳಾಲ ಮೊಗವೀರಪಟ್ನದ ಪುಷ್ಪಾರ ಏಳು ಮಕ್ಕಳಲ್ಲಿ ಪದ್ಮಿನಿ(28) ಮೂರನೆಯವಳು. ನಾಲ್ಕು ವರ್ಷಗಳ ಹಿಂದೆ ಹೊಸಕಾವೇರಿಯ ನಿವಾಸಿ ಚಂದ್ರಹಾಸ ಶೆಟ್ಟಿಗಾರನೊಂದಿಗೆ ವಿವಾಹವಾಗಿತ್ತು. ಮನೆಯಲ್ಲಿ ಗಂಡ ಚಂದ್ರಹಾಸ, ಮಗು ಶಿವಾನಿ, ಗಂಡನ ತಮ್ಮ ಮೋಹನ ಮತ್ತು ಪತ್ನಿ ಗೀತಾ ಜೊತೆಗಿದ್ದರು. ಗಂಡ ಚಂದ್ರಹಾಸ ಮುಂಬೈನಲ್ಲಿ ಕೆಲಸಕ್ಕಿದ್ದ. ಒಂದು ವರ್ಷದ ಹಿಂದೆ ಹಳೆಯಂಗಡಿಯಲ್ಲಿ ಹೂವಿನ ಅಂಗಡಿ ಆರಂಭಿಸಿದ್ದ. ಶಿವಾನಿ ಶಿಮಂತೂರು ನರ್ಸರಿ ಶಾಲೆಗೆ ಹೋಗುತ್ತಿದ್ದಾಳೆ.
ಭಾನುವಾರ ಬೆಳಿಗ್ಗೆ ಚಂದ್ರಹಾಸ ಪತ್ನಿಯಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದ. ಪದ್ಮಿನಿ ಪ್ರತಿದಿನ ತಡವಾಗಿ ಏಳುತ್ತಿದ್ದುದರಿಂದ ಭಾನುವಾರವೂ ಎದ್ದಿರಲಿಕ್ಕಿಲ್ಲ ಎಂದು ಭಾವಿಸಿದ್ದೆವು. ಆದರೆ ಹತ್ತು ಗಂಟೆ ಸುಮಾರಿಗೆ ಬಾವಿಯ ಹಗ್ಗ ಅಲ್ಲಾಡುತ್ತಿದ್ದುದ್ದನ್ನು ನೋಡಿ ಬಾವಿ ಇಣುಕಿದಾಗ ಮಗು ಹಗ್ಗ ಹಿಡಿದು ನೇತಾಡುತ್ತಿತ್ತು ಎಂದು ಗೀತಾ ಹೇಳಿದ್ದು ಆಕೆ ಬೊಬ್ಬೆ ಹಾಕಿದಾಗ ಸ್ಥಳೀಯ ಮನೆಯೊಂದರ ಕಾಂಕ್ರೀಟು ಕೆಲಸಕ್ಕೆ ಬಂದವರು ಹಾಗೂ ಸ್ಥಳೀಯರು ಮಗುವನ್ನು ಮೇಲೆತ್ತಿದರು. ಆದರೆ ಆ ಹೊತ್ತಿಗೆ ಬಾವಿಯಲ್ಲಿ ಮುಳುಗಿದ್ದ ಪದ್ಮಿನಿ ತೀರಿ ಹೋಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ ಈ ಮನೆಯ ಯಾರೂ ಕೂಡ ಊರವರ ಅಲ್ಲದೆ ಪಕ್ಕದ ಮನೆಯರ ಸಂಪರ್ಕದಲ್ಲಿರಲಿಲ್ಲ. ಅವರ ಪಾಡಿಗೆ ಅವರಿರುತ್ತಿದ್ದರು. ಪರಿಸರದ ಯಾವ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿರಲಿಲ್ಲ. ಮೂಲ್ಕಿ ಪೋಲೀಸರು ಕೇಸು ದಾಖಲಿಸಿದ್ದಾರೆ.

 

Comments

comments

Leave a Reply

Read previous post:
ಕಳಪೆ ಕಾಮಗಾರಿಯಿಂದ ಕುಸಿಯಲಿರುವ ಮಾಡ್ರ ಗುತ್ತು ಕೆರೆದಂಡೆ

Photo by Bhagyavan Sanil ಮುಲ್ಕಿ : ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶಿಮಂತೂರು ಮಾಡ್ರಗುತ್ತು ಕೆರೆ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದ್ದು ಮುಂಬರುವ ಮಳೆಗಾಲದಲ್ಲಿ ಕೆರೆ...

Close