ಉಳಿತಾಯ ಮತ್ತು ಹಣ ಹೂಡಿಕೆಯ ವಿಧಾನದ ಬಗ್ಗೆ ಮಾಹಿತಿ

Photo by Bhagyavan Sanil

ಮುಲ್ಕಿ:ಆರ್ಥಿಕ ಸಂಕಷ್ಟ ನಿವಾರಣೆಗೆ ಉಳಿತಾಯದ ಹವ್ಯಾಸ ಇರಬೇಕು ಎಂದು ಇನ್ಸಿಟ್ಯೂಟ್ ಆಫ್ ಕೋಸ್ಟ್ ಅಕೌಂಟ್ಸ್ ಆಫ್ ಇಂಡಿಯಾದ ಮನೋಜ್ ಸಲ್ಡಾನಾ ಹೇಳಿದರು.
ಅವರು ಸೋಮವಾರ ಮುಲ್ಕಿ ವಿಜಯಾ ಕಾಲೇಜಿನ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಉಳಿತಾಯ ಮತ್ತು ಹಣ ಹೂಡಿಕೆಯ ವಿಧಾನದ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.ಹಣ ಹೂಡಿಕೆಯ ಸಂದರ್ಭ ಕಂಪೆನಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಹಣಹೂಡಿಕೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ.ಕೆ.ಆರ್.ಶಂಕರ್ ವಹಿಸಿದ್ದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರೊ.ಪಮೀದಾ ಬೇಗಂ ಉಪಸ್ಥಿತರಿದ್ದರು.

Comments

comments

Leave a Reply

Read previous post:
ವಿದ್ಯೆಗೆ ಪ್ರೋತ್ಸಾಹ ನೀಡಿದರೆ ಜೀವನ ಸಾರ್ಥಕ

Photo by Prakash M Suvarna ಮುಲ್ಕಿ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಮುಖ್ಯ ಕರ್ತವ್ಯ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ರವರು ಮೂಲ್ಕಿ...

Close