ಕಿನ್ನಿಗೋಳಿ ರೋಟರಿ ಕ್ಲಬ್ ಪದಗ್ರಹಣ

Photo By: Suresh Padmanoor
ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸೋಮವಾರ ರಾಜಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಮತ್ತು ಕಾರ್ಯದರ್ಶಿ ಯಶವಂತ ಐಕಳರ ತಂಡಕ್ಕೆ ರೋಟರಿಯ ನಿಯೋಜಿತ ಗವರ್ನರ್ ಡಾ| ಭಾಸ್ಕರ ಎಸ್ ಪದವಿ ಪ್ರಧಾನ ಮಾಡಿದರು. ಇದೇ ಸಂದರ್ಭ ನಿರ್ಗಮನ ಅಧ್ಯಕ್ಷ ಜಯರಾಮ ಪೂಂಜಾರನ್ನು ಸನ್ಮಾನಿಸಲಾಯಿತು. ರೋಟರಿವತಿಯಿಂದ ಗುತ್ತಕಾಡು, ಬೊಳ್ಳೂರು, ಲಿಟಲ್‌ಫ್ಲವರ್ ಶಾಲೆಗಳಿಗೆ ಪುಸ್ತಕ ನೀಡಿಕೆ, ಕುದ್ರಿಪದವು ಅಂಗನವಾಡಿ ಮಕ್ಕಳಿಗೆ ಕುರ್ಚಿಯ ಕೊಡುಗೆ, ಪ್ರತಿಭಾ ಪುರಸ್ಕಾರಗಳು ನಡೆಯಿತು. ರೋಟರಿ ವಲಯ ೩ರ ಸಹಾಯಕ ಗವರ್ನರ್ ಮನೋಹರ್ ರಾವ್, ಕೆ.ಬಿ.ಸುರೇಶ್ ಸಂಪಾಕತ್ವದ ರೋಟರಿಯ  ಮುಖವಾಣಿ “ಸಿಂಚನ” ವನ್ನು ಬಿಡುಗಡೆಗೊಳಿಸಿದರು. ವಲಯ ಸೇನಾನಿ ರತ್ನಾಕರ ಶೆಟ್ಟಿ ವೇದಿಕೆಯಲ್ಲಿದ್ದರು. ಜಯರಾಮ ಪೂಂಜಾ ಸ್ವಾಗತಿಸಿ, ಯಶವಂತ ಐಕಳ ವರದಿ ನೀಡಿದರು. ಹೆರಿಕ್ ಪಾಯಸ್, ವಲೇರಿಯನ್ ಡಿ’ಸೋಜಾ ಅತಿಥಿ ಪರಿಚಯ ಮಾಡಿದರೆ, ಜೋಸ್ಸಿ ಪಿಂಟೋ ನೂತನ ಅಧ್ಯಕ್ಷರನ್ನು ಪರಿಚಯಿಸಿದರು. ಪಿ.ಸತೀಶ್ ರಾವ್ ವಂದಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ಮೆರಿವೆಲ್ ಫ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಸಭೆ

Photo By: Maryvale School ಕಿನ್ನಿಗೋಳಿ: ಮೆರಿವೆಲ್ ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಮಹಾಸಭೆ ಶನಿವಾರ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಬಾಲಕೃಷ್ಣ...

Close