ಮುಲ್ಕಿ : ವನ ಮಹೋತ್ಸವ

Photo by Bhagyavan Sanil

ಮುಲ್ಕಿ: ಮಗುವಿನಂತೆ ಮರಗಳನ್ನು ಮರ ಗಿಡಗಳನ್ನು ರಕ್ಷಿಸಿ ಬೆಳೆಸಿ ಇದರಿಂದ ಮಾತ್ರ ನಮ್ಮ ಉನ್ನತಿ ಸಾಧ್ಯ ಎಂದು ನಾಡೋಜ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಹೇಳಿದರು.
ಅವರು ಕೆಥೋಲಿಕ್ ಸಭಾ ಮುಲ್ಕಿ ಘಟಕ, ಮುಲ್ಕಿ ಪರಿಸರದ ವಿವಿಧ ಸಂಘ ಸಂಸ್ಥೆಗಳು ಹಾಗೂ ಮೂಡಬಿದ್ರೆ ವಲಯ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಭಾನುವಾರ ಸೈಂಟ್ ಜೋಸೆಫ್ ಹಾಲ್‌ನಲ್ಲಿ ನಡೆದ ವನ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೂರು ಗಿಡ ನೆಟ್ಟರೆ ಬೆಳೆದಾಗ ಕೋಟಿಯಲ್ಲಿ ಬೆಲೆ ಬಾಳುತ್ತದೆ ಆದರೆ ಅದು ಅದಕ್ಕಿಂತಲೂ ಅಧಿಕ ಜೀವನ ಮೌಲ್ಯವನ್ನು ನೀಡುತ್ತದೆ. 800ಕ್ಕೂ ಅಧಿಕ ಗಿಡ ನೆಟ್ಟು ಪೋಶಿಸಿದ ತಿಮ್ಮಕ್ಕನ ಮುಪ್ಪಿನಲ್ಲಿ ಬಿಡಿಕಾಸು ಕೂಡಾ ಇಲ್ಲದ ಪರಿಸ್ಥಿತಿ ಉಂಟಾಗಿದೆ.ಅದರೂ ನಮ್ಮ ಊರಿಗೆ ಅಗತ್ಯವಾಗಿರುವ ಆಸ್ಪತ್ರೆಯ ನಿರ್ಮಾಣಕ್ಕೆ ಸರ್ಕಾರವನ್ನು ವಿನಂತಿಸುತ್ತಿದ್ದೇನೆ ಮಕ್ಕಳು ಗಿಡಗಳನ್ನು ನೆಟ್ಟು ಪೋಷಿಸ ಬೇಕು ಎಂದರು.
ಈ ಸಂದರ್ಭ ವಿಜಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ತಿಮ್ಮಕ್ಕನವರಿಗೆ ರೂ1300ಧನಸಹಾಯ ಮಾಡಿದರು. ಕೆಥೋಲಿಕ್ ಸಭಾ ಮೂಲ್ಕಿ ಘಟಕದ ವತಿಯಿಂದತಿಮ್ಮಕ್ಕ ನವರನ್ನು ಸನ್ಮಾನಿಸಿ ರೂ10,000 ಧನಸಹಾಯ ಮಾಡಲಾಯಿತು.
ಈ ಸಂದರ್ಭ ಪ್ರಗತಿಪರ ಕೃಷಿಕ ಡಾ.ಸುರೇಶ್ ಅರಾಹ್ನಾ ರವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಕಟೀಲು ಶ್ರೀ ದುರ್ಗಾ ಪರಮೇಶದವರೀ ದೇವಳದ ಅಚಕರಾದ ವೇಮೂ.ಅನಂತ ಅಸ್ರಣ್ಣ, ಮುಲ್ಕಿ ಅಮಲೋದ್ಭವ ಮಾತಾ ಚರ್ಚು ಗುರುಗಳಾದ ರೆ.ನೋರ್ಬಟ್ ಲೋಬೊ, ಕಾರ್ನಾಡು ನೂರ್ ಮಸೀದಿಯ ಖತೀಬರಾದ ಮೌಲಾನಾ ಜಾಫರ್ ಸಾದಿಕ್ ಫೈಝೀ, ಮುಲ್ಕಿ ನಗರ ಪಂಚಾಯತ್ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಮುಲ್ಕಿ ಪೋಲೀಸ್ ನೀರೀಕ್ಷಕ ಬಶೀರ್ ಅಹಮ್ಮದ್, ಕೆಥೋಲಿಕ್ ಸಭಾ ವಾರಡೋ ಅಧ್ಯಕ್ಷ ವಿಲ್ಸನ್ ಡಿಸೋಜಾ, ಉಪವಲಯ ಅರಣ್ ಅಧಿಕಾರಿ ಯೋಗೀಶ್ವರ್, ಅಮಲೋದ್ಭವ ಮಾತಾ ದೇವಾಲಯದ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ, ಕೆಥೋಲಿಕ್ ಸಭಾ ಮುಲ್ಕಿ ಘಟಕದ ಅಧ್ಯಕ್ಷ ರೋಲ್ಫಿ ಡಿಕೋಸ್ತಾ, ಮುಲ್ಕಿ ವಿಶ್ವ ಬ್ರಾಹ್ಮಣ ಸಮಾಜ ಅಧ್ಯಕ್ಷ ಮಧು ಆಚಾರ್ಯ, ಮುಲ್ಕಿ ರೋಟರಿ ಅಧ್ಯಕ್ಷ ಜೆಸಿ ಸಾಲ್ಯಾನ್, ಬಿಲ್ಲವ ಸಂಘದ ಅಧ್ಯಕ್ಷ ಕೆ.ರಾಘು ಸುವರ್ಣ, ವೃಕ್ಷ ಪ್ರೇಮಿ ಕೃಷ್ಣಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟದ ಲೋಕೇಶ್ ಚಿತ್ರಾಪು, ಯಂಗ್ ಸ್ಟಾರ‍್ಸ್ ಅಧ್ಯಕ್ಷ ಸುರೇಶ್ ಕುಮಾರ್ ಉಪಸ್ಥಿತರಿದ್ದರು.
ರೋಲ್ಫಿ ಡಿಕೋಸ್ತಾ ಸ್ವಾಗತಿಸಿದರು.ಕೃಷ್ಣಪ್ಪ ಪ್ರಮಾಣವಚನ ಭೋಧಿಸಿದರು ದಯಾನಂದ ಕತ್ತಲಸಾರ್ ನಿರೂಪಿಸಿದರು. ಬಂಟರ ಸಂಘದ ಉಪಾಧ್ಯಕ್ಷ ರವಿರಾಜ ಶೆಟ್ಟಿ ವಂದಿಸಿದರು.

 

Comments

comments

Leave a Reply

Read previous post:
ಉಳಿತಾಯ ಮತ್ತು ಹಣ ಹೂಡಿಕೆಯ ವಿಧಾನದ ಬಗ್ಗೆ ಮಾಹಿತಿ

Photo by Bhagyavan Sanil ಮುಲ್ಕಿ:ಆರ್ಥಿಕ ಸಂಕಷ್ಟ ನಿವಾರಣೆಗೆ ಉಳಿತಾಯದ ಹವ್ಯಾಸ ಇರಬೇಕು ಎಂದು ಇನ್ಸಿಟ್ಯೂಟ್ ಆಫ್ ಕೋಸ್ಟ್ ಅಕೌಂಟ್ಸ್ ಆಫ್ ಇಂಡಿಯಾದ ಮನೋಜ್ ಸಲ್ಡಾನಾ ಹೇಳಿದರು....

Close