ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ, ಕಾಳಿಕಾಂಬ ಮಹಿಳಾವೃಂದದ ಪದಗ್ರಹಣ

Photo By: Raghunath Kamath
ಕಿನ್ನಿಗೋಳಿ: ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ಕಾಳಿಕಾಂಬ ಮಹಿಳಾ ವೃಂದದ ನೂತನ ಪದಾಧಿಕಾರಿಗಳ ಪದವಿಸ್ವೀಕಾರ ಕಾರ್ಯಕ್ರಮ ರವಿವಾರ ರಾಜರತ್ನ ಪುರದ ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ನೂತನ ಅಧ್ಯಕ್ಷ ದಿನೇಶ್ ಕೆ ಹಾಗೂ ಮಹಿಳಾ ವೃಂದದ ನೂತನ ಅಧ್ಯಕ್ಷೆ ರತ್ನಪ್ರಭಾಕರ ಆಚಾರ್ಯ ಅಧಿಕಾರ ಸ್ವೀಕರಿಸಿದರು. ಬೈಕಾಡಿ ಜನಾರ್ಧನ ಆಚಾರ್ಯ, ಕಟಪಾಡಿ ಶ್ರೀ ಕಾಳಿಕಾಂಬ ದೇವಳದ ಆಡಳಿತ ಮೊಕ್ತೇಸರ ಸದಾಶಿವ ಆಚಾರ್ಯ, ಅಧ್ಯಾಪಕಿ ಬೈಕಾಡಿ ರತ್ನಾವತಿ ಆಚಾರ್ಯ, ಸಭಾಭವನದ ಸಮಿತಿಯ ಅಧ್ಯಕ್ಷ ಅಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ, ಸಂಘದ ನಿರ್ಗಮನ ಅಧ್ಯಕ್ಷ ಏಳಿಂಜೆ ಭಾಸ್ಕರ ಆಚಾರ್ಯ, ಮಹಿಳಾ ವೃಂದದ ನಿರ್ಗಮನ ಅಧ್ಯಕ್ಷೆ ಮಮತಾ ಸುರೇಂದ್ರ ಆಚಾರ್ಯ, ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ ಯಲ್ಲಿ ಗರಿಷ್ಠ ಸಾಧನೆಗೈದ ಮೇಘನರನ್ನು ಸನ್ಮಾನಿಸಲಾಯಿತು. ಕೆ.ಬಿ.ಸುರೇಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಉದಯ್ ಕುಮಾರ್ ವರದಿ ಮಂಡಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಪರಿಸರ ಜಾಗ್ರತಿ

Photo By: Raghunath Kamath ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕಿನ್ನಿಗೋಳಿ ಗ್ರಾಮ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಸಹಯೋಗದಲ್ಲಿ ನೈರ್ಮಲ್ಯದಡಿ ಸುಸ್ಥಿರತೆ...

Close