ನಿಡ್ಡೋಡಿ ’ಎಣೆಲ್ದ ಕಂಡೊಡು ಕೆಸರ‍್ದ ಗೊಬ್ಬು’

Photo By: Mithuna  Kodethooru

ಕಿನ್ನಿಗೋಳಿ: ನಿಡ್ಡೋಡಿ ಶ್ರೀ ನಾರಾಯಣಗುರು ಪ್ರಸಾದಿತ ಸಂಘ(ರಿ) ನಿಡ್ಡೋಡಿ. ಹಾಗೂ ಯುವವಾಹಿನಿ(ರಿ) ನಿಡ್ಡೋಡಿ ಘಟಕದ ಜಂಟಿ ಆಶ್ರಯದಲ್ಲಿ ’ಎಣೆಲ್ದ ಕಂಡೊಡು ಕೆಸರ‍್ದ ಗೊಬ್ಬು’ ಎಂಬ ಕ್ರೀಡೋತ್ಸವವು ಬೋಂಟಳಿಕೆ ಕೆಸರು ಗದ್ದೆಯಲ್ಲಿ ನಡೆಯಿತು. ಯುವವಾಹಿನಿ ಕೇಂದ್ರಿಯ ಸಮಿತಿ ಮಂಗಳೂರಿನ ನಿಯೋಜಿತ ಅಧ್ಯಕ್ಷರಾದ ವಿಜಯ ಕುಮಾರ್ ಕುಬೆವೂರು. ಕೆಸರುಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಮತ್ತು ಬೆಳೆಸುವ ಜವಬ್ದಾರಿ ಯುವವಾಹಿನಿಗೆ ಇದೆ ಎಂದರು. ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರಿಯ ಸಮಿತಿ ಮಂಗಳೂರು ಇದರ ಅಧ್ಯಕ್ಷ ಕಿಶೋರ್ ಕೆ. ಬಿಜೈ, ಶ್ರೀ ನಾರಾಯಣ ಗುರು ಪ್ರಸಾದಿತ ಸಂಘದ ಅಧ್ಯಕ್ಷ ಚಂದಯ್ಯ ಸುವರ್ಣ, ಪುಟ್ಟಣ್ಣ ಪೂಜಾರಿ ಭಟ್ರಬೈಲು, ರಾಮ ಪೂಜಾರಿ ಕಾನ, ವೆಂಕಪ್ಪ ಕೋಟ್ಯಾನ್ ಮೇಲ್ದಬೆಟ್ಟು, ಯುವವಾಹಿನಿ ಸಂಘದ ಅಧ್ಯಕ್ಷ ಜಯಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ನಿಧಿಶೋಧ, ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ಕಂಬಳ, ಕಬಡ್ಡಿ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಯುವವಾಹಿನಿ ನಿಡ್ಡೋಡಿ ಘಟಕದ ವತಿಯಿಂದ ಗ್ರಾಮೀಣ ಶೈಲಿಯ ಊಟೋಪಾಚಾರದ ವ್ಯವಸ್ಥೆ ಮಾಡಲಾಗಿತ್ತು.

 

Comments

comments

Leave a Reply

Read previous post:
“ಶ್ರೀಮಿತ್ತೂರು”ರವರಿಗೆ ಕೊ.ಅ.ಉಡುಪ ಪ್ರಶಸ್ತಿ

Photo By: Yugapurusha Kinnigoli ಕಿನ್ನಿಗೋಳಿ : ಯುಗಪುರುಷ ಸಂಸ್ಥಾಪಕ ದಿ| ಕೊ.ಅ.ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ...

Close