ಪ್ರಕಟನೆ : ಮೃತ ವ್ಯಕ್ತಿಯ ವಾರೀಸುದಾರಿಗೆ ವಿನಂತಿ

ದಿನಾಂಕ 28.062012 ರಂದು ಮದ್ಯಾಹ್ನ1.30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಕೆಮ್ರಾಲ್ ಗ್ರಾಮದ ಪಕ್ಷಿಕೆರೆ ಎಂಬಲ್ಲಿ
ರಸ್ತೆ ಬದಿಯಲ್ಲಿ ಒರ್ವ ವ್ಯಕ್ತಿ ಬಿದ್ದಿದ್ದು ಆತನನ್ನು 108 ಅಂಬುಲೆನ್ಸ್ ವಾಹನದಲ್ಲಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ಆತನು ದಿನಾಂಕ 29.06.2012ರಂದು ಬೆಳಿಗ್ಗೆ 10.15ಗಂಟೆಗೆ ಮೃತಪಟ್ಟಿರುದಾಗಿದೆ ಸದ್ರಿ ಮೃತ ವ್ಯಕ್ತಿಯ ಮುಖ ಪರಿಚಯವಿದ್ದು ಎಲ್ಲಿ ವಾಸ ಮಾಡಿಕೊಂಡಿರುತ್ತಾನೆ ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ ಅಲ್ಲದೆ ಆತನು ಕಾಯಿಲೆಯಿಂದ ಸದ್ರಿ ಸ್ಥಳದಲ್ಲಿ ಬಿದ್ದು ನಂತರ ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿರುವುದಾಗಿದೆ. ಇದರ ಬಗ್ಗೆ ಮುಲ್ಕಿ ಠಾಣಾ ಯು.ಡಿ. ಆರ್ ನಂಬರ್  16/2012 ಕಲಂ:174 ಸಿ,ಆರ್.ಪಿ.ಸಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿದ್ದು ಈ ಭಾವಚಿತ್ರದಲ್ಲಿ ನಮೂದಿಸಿದ ಗಂಡಸಿನ ಪ್ರಾಯ ಸುಮಾರು 55ವರ್ಷವಾಗಿದ್ದು ಅರ್ಧ ಕೈ ತೋಳಿನ ಖಾಕಿ ಬಣ್ಣದ ಟೀ ಶರ್ಟು ಧರಿಸಿದ್ದು, ನಸು ಬೂದು ಬಣ್ಣದ ಪ್ಯಾಂಟನ್ನು ಧರಿಸಿರುತ್ತಾರೆ. ಕೆಲವು ದಿನಗಳಿಂದ ಹಳೆಯಂಗಡಿ, ಪಕ್ಷಿಕೆರೆ, ಇಂದಿರಾನಗರ ಮುಂತಾದ ಕಡೆಗಳಲ್ಲಿ ಅಲೆದಾಡುತ್ತಿದ್ದು, ಇವರ ವಾರೀಸುದಾರರು ಯಾರು ಎಂಬುದಾಗಿ ತಿಳಿದು ಬಂದಿರುವುದಿಲ್ಲ. ಆದುದರಿಂದ ವಾರೀಸುದಾರರು ಇದ್ದಲ್ಲಿ ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಬೇಕಾಗಿ ವಿನಂತಿ:
ಮುಲ್ಕಿ ಪೊಲೀಸು ಠಾಣೆ : 0824-2290533
ಮುಲ್ಕಿ ಪೊಲೀಸು ನಿರೀಕ್ಷಕರು : 9480805332
ಜಿಲ್ಲಾ ಪೊಲೀಸು ನಿಸ್ತಂತು ಕೊಠಡಿ : 0824- 2220500
ನಗರ ಪೊಲೀಸು ನಿಸ್ತಂತು ಕೊಠಡಿ : 0824-2220800
ಸಹಿ/-
ಠಾಣಾಧಿಕಾರಿಯವರು
ಮುಲ್ಕಿ ಪೊಲೀಸು ಠಾಣೆ

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಿ ಕ್ಲಬ್ ಪದಗ್ರಹಣ

Photo By: Suresh Padmanoor ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸೋಮವಾರ ರಾಜಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಮತ್ತು...

Close