“ಶ್ರೀಮಿತ್ತೂರು”ರವರಿಗೆ ಕೊ.ಅ.ಉಡುಪ ಪ್ರಶಸ್ತಿ

Photo By: Yugapurusha Kinnigoli
ಕಿನ್ನಿಗೋಳಿ : ಯುಗಪುರುಷ ಸಂಸ್ಥಾಪಕ ದಿ| ಕೊ.ಅ.ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಸಾಹಿತಿ, ಹಿಂದಿ, ಸಂಸ್ಕೃತ ಪ್ರಾಧ್ಯಾಪಕ ಶ್ರೀಮಿತ್ತೂರು (ಎಂ.ವಿ.ಭಟ್)ರವರಿಗೆ ನೀಡಲಾಗುವುದು.
ಶ್ರೀಮಿತ್ತೂರು ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದ ಎಂ.ವಿ.ಭಟ್ ರವರು ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರು. ಕೊ.ಅ.ಉಡುಪರ ಆಪ್ತಮಿತ್ರರಾಗಿದ್ದ ಇವರ ಬರಹಗಳು ಯುಗಪುರುಷ ಪತ್ರಿಕೆಯಲ್ಲಿ 1953ರಿಂದ ಪ್ರಕಟಗೊಳ್ಳುತ್ತಾ ಬಂದಿವೆ. ಯುಗಪುರುಷ ಮಾತ್ರವಲ್ಲದೆ ನಾಡಿನ ಹಿರಿಯ ಕಿರಿಯ ಪತ್ರಿಕೆಗಳಲ್ಲೂ ಇವರ ಬರಹಗಳು ಪ್ರಕಟಗೊಂಡಿವೆ. ಈವರೆಗೆ17 ಕಾದಂಬರಿಗಳು, 7 ಕಥಾಸಂಕಲನ, ಸಂಸ್ಕೃತದಲ್ಲಿ ಬೃಹತ್ ಸಂಶೋಧನಾತ್ಮಕ ಪ್ರಬಂಧ ಸಂಕಲನ ಪ್ರಕಟಗೊಂಡಿವೆ.2004ರಲ್ಲಿ ಪ್ರಕಟವಾದ “ನೆನಪಿನ ಬಿಂಬಗಳು” ಇದಕ್ಕೆ ಆ ವರ್ಷದ ಅತ್ಯುತ್ತಮ ಆತ್ಮಚರಿತ್ರೆ ಎಂದು ಕರ್ನಾಟಕ ಸರಕಾರದ ಬಹುಮಾನ ಬಂದಿದೆ.
ಪ್ರಶಸ್ತಿಯನ್ನು ಇದೇ ಜುಲೈ24ರಂದು ಯುಗಪುರುಷ ಸಭಾಭವನದಲ್ಲಿ ನಾಡಿನ ಗಣ್ಯರ ಉಪಸ್ಥಿತಿಯಲ್ಲಿ ಜರಗಲಿರುವ ಕೊ.ಅ.ಉಡುಪ ಸಂಸ್ಮರಣ ಸಮಾರಂಭದಲ್ಲಿ ರೂ. 10,000/- ನಗದು, ಗೌರವ ಫಲಕ, ಪ್ರಶಸ್ತಿ ಪತ್ರದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Comments

comments

Leave a Reply

Read previous post:
ಪ್ರಕಟನೆ : ಮೃತ ವ್ಯಕ್ತಿಯ ವಾರೀಸುದಾರಿಗೆ ವಿನಂತಿ

ದಿನಾಂಕ 28.062012 ರಂದು ಮದ್ಯಾಹ್ನ1.30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಕೆಮ್ರಾಲ್ ಗ್ರಾಮದ ಪಕ್ಷಿಕೆರೆ ಎಂಬಲ್ಲಿ ರಸ್ತೆ ಬದಿಯಲ್ಲಿ ಒರ್ವ ವ್ಯಕ್ತಿ ಬಿದ್ದಿದ್ದು ಆತನನ್ನು 108 ಅಂಬುಲೆನ್ಸ್...

Close