ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢ ಶಾಲೆಯಲ್ಲಿ ಬೀಳ್ಕೊಡುಗೆ

Photo By: Sharath Shetty
ಕಿನ್ನಿಗೋಳಿ:  ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಮಾಡಿದವರು ಸದಾ ನೆನಪಿನಲ್ಲಿ ಉಳಿಯುವಂತವರಾಗುತ್ತಾರೆ ಎಂದು ಲಿಟ್ಲ್ ಫ್ಲವರ್ ಶಾಲಾ ಸಂಚಾಲಕಿ ಭಗಿನಿ ಗ್ರೇಸ್ ಮೋನಿಕ್ ಹೇಳಿದರು. ಅವರು ಗುರುವಾರ ಸಂಸ್ಥೆಯಿಂದ ವರ್ಗಾವಣೆಗೊಳ್ಳುತ್ತಿರುವ ಮುಖ್ಯ ಶಿಕ್ಷಕಿ ಭಗಿನಿ ರೀನಾ ರವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಭಗಿನಿ ರೀನಾರನ್ನು ಸನ್ಮಾನಿಸಲಾಗಿ, ಇದೇ ಶಿಕ್ಷಣ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಳ್ಳುತ್ತಿರುವ ಅಪೋಲಿ ಡಿ’ಸೋಜರನ್ನೂ ಬೀಳ್ಕೊಡಲಾಯಿತು. ಶಿಕ್ಷಕರಾದ ಸುಮುಖಾನಂದ ಜಲವಳ್ಳಿ, ವಿಜಯಲಕ್ಷ್ಮೀ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿನ್ಸೆಂಟ್ ಮತಾಯಸ್ ಉಪಸ್ಥಿತರಿದ್ದರು. ಶಿಕ್ಷಕಿ ಮರ್ಸಿನ್ ಕ್ರಾಸ್ತ ವಂದಿಸಿ, ಹಿಲರಿ ಮಸ್ಕರೇನಸ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕೆಂಚನಕೆರೆ ಶಾಲೆಯಲ್ಲಿ ನಾವು-ನೀವು

Phopto By: Raghunath Kamath ಕಿನ್ನಿಗೋಳಿ: ಶಿಕ್ಷಣ ಇಲಾಖೆಯ "ನಾವು-ನೀವು" ವಿಶೇಷ ಕಾರ್ಯಕ್ರಮ  ಕೆಂಚನಕೆರೆ ಶಾಲೆಯಲ್ಲಿ ನಡೆಯಿತು,. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ವಿಶೇಷ ಜಾಥಾ ದಲ್ಲಿ...

Close