ಶಿಮಂತೂರಿನಲ್ಲಿ ಪರಿಸರ ಜಾಗೃತಿ

ಕಿನ್ನಿಗೋಳಿ:  ಶಿಮಂತೂರು, ವಿಧ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆಯೆಂದು ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಮಾಜಿ ಪ್ರಾಚಾರ್ಯ ಉದಯ ಕುಮಾರ ಹಬ್ಬು ಹೇಳಿದರು. ಅವರು ರವಿವಾರ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂಡ್ಕೂರು ಭಾರ್ಗವ ಜೆ.ಸಿ.ಐ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಲಾಯಿತು.ಜೆ.ಸಿ.ಐ ಅಧ್ಯಕ್ಷ ಸುರೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದು, ಶಾಲಾ ಮುಖ್ಯ ಶಿಕ್ಷಕ ಪ್ರಥ್ವೀಶ್. ಕರಿಕೆ, ಶಿಕ್ಷಕರಾದ ಭರತ್ ನಾಯಕ್, ಹರೀಶ್.ಬಿ. ಉಮೇಶ್.ಎನ್. ಗಣೇಶ್  ಮತ್ತಿತರರಿದ್ದರು. ಜೆ.ಸಿ ಐ. ನಿಕಟಪೂರ್ವಾಧ್ಯಕ್ಷ ಸುಧಾಕರ ಪೊಸ್ರಾಲ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ನಿಡ್ಡೋಡಿ ’ಎಣೆಲ್ದ ಕಂಡೊಡು ಕೆಸರ‍್ದ ಗೊಬ್ಬು’

Photo By: Mithuna  Kodethooru ಕಿನ್ನಿಗೋಳಿ: ನಿಡ್ಡೋಡಿ ಶ್ರೀ ನಾರಾಯಣಗುರು ಪ್ರಸಾದಿತ ಸಂಘ(ರಿ) ನಿಡ್ಡೋಡಿ. ಹಾಗೂ ಯುವವಾಹಿನಿ(ರಿ) ನಿಡ್ಡೋಡಿ ಘಟಕದ ಜಂಟಿ ಆಶ್ರಯದಲ್ಲಿ ’ಎಣೆಲ್ದ ಕಂಡೊಡು ಕೆಸರ‍್ದ ಗೊಬ್ಬು’...

Close