ಮುಲ್ಕಿ ರಾಮಕೃಷ್ಣ ಪೂಂಜ ದತ್ತಿ ನಿಧಿ-ವಿದ್ಯಾರ್ಥಿವೇತನ ವಿತರಣೆ

Photo By: Prakash suvarna
ಕಿನ್ನಿಗೋಳಿ: 2011-12 ಸಾಲಿನ ಮುಲ್ಕಿ ರಾಮಕೃಷ್ಣ ಪೂಂಜ ’ದತ್ತಿನಿಧಿ’ ವತಿಯಿಂದ ಮುಲ್ಕಿ ಆಸುಪಾಸಿನ ಶಾಲಾ-ಕಾಲೇಜುಗಳ 215 ಬಡ ವಿದ್ಯಾರ್ಥಿಗಳಿಗೆ ಅಂದಾಜು 3 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ವಿದ್ಯಾರ್ಥಿ ವೇತನವನ್ನು ಕಾರ್ನಾಡಿನ ಪೂಂಜ ಕುಟುಂಬದ ಸ್ವಗೃಹ “ಕಾರ್ನಾಡು ವಿಲ್ಲಾ” ದಲ್ಲಿ ಶೀಮತಿ ಪದ್ಮಾವತಿ ಹರಿ ಪೂಂಜ ರವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಮುಖ್ಯ ಆತಿಥಿಗಳಾಗಿ ಪ್ರೊ.ಕೆ.ಆರ್. ಶಂಕರ್, ಪ್ರಾಂಶುಪಾಲರು ವಿಜಯ ಕಾಲೇಜು ಮುಲ್ಕಿ ಇವರು ಮಾತನಾಡಿ ವಿದ್ಯಾರ್ಥಿಗಳು ಈಗಿನ ವಾತಾವರಣದಲ್ಲಿ ತಮ್ಮ ಗಮನವನ್ನು ಬೇರೆಡೆಗೆ ತಿರುಗಿಸದೆ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿ ವೇತನವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಪ್ರಜೆಯಾಗಿ ಮೂಡಿ ಬರಬೇಕು ಅಲ್ಲದೆ ತಂದೆತಾಯಿಗಳಿಗೆ, ಹಿರಿಯರಿಗೆ ಹಾಗೂ ವಿದ್ಯಾರ್ಜನೆಗಾಗಿ ಸಹಕರಿಸಿದ ಎಲ್ಲರಿಗೂ ಋಣಿಗಳಾಗಿದ್ದು ಅವರ ಮಾತು ನುಡಿಗಳನ್ನು ಸರಿಯಾಗಿ ಪಾಲಿಸಿಕೊಂಡು ಸುಸಂಸ್ಕೃತ ವ್ಯಕ್ತಿಗಳಾಗಿ ಮುಂದೆ ಬರಬೇಕೆಂದು ಶುಭ ಹಾರೈಸಿದರು.
ಶ್ರೀಯುತ ಎಂ.ಎಚ್. ಅರವಿಂದ ಪೂಂಜರವರು ಈ ಬಗ್ಗೆ ಮುತುವರ್ಜಿ ವಹಿಸಿ ತನ್ನ ತೀರ್ಥರೂಪರಾದ ಶ್ರೀಯುತ ಹರಿಪೂಂಜರವರ ಸಾಮಾಜಿಕ ಸೇವೆ ಧಾರ್ಮಿಕ ಸೇವೆ ಹಾಗೂ ಶೈಕ್ಷಣಿಕ ಸೇವೆಯನ್ನು ಮುಂದುವರಿಸಿಕೊಂಡು ಅದನ್ನು ಇನ್ನಷ್ಟು ಉತ್ತಮ ರೀತಿಯಲ್ಲಿನಡೆಸಿಕೊಂಡು ಬರುತ್ತಿರುವುದು ಪ್ರಸಂಶನೀಯವಾಗಿದೆ.
ಸಮಾರಂಭದಲ್ಲಿ ಶ್ರೀಯುತ ಎಂ.ಆರ್. ಹರಿಪೂಂಜರವರ ಸುಪುತ್ರಿಯವರಾದ ಶ್ರೀಮತಿ ಅನಿಂದ.ಎಸ್.ಶೆಟ್ಟಿ ಮತ್ತು ಶ್ರೀಮತಿ ಅನಿತ.ಡಿ. ಶೆಟ್ಟಿ ಅಲ್ಲದೆ ಅಳಿಯಂದಿರಾದ ಶ್ರೀಯುತ ಸಂಜಯ್.ಕೆ.ಶೆಟ್ಟಿ ಮತ್ತು ಶ್ರೀಯುತ ದಿನೇಶ್.ಬಿ.ಶೆಟ್ಟಿ ಇವರುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಹಾಗೂ ಶ್ರೀಯುತ ಹರಿಪೂಂಜರವರ ಸೊಸೆ ಶ್ರೀಮತಿ ಆಶ್ವಿನಿ ಅರವಿಂದ ಪೂಂಜ ಹಾಗೂ ಮೊಮ್ಮಕ್ಕಳು ಉಪಸ್ಥಿತರಿದ್ದರು.
ಮುಲ್ಕಿ ವಿಜಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಸ್ಯಾಮ್ ಮಾಬೇನ್‌ರವರು ಆತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿ ಪೂಂಜ ಕುಟುಂಬದ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯನ್ನು ಶ್ಲಾಘಿಸಿ ಕುಟುಂಬದ ಸದಸ್ಯರೆಲ್ಲರನ್ನು ಅಭಿನಂದಿಸಿದರು. ಎಂ.ಆರ್.ಪೂಂಜ ಐಟಿಐ ತಪೋವನ ತೋಕೂರು ಇಲ್ಲಿನ ಪ್ರಾಂಶುಪಾಲರಾದ ಶ್ರೀಯುತ ವೈ.ಎನ್.ಸಾಲ್ಯಾನ್ ರವರು ವಂದನಾರ್ಪನೆಗೈದರು.

Comments

comments

Leave a Reply

Read previous post:
ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢ ಶಾಲೆಯಲ್ಲಿ ಬೀಳ್ಕೊಡುಗೆ

Photo By: Sharath Shetty ಕಿನ್ನಿಗೋಳಿ:  ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಮಾಡಿದವರು ಸದಾ ನೆನಪಿನಲ್ಲಿ ಉಳಿಯುವಂತವರಾಗುತ್ತಾರೆ ಎಂದು ಲಿಟ್ಲ್ ಫ್ಲವರ್ ಶಾಲಾ ಸಂಚಾಲಕಿ ಭಗಿನಿ ಗ್ರೇಸ್...

Close