ವಿಧ್ಯಾಗಿರಿ ಅಂಗನವಾಡಿ ಶಾಲೆಗೆ ಶಾಶ್ವತ ಕೊಡುಗೆ

ಕಿನ್ನಿಗೋಳಿ: ಜೆ.ಸಿ.ಐ. ಮುಂಡ್ಕೂರು ಭಾರ್ಗವದ ನೇತೃತ್ವದಲ್ಲಿ ಜೆ.ಸಿ.ಐ ಭಾರ್ಗವದ ಅಧ್ಯಕ್ಷರಾದ ಸುರೇಂದ್ರ ಭಟ್ ಅವರ ಅಧ್ಯಕ್ಷತೆಯಲ್ಲಿ ಕಡಂದಲೆ ವಿಧ್ಯಾಗಿರಿ ಅಂಗನವಾಡಿ ಶಾಲೆಗೆ ಶಾಶ್ವತ ಯೋಜನೆಯಡಿ “ಸಮಗ್ರ ವಿಷಯ ಪ್ರಧಾನ ಶಾಲಾ ಪೂರ್ವ ಶಿಕ್ಷಣದ ವಾರ್ಷಿಕ ವೆಳಾಪಟ್ಟಿ”ಯ ಗೋಡೆ ಬರಹದ ಕೊಡುಗೆ ನೀಡಲಾಯಿತು. ಜೆಸಿ ರಾಜ್ಯ ತರಬೇತುದಾರರು ಹಾಗೂ ಉಪನ್ಯಾಸಕರಾದ ಜೇಸಿ. ಪ್ರಭಾಕರ ಶೆಟ್ಟಿಯವರು ಉದ್ಘಾಟಿಸಿದರು. ಕಡಂದಲೆ ಪಾಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯಾ, ಹಾಗೂ ಕು. ಸುನೀತಾ, ಉದ್ಯಮಿ ರಾಧಿಕಾ ಕೃಷ್ಣ ನಾಯಕ್, ಉಪಸ್ಥಿತರಿದ್ದು, ಶಾಲಾ ಶಿಕ್ಷಕಿಯಾದ ಬೆನಡಿಕ್ಟ ದಾಂತೀಸ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಮುಲ್ಕಿ ರಾಮಕೃಷ್ಣ ಪೂಂಜ ದತ್ತಿ ನಿಧಿ-ವಿದ್ಯಾರ್ಥಿವೇತನ ವಿತರಣೆ

Photo By: Prakash suvarna ಕಿನ್ನಿಗೋಳಿ: 2011-12 ಸಾಲಿನ ಮುಲ್ಕಿ ರಾಮಕೃಷ್ಣ ಪೂಂಜ ’ದತ್ತಿನಿಧಿ’ ವತಿಯಿಂದ ಮುಲ್ಕಿ ಆಸುಪಾಸಿನ ಶಾಲಾ-ಕಾಲೇಜುಗಳ 215 ಬಡ ವಿದ್ಯಾರ್ಥಿಗಳಿಗೆ ಅಂದಾಜು 3...

Close