ಮುಲ್ಕಿ ಮಕ್ಳಳ ಶಿಕ್ಷಣ ಹಕ್ಕು ಅಭಿಯಾನ ಶಾಲೆಗಾಗಿ ನಾವು-ನೀವು

ಕಿನ್ನಿಗೋಳಿ: ಮುಲ್ಕಿಯ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಮಕ್ಳಳ ಶಿಕ್ಷಣ ಹಕ್ಕು ಅಭಿಯಾನದ ಆಶ್ರಯದಲ್ಲಿ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಜರಗಿತು. ಮುಲ್ಕಿ ಗಾಂಧಿ ಮೈದಾನದಲ್ಲಿ ಜಾಥಾ ಉದ್ಘಾಟನೆಗೊಂಡು ಗಣ್ಯರು, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳು ಫೋಷಣೆಗಳೊಂದಿಗೆ ಕಾರ್ನಾಡು ಸದಾಶಿವ ರಾವ್ ವೃತ್ತ ಮಾರ್ಗವಾಗಿ ದರ್ಗಾ ರಸ್ತೆಯ ಮೂಲಕ ಜಾಥಾ ಶಾಲಾ ಪ್ರವೇಶ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ನಗರ ಪಂಚಾಯತ್‌ನ ಅಧ್ಯಕ್ಷರಾದ ಶಶಿಕಾಂತ ಶೆಟ್ಟಿ ಇವರು ವಹಿಸಿದ್ದು ಪೋಷಕರಿಗೆ ಮತ್ತು ಮಕ್ಕಳಿಗೆ ಶಿಕ್ಷಣದ ಮಹತ್ತ್ವವನ್ನು ವಿವರಿಸಿದರು.
ಮುಲ್ಕಿ ನಗರ ಪಂಚಾಯತ್‌ನ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬೋಳ ಸುರೇಂದ್ರ ಕಾಮತ್, ಸಮುದಾಯ ಆರೋಗ್ಯ ಕೇಂದ್ರದ ಸಹಾಯಕಿ ಅನಿತಾ, ಸಂಪನ್ಮೂಲ ವ್ಯಕ್ತಿ ಚಂದ್ರಕಲಾ ಮುಖ್ಯ ಶಿಕ್ಷಕಿ ಸುಜಾತಾ ಕುಮಾರಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಸರ್ವೋದಯ ಫ್ರೌಡ ಶಾಲೆಯ ನಿವೃತ್ತ ಕಲಾ ಶಿಕ್ಷಕ ಸನ್ಮಾನ

ಕಲ್ಲಮುಂಡ್ಕೂರು: ಕಲ್ಲಮುಂಡ್ಕೂರು ಸರ್ವೋದಯ ಫ್ರೌಡ ಶಾಲೆಯ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎನ್. ಎಸ್. ಭಂಡಾರಿಯವರನ್ನು  ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಸಂಚಾಲಕ ಸುಭಾಶ್ಚಂದ್ರ...

Close