ಪಾವಂಜೆಯಲ್ಲಿ ಕೆಸರು ಗದ್ದೆ ಕ್ರೀಡೋತ್ಸವ

Photos by Mithuna Kodethoor
ಮುಲ್ಕಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಲ್ಲರಿಗೂ ಪಾವಂಜೆಯ ಜನ ಜಾತ್ರೆ ಕಂಡು ಅಚ್ಚರಿ. ಅದರಲ್ಲೂ ನೂರಾರು ವಿದ್ಯಾರ್ಥಿಗಳು ಕೆಸರಿನ ಗದ್ದೆಯಲ್ಲಿ ಓಡುವುದನ್ನು, ಚೆಂಡಾಟ ಆಡುವುದನ್ನು, ಹಗ್ಗಜಗ್ಗಾಟ ಆಡುವುದನ್ನು 3 ಕಾಲಿನಲ್ಲಿ ಓಡುವುದನ್ನು ಕಂಡು ಸಂಭ್ರಮಿಸಿದರು. ಕೆಸರು ಗದ್ದೆ ಕ್ರೀಡೋತ್ಸವ ಸಮಿತಿಯ ಆಶ್ರಯದಲ್ಲಿ ಆರಂಭಗೊಂಡ ತುಳುನಾಡು ಕೃಷಿ ಜನಪದೋತ್ಸವವು ಕೆಸರಿನ ಗದ್ದೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಪ್ರಾಥಮಿಕ, ಪ್ರೌಢ, ಪದವೀಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ, ಖುಷಿಪಟ್ಟರು. ಭಾನುವಾರ ಸಾರ್ವಜನಿಕ ವಿಭಾಗದವರಿಗೆ ಕೆಸರುಗದ್ದೆ ಕ್ರೀಡೋತ್ಸವ ನಡೆಯಲಿದೆ.
ಚಿಕ್ಕಮಮಗಳೂರಿನ ವೇದವಿಜ್ಞಾನ ಕೇಂದ್ರದ ಶ್ರೀ ಕೆ.ಎಸ್. ನಿತ್ಯಾನಂದ ಕೆಸರುಗದ್ದೆ ಕ್ರೀಡೋತ್ಸವವನ್ನು ಶನಿವಾರ ಉದ್ಘಾಟಿಸಿದರು. ನರಸಿಂಹ ಪೈ, ನಿರಂಜನ್ ಭಟ್, ಜಯಶೆಟ್ಟಿ, ಪಿತಾಂಬರ್ ಶೆಟ್ಟಿಗಾರ್, ಪಿ. ಪಿ. ಹೆಗ್ಡೆ, ವಿನೋದ್ ಎಸ್. ಸಾಲ್ಯಾನ್, ರಾಮಚಂದ್ರ ಶೆಣೈ ಮುಂತಾದವರಿದ್ದರು. ಸಂಜೆ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ವೆಂಕಟೇಶ ಪ್ರಸನ್ನ, ರಘುನಾಥ ಸೋಮಯಾಜಿ, ಭಾಸ್ಕರ ದೇವಸ್ಯ, ದುರ್ಗಾಪ್ರಸಾದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ರಿಕ್ಷಾ ಚಾಲಕರ ಮಹಾಸಭೆ

ಕಿನ್ನಿಗೋಳಿ : ರಿಕ್ಷಾ ಚಾಲಕರಲ್ಲಿ ಶಿಸ್ತು ಪ್ರಾಮಾಣಿಕತೆಯ ಜತೆಗೆ ಸಮವಸ್ತ್ರ ಹಾಗೂ ಬ್ಯಾಜ್ ಅಗತ್ಯವಿರಬೇಕು ಎಂದು ಮೂಲ್ಕಿ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಬಶೀರ್ ಅಹಮದ್ ಹೇಳಿದರು....

Close