ಪಂಜಿನಡ್ಕದಲ್ಲಿ ರಸ್ತಾ ರೋಕೋ ಮತ್ತು ಮೊಲೊಟ್ಟು ಸ್ವಯಂಪ್ರೇರಿತ ಬಂದ್

Photo By: Bagyavan Sanil

 ಮೂಲ್ಕಿ : ರಸ್ತೆ ಡಾಮರೀಕರಣ ಮತ್ತು ಮೂಲಭೂತ ಸೌಲಭ್ಯ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ ಪಂಜಿನಡ್ಕದಲ್ಲಿ ರಸ್ತಾ ರೋಕೋ ಮತ್ತು ಮೊಲೊಟ್ಟು ಸ್ವಯಂಪ್ರೇರಿತ ಬಂದ್ ಸೋಮವಾರ ನಡೆಯಿತು.ಕಳೆದ 40ಕ್ಕೂ ಅಧಿಕ ವರ್ಷಗಳಿಂದ ಸಂಪೂರ್ಣ ಡಾಮರೀಕರಣವಾಗದ ಮೊಲೊಟ್ಟು ಮತ್ತು ಬಾನೊಟ್ಟು ಪ್ರದೇಶದ ರಸ್ತೆಗಳು ಸಂಪೂರ್ಣ ಗುಂಡಿಗಳಿಂದ ಆವ್ರತವಾಗಿದ್ದರೂ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಜಿಲ್ಲಾ ಪಂಚಾಯತ್ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅಲ್ಲಿನ ಸ್ಥಳಿಯರು ಪ್ರತಿಭಟನೆ ನಡೆಸಿದ್ದಾರೆ. ರಸ್ತಾ ರೋಕೋ ಮೊದಲು ರಸ್ತೆಗಳ ಗುಂಡಿಗಳಲ್ಲಿ ಗಿಡಗಳನ್ನು ನೆಟ್ಟು ಬಳಿಕ ಪಂಜಿನಡ್ಕದ ತಿರುವಿನಲ್ಲಿ ರಸ್ತೆ ತಡೆ ನಿರ್ಮಿಸಿದ್ದರು. ಮೊಲೊಟ್ಟು ಪರಿಸರ ಸಂಪೂರ್ಣ ಬಂದ್‌ಆಗಿ ಜನರಿಲ್ಲದೆ ಬಿಕೋ ಎನಿಸುತ್ತಿತ್ತು. ಬಂದ್ ಮತ್ತು ರಸ್ತಾ ರೋಕೋ ಇದ್ದರೂ ವಿದ್ಯಾರ್ಥಿಗಳು ಮತ್ತು ಅನಾರೋಗ್ಯ ಪೀಡಿತರಿಗೆ ಯಾವುದೇ ಸಮಸ್ಯೆಯಾಗದಂತೆ ತಾತ್ಕಾಲಿಕವಾಗಿ ರಸ್ತೆ ತೆರವುಗೊಳಿಸಿ ಸಹಕರಿಸುತ್ತಿದ್ದರು. ಮೂಲ್ಕಿ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಸುನೀಲ್ ಪಾಟಿಲ್ ಪೋಲೀಸ್ ತಂಡದೊಂದಿಗೆ ಸ್ಥಳದಲ್ಲಿದ್ದರು. ಈ ಸಂದರ್ಭ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಈಶ್ವರ ಕಟೀಲು ಮತ್ತು ಸ್ಥಳೀಯ ಜಿಪಂ ಪ್ರತಿನಿಧಿ ಆಶಾ ಸುವರ್ಣ ಆಗಮಿಸಿ ಜಿಲ್ಲಾ ಪಂಚಾಯತ್ ಅನುದಾನದಿಂದ ಕೇವಲ ತೇಪೆ ಕಾರ್ಯ ಮಾತ್ರ ಸಾಧ್ಯವಾಗಲಿದ್ದು ಈ ಬಗ್ಗೆ ರೂ 5ಲಕ್ಷ ಅನುದಾನ ಮೀಸಲಿಡುವುದಾಗಿ ತಿಳಿಸಿದರು. ಸಾರ್ವಜನಿಕರ ಸಮಸ್ಯೆಯ ಬಗ್ಗೆ ತಿಳಿದುಕೊಂಡ ಶಾಸಕರಾದ ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯತ್‌ನ ಅನುದಾನದೊಂದಿಗೆ ಹೆಚ್ಚುವರಿ ಅಗತ್ಯವಿರುವ ಹಣವನ್ನು ತಮ್ಮ ಶಾಸಕರ ಅನುದಾನದಿಂದ ನೀಡಿ ಜನರ ಸಮಸ್ಯೆಗೆ ಶೀಘ್ರ ಸ್ಪಂದಿಸುವುದಾಗಿ ತಿಳಿಸಿದ್ದಾರೆ.

Comments

comments

Leave a Reply

Read previous post:
ನೇಸರ ಚಿತ್ತಾರ

Photo by Mithuna Kodethoor

Close