ಸಂಕಲಕರಿಯದಲ್ಲಿ ತಿಂಗೊಲ್ದ ಬೊಲ್ಪು, ಸನ್ಮಾನ

ಕಿನ್ನಿಗೋಳಿ : ಸಂಕಲಕರಿಯದ ವಿಜಯಾ ಯುವಕ ಸಂಘ, ಖುಷಿ ಮಹಿಳಾ ಮಂಡಲಗಳ ನೇತೃತ್ವದಲ್ಲಿ, ಯುಗಪುರುಷದ ಸಹಕಾರದೊಂದಿಗೆ, ಕಿನ್ನಿಗೋಳಿಯ ರೋಟರಿ, ರೋಟರ‍್ಯಾಕ್ಟ್, ಇನ್ನರ ವೀಲ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಿಂಗೊಲ್ದ ಬೊಲ್ಪು, ಜುಲಾಯಿ ತಿಂಗಳ ಕಾರ್ಯಕ್ರಮ ರವಿವಾರ ಸಂಕಲಕರಿಯ ಶಾಲೆಯಲ್ಲಿ ನಡೆಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರ ಅಧ್ಯಕ್ಷತೆಯಲ್ಲಿ, ಪಿಯುಸಿ.ಯಲ್ಲಿ ಗರಿಷ್ಥ ಸಾಧನೆಗೈದ ದಿಶಾ ಬಿ. ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ರೋಟರಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರೋಟರ‍್ಯಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಮುಂಡ್ಕೂರು ಭಾರ್ಗವ ಜೆಸಿಐನ ಅಧ್ಯಕ್ಷ ಸುರೇಂದ್ರ ಭಟ್ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ, ವಿಜಯಾ ಯುವಕ ಸಂಘದ ಗೌರವಾಧ್ಯಕ್ಷ ಭಾಸ್ಕರ ಶೆಟ್ಟಿ, ಅಧ್ಯಕ್ಷ ವಿಶ್ವಿತ್ ಶೆಟ್ಟಿ, ಕಾರ್ಯದರ್ಶಿ ಪವನ್ ಶೆಟ್ಟಿ, ಖುಷಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಮೇರಿ ಸೆರಾವೋ, ಅಧ್ಯಕ್ಷೆ ಬೇಬಿ ಕೆ. ಶೆಟ್ಟಿ, ಕಾರ್ಯದರ್ಶಿ ಸರಳಾ ಕೆ. ಶೆಟ್ಟಿ ಮತ್ತಿತರಿದ್ದರು. ಸುಧಾಕರ ಸಾಲ್ಯಾನ್ ಸ್ವಾಗತಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಬಳಿಕ ಸಾಂಸ್ಕ್ರತಿಕ ಕಾರ್ಯಕ್ರಮ, ಪ್ರಕಾಶ್ ಆಚಾರ್ ರಿಂದ ಸಂಗೀತ ರಸ ಸಂಜೆ ನಡೆಯಿತು.

Comments

comments

Leave a Reply

Read previous post:
ಪಾವಂಜೆಯಲ್ಲಿ ಕೆಸರು ಗದ್ದೆ ಕ್ರೀಡೋತ್ಸವ

Photos by Mithuna Kodethoor ಮುಲ್ಕಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಲ್ಲರಿಗೂ ಪಾವಂಜೆಯ ಜನ ಜಾತ್ರೆ ಕಂಡು ಅಚ್ಚರಿ. ಅದರಲ್ಲೂ ನೂರಾರು ವಿದ್ಯಾರ್ಥಿಗಳು ಕೆಸರಿನ ಗದ್ದೆಯಲ್ಲಿ...

Close