ಎಸ್.ಕೋಡಿಯಲ್ಲಿ ದಂತ ತಪಾಸಣೆ, ಮಾಹಿತಿ

ಎಸ್.ಕೋಡಿ: ಹಲ್ಲುಗಳ ರಕ್ಷಣೆ ಸ್ವಚ್ಛತೆಯಿಂದ ಮಾತ್ರ ಸಾಧ್ಯ ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಅವರು ಮಂಗಳವಾರ ಎಸ್.ಕೋಡಿಯ ಸಂಗಮ ಸಭಾಭವನದಲ್ಲಿ ನಡೆದ ಉಚಿತ ದಂತ ತಪಾಸಣೆ ಹಾಗೂ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಎಸ್.ಕೋಡಿಯ ಸುಪರ್ಣ ಸ್ವ.ಸಹಾಯ ಸಂಘದ ವಾರ್ಷಿಕೋತ್ಸವ ಪ್ರಯುಕ್ತ ರೋಟರಿ, ರೋಟರಾಕ್ಟ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ದೇರಳಕಟ್ಟೆ ಎ.ಬಿ.ಶೆಟ್ಟಿ ಮೆಮೋರಿಯಲ್ ದಂತ ವೈದ್ಯ ಕಾಲೇಜಿನ ತಜ್ಞ ವೈದ್ಯರಿಂದ ಶಿಬಿರ ನಡೆಯಿತು. ವೈದ್ಯದಿಕಾರಿ ಆಡ್ರಿ ಡಿಕ್ರೂಸ್, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ ಕಿನ್ನಿಗೋಳಿಯ ಮೇಲ್ವಿಚಾರಕರಾದ ಲತಾ ಅಮೀನ್, ರೋಟರಿ ಕಾರ್ಯದರ್ಶಿ ಯಶವಂತ, ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಸುಪರ್ಣ ಸ್ವಸಹಾಯದ ಅಧ್ಯಕ್ಷೆ ಶೋಭ, ಶಿಕ್ಷಕ ಕೃಷ್ಣ ಮೂರ್ತಿ, ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಾಕ್ಟ್ ಪದಗ್ರಹಣ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಪ್ರವರ್ತಿತ ರೋಟರಾಕ್ಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸೋಮವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಕಾರ್ಯದರ್ಶಿ ಅಶೋಕ ಶೆಟ್ಟಿಗಾರ್...

Close