ಕಿನ್ನಿಗೋಳಿ ರೋಟರಾಕ್ಟ್ ಪದಗ್ರಹಣ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಪ್ರವರ್ತಿತ ರೋಟರಾಕ್ಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸೋಮವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಕಾರ್ಯದರ್ಶಿ ಅಶೋಕ ಶೆಟ್ಟಿಗಾರ್ ರವರ ತಂಡಕ್ಕೆ ರೋಟರಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೆ. ಪದಗ್ರಹಣ ನಡೆಸಿದರು. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಶಿಲ್ಪಿ ಈಶ್ವರ ಚಂದ್ರ, ಹಾಗೂ ಅನಂತ ಉಡುಪ,ಸಭಾಪತಿ ಕೆ.ಬಿ.ಸುರೇಶ್ ರಿಗೆ ಸನ್ಮಾನ, ಸೈಂಟ್ ಮೇರಿಸ್ ಶಾಲಾ ವಾಚನಾಲಯಕ್ಕೆ ಪುಸ್ತಕ ನೀಡಿಕೆ, ಹೂ -ದೋಟ ಸ್ಪರ್ಧೆಯ, ಭ್ರಷ್ಟಾಚಾರ ವಿರೋಧಿ, ಪ್ಲಾಸ್ಟಿಕ್ ಜಾಗೃತಿ ಕುರಿತ ಕರಪತ್ರ ಬಿಡುಗಡೆ, ಜಲ್ಲಿ ಗುಡ್ಡೆ ಅನಂತಯ್ಯ ಆಚಾರ್ಯರಿಗೆ ಶೌಚಾಲಯ ನಿರ್ಮಾಣಕ್ಕೆ ಸಹಾಯ, ಕಟೀಲು ಸುಧಾ ಮಂಜಪ್ಪರಿಗೆ ಮನೆ ನಿರ್ಮಾಣಕ್ಕೆ ಸಹಾಯ, ಕುದ್ರಿಪದವು ಅಂಗನವಾಡಿಗೆ ಚೆಯರ್ ಕೊಡುಗೆ, ಪಟ್ಟೆ ಅಂಗನವಾಡಿಗೆ ಇಂಟರ್ ಲಾಕ್ ಅಳವಡಿಕೆಗೆ ಸಹಾಯ, ಅಂಗರಗುಡ್ಡೆಯ ಇಬ್ಬರು ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಬ್ಯಾಗ್ ಕೊಡುಗೆ, ಕಟೀಲಿನ ಪೂರ್ಣಿಮಾಗೆ ಸಮವಸ್ತ್ರ ನೀಡಿಕೆ, ಕಟೀಲಿನ ಸುಧಾರವರಿಗೆ ಊಟದ ಅಕ್ಕಿ ನೀಡಿಕೆ, ಪಟ್ಟೆಯ ಪುಂಡಲೀಕರವರಿಗೆ ಚಿಕಿತ್ಸೆಗೆ ಧನ ಸಹಾಯ, ಕ್ಲಬ್‌ನ ಮುಖವಾಣಿ ಯಶಸ್ವಿಯ ಬಿಡುಗಡೆ ನಡೆಯಿತು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ರಂಗ ನಟ ಭೋಜರಾಜ್ ವಾಮಂಜೂರು, ರೋಟರಾಕ್ಟ್ನ ಜಿಲ್ಲಾ ಸಭಾಪತಿ ಜಯರಾಮ ಕೋಟ್ಯಾನ್, ಜಿಲ್ಲಾ ಪ್ರತಿನಿಧಿ ಶೈಲೇಂದ್ರ ರಾವ್, ವಲಯ ಪ್ರತಿನಿಧಿ ರಜಾಕ್, ಸಭಾಪತಿ ಕೆ.ಬಿ.ಸುರೇಶ್, ನೂತನ ಸಭಾಪತಿ ಜೆರಾಲ್ಡ್ ಮಿನೇಜೆಸ್ ಉಪಸ್ಥಿತರಿದ್ದರು.
ನಿರ್ಗಮನಾಧ್ಯಕ್ಷ ಗಣೇಶ್ ಕಾಮತ್ ಸ್ವಾಗತಿಸಿ. ಕಾರ್ಯದರ್ಶಿ ಜಾಕ್ಸನ್ ವರದಿ ನೀಡಿದರು. ಸುಧಾಕರ ಸಾಲಿಯಾನ್ ಅತಿಥಿಗಳನ್ನು ಗುರುತಿಸಿದರು. ನೂತನ ಕಾರ್ಯದರ್ಶಿ ಅಶೋಕ್ ವಂದಿಸಿ ಶರತ್ ಶೆಟ್ಟಿ, ಸುಮಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಮೂಲ್ಕಿ ಲಯನ್ಸ್ ಕ್ಲಬ್ 2012-13ನೇ ಸಾಲಿನ ಪದಗ್ರಹಣ

Photo By: Bhagyavan Sanil ಮೂಲ್ಕಿ: ಜನಸೇವೆಯಲ್ಲಿ ದೇವರನ್ನು ಕಾಣುವುದು ಪರಮಾತ್ಮನಿಗೆ ನಾವು ನೀಡುವ ಅಗ್ರ ಪೂಜಾ ಪುನಸ್ಕಾರವಾಗಿದ್ದು ಸೇವೆಯಲ್ಲಿ ಜೀವನ ಶಾಂತಿ ಅಡಗಿದೆ ಎಂದು ಟೋರ್ಪೆಡೋಸ್...

Close