ತುಳುನಾಡ ಕೃಷಿ ಜನಪದೋತ್ಸವ

News by Narendra Kerekadu Photos by Sunil Haleyangadi

ಹಳೆಯಂಗಡಿ : ಬಂಟ್ವಾಳದ ಮೊಗರ್ನಾಡು ಫ್ರೆಂಡ್ಸ್ ತಂಡವು ಹಳೆಯಂಗಡಿ ಬಳಿಯ ಪಾವಂಜೆಯಲ್ಲಿ ನಡೆದ ತುಳುನಾಡ ಕೃಷಿ ಜನಪದೋತ್ಸವ ಪ್ರಶಸ್ತಿಯನ್ನು ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು ಮಂಜೇಶ್ವರದ ವೀರಾಂಜನೇಯ ತಂಡವು ಪಡೆದುಕೊಂಡಿತು.
ಹಳೆಯಂಗಡಿ ಪಾವಂಜೆಯ ಬಾಕಿಮಾರು ಗದ್ದೆಯಲ್ಲಿ ತುಳುನಾಡ ಕೆಸರು ಗದ್ದೆ ಕ್ರಿಡೋತ್ಸವ ಸಮಿತಿಯ ಸಂಯೋಜನೆಯಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ತುಳುನಾಡ ಕೃಷಿ ಜನಪದೋತ್ಸವದಲ್ಲಿ ಭಾನುವಾರ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದುಕೊಂಡಿತು.
ಮಹಿಳಾ ವಿಭಾಗದಲ್ಲಿ ನ್ಯಾಷನಲ್ ಹೆಲ್ತ್ ಲೀಗ್ ಹೊಸಬೆಟ್ಟು ಪ್ರಥಮ, ಧೂಮಾವತಿ ಮಿತ್ರ ಮಂಡಳಿ ದ್ವಿತೀಯ ಬಹುಮಾನ ಪಡೆದುಕೊಂಡಿತು. ಚೆಂಡಾಟದಲ್ಲಿ ಪ್ರಥಮ ಧೂಮಾವತಿ ಫ್ರೇಂಡ್ಸ್ ಮತ್ತು ದ್ವಿತೀಯ ಪ್ರಶಸ್ತಿಯನ್ನು ಓಂ ಕ್ರಿಕೇಟರ‍್ಸ್ ಪಡೆಯಿತು.
ಜಾನಪದ ಸಮೂಹ ನೃತ್ಯದಲ್ಲಿ ಹಳೆಯಂಗಡಿಯ ವಿದ್ಯಾ ವಿನಾಯಕ ಪ್ರಥಮ, ಹಳೆಯಂಗಡಿ ಯುವತಿ ಮಂಡಲ ದ್ವಿತೀಯ, ಕಲಾಕುಂಭ ಸುರತ್ಕಲ್ ತೃತೀಯ ಬಹುಮಾನ ಪಡೆಯಿತು.
ಕೆಸರು ಗದ್ದೆ ಓಟದಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸುರೇಂದ್ರ ಪಾವಂಜೆ, ದ್ವಿತೀಯ ಪ್ರವೀಣ್ ಮುಕ್ಕ, ಮಹಿಳೆಯರಲ್ಲಿ ಪ್ರಥಮ ದಿವ್ಯ ರಮೇಶ್, ದ್ವಿತೀಯ ಸೀತಾ ಚಂದ್ರಿಕಾ, ಹಿರಿಯ ನಾಗರಿಕರಲ್ಲಿ ಪುರುಷ ವಿಭಾಗದಲ್ಲಿ ಪ್ರಥಮ ಸದಾಶಿವ ಕಟೀಲ್, ದ್ವಿತೀಯ ಬಾಬು ಕಂಪದವು, ತೃತೀಯ ಕುಮಾರಸ್ವಾಮಿ ಕಬ್ಬಿನಾಲೆ ಮಹಿಳೆಯರ ವಿಭಾಗದಲ್ಲಿ ಪ್ರಥಮ ರತ್ನ ಪಾವಂಜೆ, ದ್ವಿತೀಯ ವಸಂತಿ ಪಾವಂಜೆ ಪಡೆದರು.
ಕೆಸರು ಗದ್ದೆಯಲ್ಲಿ ಹಿಮ್ಮುಖ ಓಟ ಮತ್ತು ಮೂರು ಕಾಲಿನ ಓಟ ಗಮನ ಸೆಳೆಯಿತು.
ಸಂಸದ ನಳಿನ್‌ಕುಮಾರ್ ಕಟೀಲು ಬಹುಮಾನವನ್ನು ವಿತರಿಸಿ ಮಾತನಾಡಿ ಕೃಷಿ ಉಳಿಸಿಕೊಂಡು ರಾಷ್ಟ್ರದ ಚಿಂತನೆ ನಡೆಯಬೇಕು, ಎಸ್‌ಇಜೆಡ್ ಎಂದು ಅಭಿವೃದ್ದಿ ಮಾಡುವುದಲ್ಲ ಕೃಷಿ ಭೂಮಿಯ ಆಧಾರಿತ ಜೀವನ ಮಾಡಲು ಸಾಧ್ಯವಿದೆ ಎಂದು ಜಾಗೃತಿ ಮೂಡಿಸಬೇಕಾಗಿದೆ, ಪ್ರಕೃತಿ, ಪರಿಸರ, ಪರಂಪರೆಯನ್ನು ಉಳಿಸಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್, ದ.ಕ.ಜಿ.ಪಂ.ಅಧ್ಯಕ್ಷೆ ಶೈಲಜಾ ಭಟ್, ಉಡುಪಿಯ ಮೀನುಗಾರರ ಫೇಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಜಿ.ಪಂ. ಸದಸ್ಯ ಈಶ್ವರ ಕಟೀಲು, ಡಾ.ಗಣೇಶ್ ಅಮಿನ್ ಸಂಕಮಾರ್, ಡಾ.ವೈ.ಎನ್. ಶೆಟ್ಟಿ, ತೋಕೂರು ಐಟಿಐ ಪ್ರಾಂಶುಪಾಲ ವೈ.ಎನ್.ಸಾಲಿಯಾನ್, ಸಮಿತಿಯ ಕಾರ್ಯಾಧ್ಯಕ್ಷ ಪಿ.ಪಿ.ಹೆಗ್ಡೆ, ಡಾ.ಸೋಂದಾ ಭಾಸ್ಕರ ಭಟ್, ನವೀನ್ ಶೆಟ್ಟಿ ಎಡ್ಮೆಮಾರ್, ರಾಮಚಂದ್ರ ಶೆಣೈ, ವಿನೋದ್ ಸಾಲ್ಯಾನ್, ವಿನೋದ್ ಕುಮಾರ್ ಬೊಳ್ಳೂರು ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಎಸ್.ಕೋಡಿಯಲ್ಲಿ ದಂತ ತಪಾಸಣೆ, ಮಾಹಿತಿ

ಎಸ್.ಕೋಡಿ: ಹಲ್ಲುಗಳ ರಕ್ಷಣೆ ಸ್ವಚ್ಛತೆಯಿಂದ ಮಾತ್ರ ಸಾಧ್ಯ ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಅವರು ಮಂಗಳವಾರ ಎಸ್.ಕೋಡಿಯ ಸಂಗಮ ಸಭಾಭವನದಲ್ಲಿ ನಡೆದ ಉಚಿತ ದಂತ...

Close