ಮೂಲ್ಕಿ ಲಯನ್ಸ್ ಕ್ಲಬ್ 2012-13ನೇ ಸಾಲಿನ ಪದಗ್ರಹಣ

Photo By: Bhagyavan Sanil

ಮೂಲ್ಕಿ: ಜನಸೇವೆಯಲ್ಲಿ ದೇವರನ್ನು ಕಾಣುವುದು ಪರಮಾತ್ಮನಿಗೆ ನಾವು ನೀಡುವ ಅಗ್ರ ಪೂಜಾ ಪುನಸ್ಕಾರವಾಗಿದ್ದು ಸೇವೆಯಲ್ಲಿ ಜೀವನ ಶಾಂತಿ ಅಡಗಿದೆ ಎಂದು ಟೋರ್ಪೆಡೋಸ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಹೇಳಿದರು.
ಅವರು ಭಾನುವಾರ ರಾತ್ರಿ ಮೂಲ್ಕಿ ಲಯನ್ಸ್ ಸೌಧದಲ್ಲಿ ಮೂಲ್ಕಿ ಲಯನ್ಸ್ ಕ್ಲಬ್2012-13ನೇ ಸಾಲಿನ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅತಿಥಿಯಾಗಿದ್ದ ಲಯನ್ಸ್ ಮಾಜಿ ಗವರ್ನರ್ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ,ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯಿಂದ ಮನಸ್ಸಿಗೆ ಶಾಂತಿ ಸಮಾಧಾನಗಳು ಲಭಿಸುತ್ತವೆ ಎಂದ ಅವರು ಸೇವಾ ಸಂಸ್ಥೆಗಳಿಂದ ಇನ್ನೂ ಹೆಚ್ಚು ಬಡವರ್ಗದವರ ಸೇವೆಯಾಗಬೇಕು ಎಂದರು.
ಈ ಸಂದರ್ಭ2012-13ನೇಸಾಲಿನ ಲಯನ್ಸ್ ಅಧ್ಯಕ್ಷರಾಗಿ ನ್ಯಾಯವಾದಿ ಸತೀಶ್ ಕಾಮತ್, ಲಯನೆಸ್ ಅಧ್ಯಕ್ಷರಾಗಿ ಸವಿತಾ ಎಸ್. ಕಾಮತ್, ಲಿಯೋಕ್ಲಬ್ ಅಧ್ಯಕ್ಷರಾಗಿ ಸುರಕ್ಷಾ ಎಸ್ ಕಾಮತ್ ರವರನ್ನು ಪದಗ್ರಹಣಾಧಿಕಾರಿಯಾಗಿದ್ದ ಲಯನ್ಸ್ 2ನೇ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಮಂಜುನಾಥ ಮೂರ್ತಿ ಪದಗ್ರಹಣ ಗೊಳಿಸಿದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಹಾಗೂ ಕ್ಯಾನ್ಸರ್ ರೋಗಿಗೆ ವೈದ್ಯಕೀಯ ಸಹಕಾರ ಮೊತ್ತವನ್ನು ನೀಡಲಾಯಿತು.ಈ ಸಂದರ್ಭ ಶರ್ಮಿಳಾ ಹರೀಶ್ ಪುತ್ರನ್,ಶ್ರೇಯಾ ಪುತ್ರನ್,ಉದಯ ಅಮೀನ್.ಶೋಭಾ ಸುಜಿತ್,ಕಿಶೋರ್ ಶೆಟ್ಟಿ,ಶ್ರೇಯಸ್ ಅಂಚನ್,ಪ್ರಭೋದ್ ಕುಡ್ವಾ,ಶಿಲ್ಪಾ ಕುಡ್ವಾ,ಸಪ್ತಮಿ ಅಮೀನ್ ಮತ್ತಿತರರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಲಯನ್ಸ್ ಅಧ್ಯಕ್ಷ ವಿ.ಸತೀಶ್ ಕಾಮತ್ ವಹಿಸಿದ್ದರು.
ಪೂರ್ವಾಧ್ಯಕ್ಷ ಹರೀಶ್ ಪುತ್ರನ್ ಸ್ವಾಗತಿಸಿ, ವಿಜಯ ಕುಮಾರ್ ಕುಬೆವೂರು ನಿರೂಪಿಸಿ, ಸುಜಿತ್ ಸಾಲ್ಯಾನ್  ಷ ಹರೀಶ್ ಪುತ್ರನ್ ಸ್ವಾಗತಿಸಿದರು. ವಿಜಯ ಕುಮಾರ್ ಕುಬೆವೂರು ನಿರೂಪಿಸಿದರು.ಸುಜಿತ್ ಸಾಲ್ಯಾನ್ ವಂದಿಸಿದರು.

Comments

comments

Leave a Reply

Read previous post:
ಪಂಜಿನಡ್ಕದಲ್ಲಿ ರಸ್ತಾ ರೋಕೋ ಮತ್ತು ಮೊಲೊಟ್ಟು ಸ್ವಯಂಪ್ರೇರಿತ ಬಂದ್

Photo By: Bagyavan Sanil  ಮೂಲ್ಕಿ : ರಸ್ತೆ ಡಾಮರೀಕರಣ ಮತ್ತು ಮೂಲಭೂತ ಸೌಲಭ್ಯ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ ಪಂಜಿನಡ್ಕದಲ್ಲಿ ರಸ್ತಾ ರೋಕೋ ಮತ್ತು ಮೊಲೊಟ್ಟು ಸ್ವಯಂಪ್ರೇರಿತ...

Close