ಐ.ಟಿ.ಐ. ಕಾಲೇಜು ನೌಕರರಿಂದ ಮುಖ್ಯಮಂತ್ರಿಗೆ ಮನವಿ

ಮೂಲ್ಕಿ: ಇತ್ತೀಚೆಗೆ ಬೆಂಗಳೂರಿನಲ್ಲಿ ಜಿಲ್ಲಾ ಖಾಸಗಿ ಐ.ಟಿ.ಐ. ನೌಕರರ ಸಂಘದ ಅಧ್ಯಕ್ಷರಾದ ವೈ.ಎನ್.ಸಾಲಿಯಾನ್ ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳ ನಿಯೋಗವು ಮಾನ್ಯ ವಿಧಾನ ಪರಿಷತ್ತಿನ ಸಭಾಪತಿಗಳಾದ ಡಿ.ಹೆಚ್. ಶಂಕರಮೂರ್ತಿಯವರು ಹಾಗೂ ವಿಧಾನ ಪರಿಷತ್ತಿನ ಶಿಕ್ಷಕರ ಪ್ರತಿನಿಧಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರನ್ನು ಭೇಟಿಯಾಗಿ ಸಂಘದ ವಿವಿಧ ಬೇಡೆಕೆಗಳ ಕುರಿತು ವಿವರಿಸಿ ಮುಖ್ಯವಾಗಿ ಅನುದಾನಿತ ಐ.ಟಿ.ಐ.ಗಳ ಪರಿಷ್ಕ್ರತ ಅನುದಾನ ಸಂಹಿತೆ ಜಾರಿಯ ಅವಶ್ಯಕತೆ,6ನೇ ವೇತನ ಜಾರಿ ಹಾಗೂ ಅನ್‌ಲೈನ್ ಪ್ರವೇಶ ಪದ್ಧತಿಯನ್ನು ಕೈಬಿಡುವ ಕುರಿತು ಮಾನ್ಯ ಮುಖ್ಯಮಂತ್ರಿಯವರಲ್ಲಿಮನವಿ ಸಲ್ಲಿಸುವಂತೆ ವಿನಂತಿಸಲಾಯಿತು. ನಮ್ಮ ಬೇಡಿಕೆಯ ಬಗ್ಗೆ ಚರ್ಚಿಸಲು ಮಾನ್ಯ ವಿಧಾನ ಪರಿಷತ್ತಿನ ಸಭಾಪತಿಗಳು ಅವರ ಕೊಠಿಡಿಯಲ್ಲಿ ಕಾರ್ಮಿಕ ಇಲಾಖಾ ಕಾರ್ಯುದರ್ಶಿಗಳ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರ ಸಭೆಯನ್ನು ಕರೆದಿದ್ದು ಸಭೆಯಲ್ಲಿ ರಾಜ್ಯ ಸಂಘದ ಪದಾಧಿಕಾರಿಗಳು, ವಿಧಾನ ಪರಿಷತಿನ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ಹಾಗೂ ವೈ.ಎಸ್. ನಾರಾಯಣ ಸ್ವಾಮಿಯವರು ಉಪಸ್ಥಿತರಿದ್ದರು. ಸಭೆಯಲ್ಲಿ ಅನುದಾನಿತ ಐ.ಟಿ.ಐ.ಗಳ ಪ್ರವೇಶಾತಿಯನ್ನು ಈ ವರ್ಷದಮಟ್ಟಿಗೆ ಮುಂದೂಡುವಂತೆ ಚರ್ಚಿಸಲಾಯಿತು ಮತ್ತು ಮಾನ್ಯ ಕಾರ್ಮಿಕ ಮಂತ್ರಿಗಳಾದ ಬಿ.ಎನ್. ಬಚ್ಚೆಗೌಡರನ್ನು ದೂರವಾಣಿ ಮುಖಾಂತರ ಸಭಾಪತಿಗಳು ಸಂರ್ಪಕಿಸಿ ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ವಿಷಯವು ಈಗಾಗಲೇ ಕ್ಯಾಬಿನೆಟ್‌ನಲ್ಲಿ ನಿರ್ದಾರವಾಗಿರುವುದರಿಂದ ಪ್ರವೇಶಾತಿಯನ್ನು ಮುಂದೂಡುವಂತೆ ಮುಖ್ಯಮಂತ್ರಿಗಳಿಗೆ ವಿನಂತಿಸುವುದಾಗಿ ತಿಳಿಸಿದರು. ಅಲ್ಲದೆ 6ನೇ ವೇತನ ನಿಗದಿಯನ್ನು ಅನುದಾನಿತ ಐ.ಟಿ.ಐ.ಗಳಿಗೆ ಶೀಘ್ರದಲ್ಲೆ ನೀಡುತ್ತೆವೆಂದು ಸಚಿವರು ಭರವಸೆ ಇತ್ತರು. ನಂತರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರ ನೇತೃತ್ವದಲ್ಲಿ ಅನುದಾನಿತ ಐ.ಟಿ.ಐ. ಸಂಘದ ಅಧ್ಯಕ್ಷರಾದ ಎಸ್.ಆರ್. ರವಿಯವರ ಹಾಗೂ ಪದಾಧಿಕಾರಿಗಳ ನಿಯೋಗವು ಮಾನ್ಯ ಮುಖ್ಯಮಂತ್ರಿಗಳನ್ನು ಅವರ ಕಛೇರಿ ಅನುಗೃಹದಲ್ಲಿ ಭೇಟಿಯಾಗಿ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿ ಚರ್ಚಿಸಿತು. ಇದಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಪರಿಷ್ಕ್ರತ ಅನುದಾನ ಸಂಹಿತೆಯ ಥಾಮಸ್ ವರದಿಯ ಕಡತವನ್ನು ಈ ಕೂಡಲೇ ಮಂಡಿಸುವಂತೆ ಮಾನ್ಯ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಅದೇಶಿಸಿದರು. ನಂತರ ನಿಯೋಗವು ಅರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಆಜಯ್ ಸೇಠ್‌ರವರನ್ನು ಭೇಟಿಯಾಗಿ ಪರಿಷ್ಕ್ರತ ಅನುದಾನ ಸಂಹಿತೆಯಯನ್ನು ಈ ಕೂಡಲೇ ಜಾರಿಗೆ ತರುವಂತೆ ಆಗ್ರಹಿಸಿತು. ಅದಷ್ಟು ಶೀಘ್ರ ಕಡತವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ರವಾನಿಸುವುದಾಗಿ ತಿಳಿಸಿದರು. ಇದಲ್ಲದೆ ವಿಧಾನ ಪರಿಷತಿನ ಸದಸ್ಯರಾದ ಪುಟ್ಟಣ್ಣ, ಮರಿತಿಬ್ಬೇಗೌಡ, ಬಸವರಾಜ ಹೊರಟ್ಟಿ, ವೈ.ಎಸ್. ನಾರಾಯಣ ಸ್ವಾಮಿಯವರು ಮಾನ್ಯ ಕಾರ್ಮಿಕ ಮಂತ್ರಿಗಳು, ಹಾಗೂ ಅರ್ಥಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿಯಾಗಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲಾಯಿತು. ಸಂಘದ ಈ ಎಲ್ಲಾ ಪ್ರಯತ್ನದ ಫಲವಾಗಿ ಅನುದಾನಿತ ಐ.ಟಿ.ಐ.ಗಳ ಅನ್‌ಲೈನ್ ಪ್ರವೇಶ ಪ್ರಕ್ರಿಯೆಯು ಮುಂದಿನ ವರ್ಷಕ್ಕೆ ಮುಂದೂಡಲಾಗಿದ್ದು ಈಗಾಗಲೇ ಆದೇಶ ಜಾರಿಯಗಿದೆ. ೬ನೇ ವೇತನ ಜಾರಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪರಿಷ್ಕ್ರತ ಅನುದಾನ ಸಂಹಿತೆಯು ಜಾರಿಯಾಗುವ ಹಂತದಲ್ಲಿದೆ. ನಮ್ಮ ಎಲ್ಲಾ ಬೇಡಿಕೆಗಳಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದ ಮಾನ್ಯ ವಿಧಾನ ಪರಿಷತಿನ ಸಭಾಪತಿಗಳಾದ ಡಿ.ಹೆಚ್. ಶಂಕರಮೂರ್ತಿಯವರು, ವಿಧಾನ ಪರಿಷತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ವಿಧಾನ ಪರಿಷತ್ತಿನ ಉಪ ಸಭಾಪತಿಗಳಾದ ಪುಟ್ಟಣ್ಣ, ಮರಿತಿಬ್ಬೇಗೌಡ, ಮಾಜಿ ಶಿಕ್ಷಣ ಮಂತ್ರಿಗಳಾದ ಬಸವರಾಜ ಹೊರಟ್ಟಿ, ವೈ.ಎಸ್. ನಾರಾಯಣ ಸ್ವಾಮಿಯವರು, ಶಶಿಲ್ ನಮೋಶಿಯವರು, ತೊಂಟದಾರ್ಯರ ಮುಂತಾದವರಿಗೆ ಸಂಘದ ವತಿಯಿಂದ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇವೆ. ಅಲ್ಲದೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ ಕಾರ್ಮಿಕ ಮಂತ್ರಿಗಳಾದ ಬಿ.ಎನ್. ಬಚ್ಚೆಗೌಡರವರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡರವರಿಗೆ ನಮನಗಳನ್ನು ಸಲ್ಲಿಸುತ್ತಿದ್ದೇವೆ. ಅಲ್ಲದೆ ನಮ್ಮ ಈ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತು ಸಹಕರಿಸಿದ ಎಲ್ಲಾ ಅನುದಾನಿತ ಐ.ಟಿ.ಐ. ಆಡಳಿತ ಮಂಡಳಿಗಳಿಗೆ ಸಂಘವು ಕೃತಜ್ಞತೆಯನ್ನು ಅರ್ಪಿಸುತ್ತದೆ.

 

Comments

comments

Leave a Reply

Read previous post:
ಶ್ರೀ ಹರಿಪಾದೆ ಜಾರಂತಾಯ ಯುವಕ ಮಂಡಲದ ವಾರ್ಷಿಕ ಮಹಾ ಸಭೆ

ಪಂಜ-ಕೊಯಿಕುಡೆ: ಶ್ರೀ ಹರಿಪಾದೆ ಜಾರಂತಾಯ ಯುವಕ ಮಂಡಲದ ವಾರ್ಷಿಕ ಮಹಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ರವರನ್ನು ಸತತ 6ನೇ ಬಾರಿ ಅವಿರೋಧವಾಗಿ...

Close