ಪೊಂಪೈ ಕಾಲೇಜು, ಐಕಳ – ಸ್ಥಾಪಕರ ದಿನಾಚರಣೆ

ಪೊಂಪೈ ಕಾಲೇಜಿನಲ್ಲಿ ತಾರೀಕು 9-7-2012೧೨ರಂದು ಕಾಲೇಜಿನ ಸ್ಥಾಪಕರ ದಿನಾಚರಣೆ, ವಿವಿಧ ಸಂಘಗಳ ಉದ್ಘಾಟನೆ ಮತ್ತು ನವ ಪದವಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಜರಗಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಸ್ಥಾಪಕ ಅಧ್ಯಕ್ಷರಾದ ಶ್ರೀ ಮುಂಡ್ಕೂರು ಬಾಲಕೃಷ್ಣ ಶೆಟ್ಟಿಯವರು ಮಾತನಾಡಿ “ಕಾಲೇಜಿನ ಸ್ಥಾಪಕರಾದ ದಿ| ವಂದನೀಯ ಬರ್ನಾಡ್ ಡಿಸೋಜರು ವಹಿಸಿದ ಶ್ರಮವನ್ನು ಕೊಂಡಾಡಿ, ಸ್ಥಾಪಕರ ಆದರ್ಶಗಳನ್ನು ಅನುಸರಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ, ಕಾಲೇಜಿನ ವಿವಿಧ ಸಂಘಗಳ ಕಾರ್ಯ ಚಟುವಟಿಕೆಗಳ ಉದ್ಘಾಟನೆ, ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವು ಜರುಗಿತು. ಆಕರ್ಷಕ ವಾದ್ಯಗೋಷ್ಠಿಯ ಮೆರವಣಿಗೆಯೊಂದಿಗೆ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪ್ಯಾಟ್ರಿಕ್ ಮಿನೇಜಸ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕ -ರಕ್ಷಕ ಸಂಘದ ಸ್ಥಾಪಕ ಅಧ್ಯಕ್ಷರಾದ ಮುಂಡ್ಕೂರು ಬಾಲಕೃಷ್ಣ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಸಂಚಾಲಕರಾದ ವಂದನೀಯ| ಫಾ| ಪಾವ್ಲ್ ಪಿಂಟೊ ಮುಖ್ಯ ಅತಿಥಿಯಾಗಿದ್ದರು. ಪ್ರೊ| ಯೋಗಿಂದ್ರ.ಬಿ, ಅತಿಥಿಯವರನ್ನು ಪರಿಚಯಿಸಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಮನರಂಜನೆ  ಕಾರ್ಯಕ್ರಮ ನಡೆಸಿಕೊಟ್ಟರು. ಸುಕೇತ್ ಶೆಟ್ಟಿ ಸ್ವಾಗತಿಸಿದರು. ತಾರಾ ಶೆಟ್ಟಿಯವರು ವಂದಿಸಿದರು. ಡೇನಿಯಲ್ ಮೊರಸ್ ಹಾಗೂ ಚಿತ್ರಲೇಖ  ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ತುಳುನಾಡ ಕೃಷಿ ಜನಪದೋತ್ಸವ

News by Narendra Kerekadu Photos by Sunil Haleyangadi ಹಳೆಯಂಗಡಿ : ಬಂಟ್ವಾಳದ ಮೊಗರ್ನಾಡು ಫ್ರೆಂಡ್ಸ್ ತಂಡವು ಹಳೆಯಂಗಡಿ ಬಳಿಯ ಪಾವಂಜೆಯಲ್ಲಿ ನಡೆದ ತುಳುನಾಡ ಕೃಷಿ ಜನಪದೋತ್ಸವ...

Close