ಮುಂಡ್ಕೂರು ಬಿಲ್ಲವ ಸಂಘ – ಪುಸ್ತಕ ವಿತರಣೆ

ಮುಂಡ್ಕೂರು: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಪೊಸ್ರಾಲು-ಮುಲ್ಲಗುಡ್ಡೆ ಇಲ್ಲಿ ಪರಿಸರದ ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳ ವಿತರಣಾ ಕಾರ್ಯಕ್ರಮ ನಡೆಯಿತು. ಮುಂಬೈ ಉದ್ಯಮಿ ದಯಾನಂದ ಪೂಜಾರಿ ಪೆರಿಯಾದಿ ಇವರ ಪ್ರಯೋಜಕತ್ವದಲ್ಲಿ ಸುಮಾರು ಐವತ್ತು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ವಿವಿಧ ಶಾಲೆಯ ಮಕ್ಕಳಿಗೆ ಹಂಚಲಾಯ್ತು. ನಾನಾ ಸಂಘ-ಸಂಸ್ಥೆಗಳಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರ ಬೇಕೆಂದು ಸಂಘದ ಅಧ್ಯಕ್ಷರಾದ ಶ್ರೀಧರ ಸನಿಲ್ ನುಡಿದರು.
ಸಂಘದ ಸ್ಥಾಪಕ ಅಧ್ಯಕ್ಷರಾದ ಮಹಾಬಲ ಪೂಜಾರಿ, ಕ್ಷೇತ್ರ ಅರ್ಚಕ ಕೇಶವ ಅಂಚನ್, ಕೋಶಾಧಿಕಾರಿ ಕೃಷ್ಣ ಸಾಲಿಯಾನ್ ಸಂಕಲಕರಿಯ, ಕಾರ್ಯದರ್ಶಿ ವೆಂಕಟೇಶ್, ಸುಂದರ ಪೂಜಾರಿ, ಹರೀಶ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಐ.ಟಿ.ಐ. ಕಾಲೇಜು ನೌಕರರಿಂದ ಮುಖ್ಯಮಂತ್ರಿಗೆ ಮನವಿ

ಮೂಲ್ಕಿ: ಇತ್ತೀಚೆಗೆ ಬೆಂಗಳೂರಿನಲ್ಲಿ ಜಿಲ್ಲಾ ಖಾಸಗಿ ಐ.ಟಿ.ಐ. ನೌಕರರ ಸಂಘದ ಅಧ್ಯಕ್ಷರಾದ ವೈ.ಎನ್.ಸಾಲಿಯಾನ್ ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳ ನಿಯೋಗವು ಮಾನ್ಯ ವಿಧಾನ ಪರಿಷತ್ತಿನ ಸಭಾಪತಿಗಳಾದ ಡಿ.ಹೆಚ್....

Close