ಕಿನ್ನಿಗೋಳಿ ಕರ್ನಾಟಕ ಪೊಲೀಸ್ ವಾರ್ತೆ ಕಚೇರಿ ಉದ್ಘಾಟನೆ

Photo By: Bhagyawan Sanil
ಕಿನ್ನಿಗೋಳಿ: ಮಾಧ್ಯಮಗಳು ಪ್ರಾಮಾಣಿಕವಾಗಿ ವಸ್ತುನಿಷ್ಠ ವರದಿಗಳನ್ನು ಪ್ರಕಟಿಸಬೇಕಾದ ಅಗತ್ಯತೆ ಇದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಅವರು ಗುರುವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಬೆಂಗಳೂರಿನ ಕರ್ನಾಟಕ ಪೊಲೀಸ್ ವಾರ್ತೆ, ವೆಬ್ ಸೈಟ್ ಸುದ್ದಿ ಜಾಲದ ದ.ಕ ಹಾಗೂ ಉಡುಪಿ ಜಿಲ್ಲೆಗಳ ಸಂಪರ್ಕ ಕಛೇರಿಯ ಉದ್ಘಾಟನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರಿನ ಸಹಾಯಕ ಪೊಲೀಸ್ ಕಮಿಷನರ್ ಪುಟ್ಟ ಮಾದಯ್ಯ ಕಛೇರಿಯನ್ನು ಉದ್ಘಾಟಿಸಿದರು. ಸ್ಥಳೀಯ ಸಂಪಾದಕ ಅನಿಲ್ ಸಾಲಿಯಾನ್, ಬೆಂಗಳೂರಿನ ಸಂಪಾದಕ ಕೆ.ಜೆ ಧನಂಜಯ, ಮಿತ್ರ ಮೀಡಿಯ ಪ್ರೈವೇಟ್ ಲಿಮಿಟಡ್‌ನ ಮೇನೆಜಿಂಗ್ ಡೈರೆಕ್ಟರ್ ಅನುರಾಧ ಎಂ.ಪಡಿಯಾರ್, ಬೆಂಗಳೂರಿನ ಜೋತಿಷಿ ಧನಶೇಖರ್, ಮುಲ್ಕಿ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಬಶೀರ್ ಅಹಮ್ಮದ್, ಯುಗಪುರುಷದ ಭುವನಾಭಿರಾಮ ಉಡುಪ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಮುಂಬೈ ಉದ್ಯಮಿ ಅಶೋಕ್ ಹೆಗ್ಡೆ, ಕಾಪು ಕಲ್ಯಾ ಶ್ರೀಖರ ಶೆಟ್ಟಿ, ಜಿ.ಪಂ ಸದಸ್ಯ ಈಶ್ವರ ಕಟೀಲು, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಲತೀಫ್, ಮತ್ತಿತರರಿದ್ದರು. ಶರತ್ ಶೆಟ್ಟಿ ಸ್ವಾಗತಿಸಿ, ಗುರು ಪ್ರಸಾದ್ ಪ್ರಸ್ತಾವನೆಗೈದರು, ಶ್ರೀನಿವಾಸ್ ವಂದಿಸಿದರು.

Comments

comments

Leave a Reply

Read previous post:
ಕಟೀಲು ಪ್ರೌಢಶಾಲಾ ಶಿಕ್ಷಕ ರಕ್ಷಕ ಸಂಘದ ಮಹಾಸಭೆ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲಾ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಶನಿವಾರ ಶಾಲೆಯಲ್ಲಿ ನಡೆಯಿತು.ಶಿಕ್ಷಕ ರಕ್ಷಕ ಸಂಘದ ನಿರ್ಗಮನ ಅಧ್ಯಕ್ಷ ದೇವಳದ ಅರ್ಚಕ ಹರಿನಾರಾಯಣ ದಾಸ...

Close