ಕಿನ್ನಿಗೋಳಿಯ ಜ್ಯುವಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ

Photo By: Narendra Kerekadu
ಕಿನ್ನಿಗೋಳಿ: ಮುಖ್ಯರಸ್ತೆಯಲ್ಲಿರುವ ಯುಗಪುರುಷ ಕಟ್ಟಡದ ಅನುಗ್ರಹ ಜ್ಯುವೆಲ್ಲರ‍್ಸ್‌ನ ಮುಂಬಾಗಿಲನ್ನು ಹೈಡ್ರಾಲಿಕ್ ಜಾಕ್‌ನ ಮೂಲಕ ಮುರಿದು ಒಳನುಗ್ಗಿದ ಕಳ್ಳರು ಅಂಗಡಿಯ ಒಳಗಿನ ಸೇಫ್ ಲಾಕರ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ.
ಅಂಗಡಿಯ ಒಳಗೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಮೂವರ ತಂಡದಿಂದ ಈ ಕಳ್ಳತನ ನಡೆಸಿರುವ ಬಗ್ಗೆ ದಾಖಲಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸಲು ದಾಖಲೆಯನ್ನು ವಶಪಡಿಸಿಕೊಂಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಇಲಾಖೆಯ ನಾಯಿಯು ಕಿನ್ನಿಗೋಳಿ ಚರ್ಚ್‌ನವರೆಗೆ ಸಾಗಿ ನಿಂತಿದೆ. ಈ ಕಳ್ಳತನವು ಮುಂಜಾನೆ 2ಗಂಟೆಯ ಅವಧಿಯಲ್ಲಿ ನಡೆದಿರುವ ಬಗ್ಗೆ ಸಿಸಿ ಕ್ಯಾಮಾರಾದಲ್ಲಿ ಸೆರೆಹಿಡಿದಿದೆ ಇದೇ ರಸ್ತೆಯಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಎಟಿಎಂನ್ನು ಕಳೆದ ಕೆಲವು ತಿಂಗಳ ಹಿಂದೆ ಲೂಟಿ ಮಾಡಲು ವಿಫಲ ಯತ್ನ ನಡೆಸಿದ್ದರ ಬೆನ್ನಿಗೆ ಸ್ಥಳಿಯ ಜ್ಯುವರೆಲ್ಲರಿ ಮಾಲೀಕರು ಅಂಗಡಿ ಮಾಲೀಕರು ಸಭೆ ನಡೆಸಿ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸುವ ಬಗ್ಗೆ ಯೋಜನೆಯನ್ನು ರೂಪಿಸಿಕೊಂಡಿದ್ದರು.
ಅದರಂತೆ ಯುಗಪುರುಷ ಕಟ್ಟಡದ ಬಳಿ ರಾತ್ರಿ ಪಾಳಿಯದಲ್ಲಿ ವಾಚ್ ಮೆನ್‌ನ್ನು ನೇಮಿಸಿಕೊಂಡು ಸಂಭಳವನ್ನು ಸ್ಥಳಿಯ ಅಂಗಡಿ ಮಾಲೀಕರೇ ನೀಡುತ್ತಿದ್ದರು ನಿನ್ನೆ ಈ ವಾಚ್‌ಮೆನ್‌ಗೆ ಅನಾರೋಗ್ಯ ವಿದ್ದುದರಿಂದ ರಜೆ ಹಾಕಿದ್ದರು. ಇದರ ಲಾಭವನ್ನು ಪಡೆದ ದುಷ್ಟರ್ಮಿಗಳು ಕಳ್ಳತನ ನಡೆಸುವಲ್ಲಿ ಸಫಲರಾಗಿದ್ದು ಸ್ಥಳಿಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಈ ಹಿಂದೆ ಸುರತ್ಕಲ್‌ನ ನಿರ್ಮಲ್ ಜ್ಯುವೆಲ್ಲರ‍್ಸ್, ಹಳೆಯಂಗಡಿಯ ದುರ್ಗಾ ಮತ್ತು ಪದ್ಮಶ್ರೀ ಜ್ಯುವೆಲ್ಲರ‍್ಸ್‌ಗೆ ಇದೇ ರೀತಿ ಹೈಡ್ರಾಲಿಕ್ ಜಾಕ್ ಬಳಸಿ ಕಳ್ಳತನ ನಡೆಸಿರುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಅದರತ್ತ ತನಿಖೆಯನ್ನು ನಡೆಸುತ್ತಿದ್ದಾರೆ.
ಅನುಗ್ರಹ ಜ್ಯುವೆಲ್ಲರ‍್ಸ್ ಮಾಲೀಕ ಪೃಥ್ವಿರಾಜ್ ಆಚಾರ್ಯ ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಶ್ವಾನದಳ, ಬೆರಳಚ್ಚು ತಜ್ಷರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಪಣಂಬೂರು ಎಸಿಪಿ ಪುಟ್ಟಮಾದಯ್ಯ ಮೂಲ್ಕಿ ವೃತ್ತ ನಿರೀಕ್ಷಕ ಬಶೀರ್ ಅಹ್ಮದ್ ಸಬ್‌ಇನ್ಸ್‌ಪೆಕ್ಟರ್ ಸುನಿಲ್ ಪಾಟಿಲ್ ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

Comments

comments

Leave a Reply

Read previous post:
ಕಿನ್ನಿಗೋಳಿ ಕರ್ನಾಟಕ ಪೊಲೀಸ್ ವಾರ್ತೆ ಕಚೇರಿ ಉದ್ಘಾಟನೆ

Photo By: Bhagyawan Sanil ಕಿನ್ನಿಗೋಳಿ: ಮಾಧ್ಯಮಗಳು ಪ್ರಾಮಾಣಿಕವಾಗಿ ವಸ್ತುನಿಷ್ಠ ವರದಿಗಳನ್ನು ಪ್ರಕಟಿಸಬೇಕಾದ ಅಗತ್ಯತೆ ಇದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಅವರು ಗುರುವಾರ ಕಿನ್ನಿಗೋಳಿಯ...

Close