ವಿಜಯ ಕಾಲೇಜಿನ ಸುವರ್ಣ ಮಹೋತ್ಸವ

Photo By: Narendra Kerekadu

ಮೂಲ್ಕಿ: ನಾನು ಸ್ವತಃ ರಾಜಕಾರಣಿಯಾಗಿದ್ದು ಹೇಳುತ್ತೇನೆ ಈಗಿನ ರಾಜಕಾರಣಿಗಳಲ್ಲಿ ಶೇಕಡಾ 90 ದರೋಡೆಕೋರರು ಸುಳ್ಳರು ಅವರೆಂದಿಗೂ ಯುವ ಪೀಳಿಗೆಗೆ ಮಾದರಿಯಲ್ಲ ಈ ಮಾತನ್ನು ಹೇಳಿದವರು ಬೆಳ್ತಂಗಡಿಯ ಶಾಸಕ ಶ್ರೀ ವಸಂತ ಬಂಗೇರರು. ಅವರು ಮುಲ್ಕಿಯ ವಿಜಯ ಕಾಲೇಜು 1962-63 ರಲ್ಲಿ ಪ್ರಾರಂಭವಾದ ಮೊದಲ ವರ್ಷದ ವಿದ್ಯಾರ್ಥಿ ಆಗಿದ್ದವರು.

ಬುಧವಾರ ವಿಜಯ ಕಾಲೇಜಿನ 2012-13ನೇ ಸಾಲಿನ ವಿದ್ಯಾರ್ಥಿ ಸಂಘದ ಚಟುವಟಿಕೆಗಳ ಉದ್ಘಾಟನಾ ಭಾಷಣ ಮಾಡುತ್ತ ಅವರು ನಾಯಕರಾಗುವುದು ಮುಖ್ಯ ಅಲ್ಲ ನಾಯಕರಾದ ಮೇಲೆ ಏನು ಮಾಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ನೀವು ಮಾಡಿದ ಕಾರ್ಯಕ್ರಮಗಳು ಮುಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದ ಅವರು ಈ ವರ್ಷ ವಿಜಯ ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಶಾಸಕನಾಗಿ ನಾನು 5 ಲಕ್ಷ ಸಹಾಯಧನ ನೀಡುವ ಭರವಸೆ ನೀಡುತ್ತೇನೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ| ಎಂ. ಆರ್. ಕುಡ್ವ ವಹಿಸಿದ್ದರು. ವಿಜಯ ಕಾಲೇಜಿನ ಪ್ರಾಂಶುಪಾಲ ಪ್ರೊ ಕೆ. ಅರ್. ಶಂಕರ್ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ ಪಮೀದ ಬೇಗಂ, ಸಂಘಗಳ ಕಾರ್ಯದರ್ಶಿಗಳಾದ ಹರಿಕೃಪ ಭಂಡಾರಿ ಆರ್, ಜ್ಯೋತಿ ಪ್ರಭು, ಉಮೀರ ಭಾನು, ಪೃಥ್ವಿ, ನಾಗರಾಜ, ಸ್ವಾತಿ, ಸುನೀಲ್ ಕಾಮತ್, ಅಮಿತ್ ಪೈ, ದುರ್ಗಾಗಣೇಶ್ ಕೆ.ವಿ., ನಿಚ್ಚಿತ್ ಡಿ ಕೋಟ್ಯಾನ್, ಶೋಧನ್ ಯು ಶೆಟ್ಟಿ, ರವೀಂದ್ರ ನಾಯಕ್ ಎನ್. ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ನಾರಾಯಣ್ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞೆ ಬೋಧಿಸಿದರು. ಸಾಹಿತ್ಯ ಸಂಘದ ಕಾರ್ಯದರ್ಶಿ ಉಮೀರ ಬೇಗಂ ಮುಖ್ಯ ಅತಿಥಿಗಳಾದ ಶ್ರೀ ವಸಂತ ಬಂಗೇರರ ಪರಿಚಯ ಮಾಡಿದರು.

ವಿದ್ಯಾರ್ಥಿ ನಾಯಕ ಶ್ರೀ ಅಮಿತ್ ಪೈ, ಅಂತಿಮ ಬಿ.ಕಾಂ ಸ್ವಾಗತ ಭಾಷಣ ಮಾಡಿ ಇಡೀ ವರ್ಷ ವಿವಿಧ ಸಂಘಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಪಕ್ಷಿ ನೋಟ ನೀಡಿದರು. ಅಂತಿಮ ಬಿ.ಎಸ್ಸಿಯ ಸಂಗೀತ ಮತ್ತು ಕಾರ್ತಿಕ್ ಕಾರ್ಯಕ್ರಮ ನಿರ್ವಹಿಸಿದರು. ಅಂತಿಮ ಬಿ.ಎಸ್ಸಿ.ಯ ಜ್ಯೋತಿ ಪ್ರಭು ಧನ್ಯವಾದ ಸಮರ್ಪಣೆ ಮಾಡಿದರು.

Comments

comments

Leave a Reply

Read previous post:
ಮುಂಡ್ಕೂರು ಬಿಲ್ಲವ ಸಂಘ – ಪುಸ್ತಕ ವಿತರಣೆ

ಮುಂಡ್ಕೂರು: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಪೊಸ್ರಾಲು-ಮುಲ್ಲಗುಡ್ಡೆ ಇಲ್ಲಿ ಪರಿಸರದ ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳ ವಿತರಣಾ ಕಾರ್ಯಕ್ರಮ...

Close