ಕಲ್ಲಮುಂಡ್ಕೂರು ಬಿಲ್ಲವರ ಸೇವಾ ಸಮಾಜ ಸಂಘ(ರಿ) ಜೀರ್ಣೋದ್ಧಾರ ಸಮಿತಿ

ಕಿನ್ನಿಗೋಳಿ: ಕಲ್ಲಮುಂಡ್ಕೂರು, ಬಿಲ್ಲವರ ಸೇವಾ ಸಮಾಜ ಸಂಘ(ರಿ) ಇದರ ಮಹಾಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಸದಾನಂದ ಪೂಜಾರಿ, ಅಧ್ಯಕ್ಷ ಗಂಗಾಧರ ಕೆ. ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಗುರು ಮಂದಿರದ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸುಭಾಷ್ ಚಂದ್ರ ಮಿತ್ತುಂಜೆ ಆಯ್ಕೆಯಾದರು. ಗೌರವಾಧ್ಯಕ್ಷ ಎಂ.ವಿ.ಕರ್ಕೇರ ಮಾಣಿಲ, ಸುಂದರ ಬಂಗೇರ ನಲ್ಕೆಮಾರ್, ಪ್ರಧಾನ ಕಾರ್ಯದರ್ಶಿ ಸುಧಾಕರ ಪೂಜಾರಿ ತೊಡಂಕಿಲ, ಜೊತೆ ಕಾರ್ಯದರ್ಶಿ ಕರುಣಾಕರ ಸುವರ್ಣ ಉಲ್ಲೊಟ್ಟು, ಕೋಶಾಧಿಕಾರಿ ಸುಂದರ ಪೂಜಾರಿ ಕೋಂಕೆ, ಸಂಘಟನಾ ಕಾರ್ಯದರ್ಶಿಗಳಾಗಿ ಸಂದೀಪ್ ಸಾಲಿಯಾನ್ ಕುತ್ತಟ್ಟ, ಸುಕುಮಾರ್ ಸನಿಲ್ ಕುದ್ರಿಪದವು, ಹಾಗೂ ಮಹಿಳಾ ಘಟಕ ಗೌರವಾಧ್ಯಕ್ಷರಾಗಿ ಭವ್ಯ ಗಂಗಾಧರ್, ಅಧ್ಯಕ್ಷರಾಗಿ ಗೀತಾ ಅಮೀನ್, ಕಾರ್ಯದರ್ಶಿಯಾಗಿ ವನಿತಾ ಗಣೇಶ್, ಆಯ್ಕೆಯಾದರು. ಅಲ್ಲದೆ ಉಪಾಧ್ಯಾಕ್ಷರುಗಳು, ಸಲಹೆಗಾರರು, ಕರೆ ಮುಖ್ಯಸ್ಥರು, ಹಾಗೂ ಕಾರ್ಯಕಾರಿ ಸಮಿತಿ ಮತ್ತು ಮುಂಬೈ ಸಮಿತಿ ರಚಿಸಲಾಯಿತು.

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಿ ಶಾಲೆಯಲ್ಲಿ ವನಮಹೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ, ರೋಟರಾಕ್ಟ್, ಇನ್ನರ್ ವೀಲ್ ಇಂಟರಾಕ್ಟ್ ಸಂಸ್ಥೆಯ ಸಂಸ್ಥೆಗಳ ಆಸರೆಯಲ್ಲಿ ವನಮಹೋತ್ಸವ ರೋಟರಿ ಶಾಲೆಯಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ,...

Close