ಕಲ್ಲಮುಂಡ್ಕೂರು ನಾರಾಯಣ ಗುರು ಮಂದಿರಕ್ಕೆ ಶಿಲಾನ್ಯಾಸ- 5 ಲಕ್ಷ ಅನುದಾನ ಆಭಯಚಂದ್ರ ಜೈನ್

ಕಲ್ಲಮುಂಡ್ಕೂರು: ಬಿಲ್ಲವರ ಸಮಾಜ ಸೇವಾ ಸಂಘದ ನೂತನ ಗುರು ಮಂದಿರದ ಶಿಲಾನ್ಯಾಸ ಕಲ್ಲಮುಂಡ್ಕೂರಿನಲ್ಲಿ ಶ್ರೀ ಕ್ಷೇತ್ರ ದೈಲಬೆಟ್ಟಿನ ಅರ್ಚಕರಾದ ಶ್ರೀಧರ ಭಟ್ ರವರ ನೇತೃತ್ವದಲ್ಲಿ ನಡೆಯಿತು. ಶಿಲಾನ್ಯಾಸವನ್ನು ಸ್ಥಳದಾನಿಗಳೂ, ಶ್ರೀ ಕ್ಷೇತ್ರ ದೈಲಬೆಟ್ಟಿನ ಆಡಳಿತ ಮೂಕ್ತೇಸರರಾದ ಸುಭಾಶ್ಚಂದ್ರಪಡಿವಾಳ್, ಶಾಸಕ, ಮುಖ್ಯ ಸಚೇತಕರಾದ ಕೆ.ಅಭಯ ಚಂದ್ರ ಜೈನ್, ಊರಿನ ಹಿರಿಯರಾದ ದೂಜ ಅಂಚನ್ ಪೈಯೊಟ್ಟು ಭೋಜ ಪೂಜಾರಿ, ಹಾಗೂ ಕುಮಾರ್ ತೊಡಂಕಿಲ, ಸಂಘದ ಆಡಳಿತ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಸಕ ಕೆ.ಅಭಯ ಚಂದ್ರ ಜೈನ್ ತನ್ನ ಅನುಧಾನದಲ್ಲಿ ಶ್ರೀ ನಾರಾಯಣಗುರು ಸಮುದಾಯ ಭವನಕ್ಕೆ ರೂ.5 ಲಕ್ಷ ಮತ್ತು ರಾಜ್ಯ ಸಭಾಸದಸ್ಯ ಆಸ್ಕರ್ ಫೆರ್ನಾಂಡೀಸ್ ರವರ ಅನುದಾನ 5 ಲಕ್ಷ ಒದಗಿಸಿ ಕೊಡುವುದಾಗಿ ಹೇಳಿದರು. ಸಭಾಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಭವ್ಯ ಗಂಗಾಧರ್, ಗ್ರಾ.ಪಂ.ಅಧ್ಯಕ್ಷೆ ಗೀತಾ ಎಚ್ ಅಮೀನ್, ಪಂ. ಉಪಾಧ್ಯಾಕ್ಷರಾದ ಜೋಕಿಂ ಕೊರೆಯಾ, ಉದ್ಯಮಿ ಸರ್ವೇಶ್ ಶೆಟ್ಟಿ, ಪುಟ್ಟಣ್ಣ ಮಾಸ್ಟರ್, ಚಂದಯ್ಯ ಸುವರ್ಣ, ಬಿಲ್ಲವ ಸಂಘದ ಅಧ್ಯಕ್ಷರಾದ ಗಂಗಾಧರ ಕೆ, ಗೌರವಾಧ್ಯಕ್ಷರಾದ ಸದಾನಂದ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಸುಂದರ ಬಂಗೇರ, ಅಧ್ಯಕ್ಷರಾದ ಸುಭಾಶ್ಚಂದ್ರ ಮಿತ್ತುಂಜೆ, ಪ್ರಧಾನ ಕಾರ್ಯದರ್ಶಿ ಸುಧಾಕರ ಪೂಜಾರಿ ತೊಡಂಕಿಲ, ಹಾಗೂ ಮಹಿಳಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಾಲಕೃಷ್ಣ ವಂದಿಸಿ, ವಾಸುದೇವ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಲ್ಲಮುಂಡ್ಕೂರು ಬಿಲ್ಲವರ ಸೇವಾ ಸಮಾಜ ಸಂಘ(ರಿ) ಜೀರ್ಣೋದ್ಧಾರ ಸಮಿತಿ

ಕಿನ್ನಿಗೋಳಿ: ಕಲ್ಲಮುಂಡ್ಕೂರು, ಬಿಲ್ಲವರ ಸೇವಾ ಸಮಾಜ ಸಂಘ(ರಿ) ಇದರ ಮಹಾಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಸದಾನಂದ ಪೂಜಾರಿ, ಅಧ್ಯಕ್ಷ ಗಂಗಾಧರ ಕೆ. ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಗುರು ಮಂದಿರದ ಜೀರ್ಣೋದ್ಧಾರ...

Close