ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಪದಗ್ರಹಣ

ಕಿನ್ನಿಗೋಳಿ ; ಸೇವಾಚಟುವಟಿಕೆಗಳಲ್ಲಿ ಮಹಿಳೆಯರು ತಮ್ಮನ್ನು ಅಧಿಕವಾಗಿ ತೊಡಗಿಸಿಕೊಳ್ಳಬೇಕಾಗಿದೆಯೆಂದು ಅಮ್ರತ ಮಹಾವಿದ್ಯಾಲಯದ ಸ್ಥಾಪಕಾಧ್ಯಕ್ಷೆ ಚಂದ್ರಕಲಾ.ಜಿ ಭಟ್ ಹೇಳಿದರು. ಅವರು ರವಿವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಇನ್ನರ್ ವೀಲ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನೂತನ ಅಧ್ಯಕ್ಷೆ ಮಮತಾ ಶೆಟ್ಟಿ, ಕಾರ್ಯದರ್ಶಿ ಸಿಂಥಿಯಾ ಕುಟಿನ್ನೋರವರ ತಂಡಕ್ಕೆ ಪದವಿ ಪ್ರಧಾನ ಮಾಡಲಾಯಿತು.ರೋಟರಿ ಅಧ್ಯಕ್ಷ ಬಾಲಕ್ರಷ್ಣ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.ಇನ್ನರ್ ವೀಲ್ ನ ಮುಖವಾಣಿ ಕಾರಂಜಿಯ ಬಿಡುಗಡೆ,ಎಸ್.ಕೋಡಿಯ ಸ್ವಾತಿಯವರಿಗೆ ಶ್ರವಣ ಸಾಧನಖರೀದಿಗೆ ಧನ ಸಹಾಯ, ಕೆಮ್ಮಡೆಯ ನಾರಾಯಣ ರವರಿಗೆ ಚಿಕಿತ್ಸೆಗೆ ಸಹಾಯ, ಕಮ್ಮಜೆಯ ವಿದ್ಯಾರ್ಥಿಗೆ ಕಲಿಕೆಗೆ ಧನಸಹಾಯ, ಕುದ್ರಿಪದವು ಅಂಗನವಾಡಿಗೆ ಚೇರ್ ಕೊಡುಗೆ . ಎಸ್.ಎಸ್.ಲ್.ಸಿ ಯಲ್ಲಿ ತಾಲೂಕಿಗೆ ಗರಿಷ್ಟ ಅಂಕ ಗಳಿಸಿದ ಏರಲ್ ರೊಸಾರಿಯೋ ರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತರಾದ ನಾಗರಾಜ ಶೆಣೈ, ಜೇಸನ್ ಮಿನೇಜಸ್ ರನ್ನು ಗೌರವಿಸಲಾಯಿತು.ರಂಜಿತಾಶೆಟ್ಟಿಯವರನ್ನು ನೂತನ ಸದಸ್ಯೆ ಯಾಗಿ ಸೇರ್ಪಡೆಗೊಳಿಸಲಾಯಿತು. ನಿರ್ಗಮನಾದ್ಯಕ್ಷೆ ಜಾನೆಟ್ ರೊಸಾರಿಯೋ, ಕಾರ್ಯದರ್ಶಿ ಲತಾಕ್ರಷ್ಣ ಉಪಸ್ಥಿತರಿದ್ದರು. ಸವಿತಾ ಶೆಟ್ಟಿ, ಪ್ರೀತಿ ಶೆಟ್ಟಿ, ರೇಷ್ಮಾಶೆಟ್ಟಿ ಪ್ರಾರ್ಥಿಸಿ,ಶಾಲೆಟ್ ಪಿಂಟೋ ಸಂದೇಶ ವಾಚಿಸಿದರು. ಜಾನೆಟ್ ಮಿನೇಜಸ್ ಅತಿಥಿ ಪರಿಚಯ, ರಾಧಾ ಶೆಣೈ ನೂತನ ಅಧ್ಯಕ್ಷೆ, ಕಾರ್ಯದರ್ಶಿಯ ಪರಿಚಯ ನೀಡಿದರು. ವೀಣಾ .ಬಿ ಶೆಟ್ಟಿ ವಂದಿಸಿ, ಸ್ಥಾಪಕಾಧ್ಯಕ್ಷೆ ಸುಧಾ .ವಿ ಉಡುಪ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಲ್ಲಮುಂಡ್ಕೂರು ನಾರಾಯಣ ಗುರು ಮಂದಿರಕ್ಕೆ ಶಿಲಾನ್ಯಾಸ- 5 ಲಕ್ಷ ಅನುದಾನ ಆಭಯಚಂದ್ರ ಜೈನ್

ಕಲ್ಲಮುಂಡ್ಕೂರು: ಬಿಲ್ಲವರ ಸಮಾಜ ಸೇವಾ ಸಂಘದ ನೂತನ ಗುರು ಮಂದಿರದ ಶಿಲಾನ್ಯಾಸ ಕಲ್ಲಮುಂಡ್ಕೂರಿನಲ್ಲಿ ಶ್ರೀ ಕ್ಷೇತ್ರ ದೈಲಬೆಟ್ಟಿನ ಅರ್ಚಕರಾದ ಶ್ರೀಧರ ಭಟ್ ರವರ ನೇತೃತ್ವದಲ್ಲಿ ನಡೆಯಿತು. ಶಿಲಾನ್ಯಾಸವನ್ನು...

Close