ಕಿನ್ನಿಗೋಳಿ ಕಾಳಿಕಾಂಭ ಮಹಿಳಾ ವೃಂದದಿಂದ ಆಟಿ ಆಚರಣೆ

ಕಿನ್ನಿಗೋಳಿ : ಕಾಳಿಕಾಂಭ ಮಹಿಳಾ ವೃಂದದ ನೇತೃತ್ವದಲ್ಲಿ ಆಟಿ ದಿನಾಚರಣೆ ಶನಿವಾರ ರಾಜರತ್ನಪುರದ ಸರಾಫ್ ಅಣ್ಣಯ್ಯಾಚಾರ್ ಸಭಾಭವನದಲ್ಲಿ ನಡೆಯಿತು. ಸುರತ್ಕಲ್ ಗೋವಿಂದ ದಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಆಟಿ ದಿನಾಚರಣೆಯ ಕುರಿತು ಮಾತನಾಡಿ, ಹಳೆಯ ಪದ್ಧತಿಗಳನ್ನು, ಆಚರಣೆಗಳನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ತರವಾಗಿದ್ದು ಮಕ್ಕಳಲ್ಲಿ ಈ ಕುರಿತು ಜಾಗ್ರತಿ ಮೂಡಿಸಬೇಕಾದ ಅಗತ್ಯವಿದೆ ಎಂದರು. ಮಹಿಳಾ ವೃಂದದ ಅಧ್ಯಕ್ಷೆ ರತ್ನಾ ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ, ಮತ್ತಿತರರಿದ್ದರು.

+

Comments

comments

Leave a Reply

Read previous post:
ಯುಗಪುರುಷ ಪ್ರಕಟಣಾಲಯದ ಐದು ನೂತನ ಕೃತಿಗಳ ಬಿಡುಗಡೆ

  ಕಿನ್ನಿಗೋಳಿ : ಸುಮಾರು 480ಕ್ಕೂ ಮಿಕ್ಕಿ ಕೃತಿಗಳನ್ನು ಸಾಹಿತ್ಯಿಕ ಲೋಕಕ್ಕೆ ಅರ್ಪಿಸಿರುವ ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ನೂತನ ಐದು ಕೃತಿಗಳಾದ ಶ್ರೀ ಎಂ. ವಿ. ಭಟ್...

Close