ಕಿನ್ನಿಗೋಳಿಯಲ್ಲಿ ನೀನಾಸಂ ಮುಖ್ಯಸ್ಥರಿಗೆ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿಯ ಯುಗಪುರುಷದ ನೇತ್ರತ್ವದಲ್ಲಿ ವಿಜಯ ಕಲಾವಿದರು ಹಾಗೂ ರೋಟರಾಕ್ಟ್ ಸಂಸ್ಥೆಗಳ ಸಹಯೋಗದಲ್ಲಿ ಸಾಗರದ ಹೆಗ್ಗೋಡುವಿನ ಜನಮನದಾಟ ಸಂಸ್ಥೆಯವರಿಂದ ರೇವತಿಯವರ ಬದುಕು ಬಯಲು ಆಧಾರಿತ ಕನ್ನಡ ನಾಟಕ “ನಡುವೆ ಸುಳಿವಾತ್ಮನ ಬದುಕು ಬಯಲು” ನಾಟಕ ಪ್ರದರ್ಶನ ಮಂಗಳವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಇದೇ ಸಂದರ್ಭ ತಂಡದ ಮುಖ್ಯಸ್ಥ ಗಣೇಶ್ ರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಗಣೇಶ್ ಮಾತನಡಿ,ರಂಗ ಭೂಮಿ ಒಂದು ಚಳುವಳಿಯಾಗ ಬೇಕಾಗಿದೆಯೆಂದರು.ಯುಗಪುರುಷದ ಭುವನಾಭಿರಾಮ ಉಡುಪ,ಹರಿಕ್ರಷ್ಣ ಪುನರೂರು,ಸಾಹಿತಿ ಎಮ್.ಜೆ ರಾವ್, ಕಟೀಲು ಕಾಲೇಜು ಪ್ರಾಚಾರ್ಯ ಎಮ್ ಬಾಲಕೃಷ್ಣ ಶೆಟ್ಟಿ,ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕಂಚನಕೆರೆ,ವಿಜಯಾ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಕಟೀಲು ಪ್ರೌಢ ಶಾಲಾ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು

ಕಟೀಲು : ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳ ಪ್ರೌಢ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಮರವೂರು ಬೀಡು ಬಾಬು ಶೆಟ್ಟಿ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳು: ಉಪಾಧ್ಯಕ್ಷರು: ಶಶಾಂಕ ಕೋಟ್ಯಾನ್,...

Close