ಯುಗಪುರುಷ ಪ್ರಕಟಣಾಲಯದ ಐದು ನೂತನ ಕೃತಿಗಳ ಬಿಡುಗಡೆ

 

ಕಿನ್ನಿಗೋಳಿ : ಸುಮಾರು 480ಕ್ಕೂ ಮಿಕ್ಕಿ ಕೃತಿಗಳನ್ನು ಸಾಹಿತ್ಯಿಕ ಲೋಕಕ್ಕೆ ಅರ್ಪಿಸಿರುವ ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ನೂತನ ಐದು ಕೃತಿಗಳಾದ ಶ್ರೀ ಎಂ. ವಿ. ಭಟ್ ರಚಿತ “ಸಂಪಾದಕರಿಗೆ ಪತ್ರಗಳು” ಹಾಗೂ “ದೇಶದ ಇಂದಿನ ಸ್ಥಿತಿಗತಿ”, ಶ್ರೀಧರ ಡಿ. ಎಸ್. ರಚಿತ “ಬಸ್ಸು ಜಟಕಾ ಬಂಡಿ”, ಶ್ರೀ ಕ. ಲಿ. ರೈ ರಚಿತ “ಮುಗುಳ್ನಗುವ ಕಡೆತಗಳು”, ಶ್ರೀ ಆದಿತ್ಯಪ್ರಸಾದ ಪಾಂಡೇಲು ರಚಿತ “ಚಂದ್ರಯಾನ” ಈ ಕೃತಿಗಳನ್ನು ಇದೇ ಜುಲೈ 24ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರಗಲಿರುವ ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಗುವುದು.

ಕೃತಿಗಳನ್ನು ನಳಿನ್‌ಕುಮಾರ್ ಕಟೀಲ್‌ರವರ ಅಧ್ಯಕ್ಷತೆಯಲ್ಲಿ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಶಾಸಕರಾದ ಅಭಯಚಂದ್ರ ಜೈನ್, ಉದಯವಾಣಿಯ ಸಹ ಉಪಾಧ್ಯಕ್ಷ ಆನಂದ್, ದೈಜೀವರ್ಲ್ಡ್ ವಾರಪತ್ರಿಕೆಯ ಪ್ರಧಾನ ಸಂಪಾದಕ ಹೇಮಾಚಾರ್ಯ, ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿಯವರ ಉಪಸ್ಥಿತಿಯಲ್ಲಿ ಹರಿಕೃಷ್ಣ ಪುನರೂರು ಹಾಗೂ ಕೆ.ಜಿ.ಮಲ್ಯರವರು ಬಿಡುಗಡೆಗೊಳಿಸಲಿರುವರೆಂದು ಯುಗಪುರುಷದ ಪ್ರಧಾನ ಸಂಪಾದಕ, ಪ್ರಕಾಶಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Comments

comments

Leave a Reply

Read previous post:
ಕಿನ್ನಿಗೋಳಿ ಲಯನ್ಸ್ ಪದಗ್ರಹಣ

Photo by Raghunath Kamath ಕಿನ್ನಿಗೋಳಿ;ಕಿನ್ನಿಗೋಳಿ ಲಯನ್ಸ್ ಮತ್ತು ಲಯನೆಸ್ ಸಂಸ್ಥೆಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರವಿವಾರ ಸಹಕಾರ ಸೌಧದಲ್ಲಿ ನಡೆಯಿತು. ಲಯನ್ಸ್ ನ ನೂತನ...

Close